
ತಿ.ನರಸೀಪುರ: ಮಾ.10:- ತಾಲೂಕಿನ ತಲಕಾಡು ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷೆಯ ಪಂಚರತ್ನ ಯಾತ್ರೆಯ ಪೂರ್ವಸಿದ್ಧತೆ ಸಭೆ ಶಾಸಕ ಎಂ.ಅಶ್ವಿನ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಇಲ್ಲಿನ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇದೇ 19ರಂದು ತಾಲೂಕಿನ ಮಡವಾಡಿ ಗ್ರಾಮದಿಂದ ಆರಂಭಗೊಳ್ಳಲಿರುವ ಪಂಚರತ್ನ ಯಾತ್ರೆಯ ಬಗ್ಗೆ ಶಾಸಕರು ಜೆಡಿಎಸ್ ಕಾರ್ಯಕರ್ತರ ಜೊತೆ ವಿಸ್ತೃತ ಚರ್ಚೆ ನಡೆಸಿದರು.
ಮೊದಲನೇ ಹಂತದ ಪಂಚರತ್ನ ಯಾತ್ರೆಯು ಮಡವಾಡಿ ಗ್ರಾಮದಿಂದ ಆರಂಭಗೊಳ್ಳಲಿದ್ದು, ಮಾರ್ಗಮಧ್ಯ ಹೊಳೆಸಾಲು, ತಲಕಾಡು, ಹೆಮ್ಮಿಗೆ, ಮಾದಾಪುರ ಮತ್ತು ವಾಟಾಳು ಗ್ರಾಮಗಳಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕ್ಷೇತ್ರದ ಜನತೆಯನ್ನು ಉದ್ದೇಶಿಸಿ ಮಾತನಾಡುವರು.
ಈ ಬಗ್ಗೆ ಮಾತನಾಡಿದ ಶಾಸಕರು,ನಮ್ಮ ಪಕ್ಷದ ವರಿಷ್ಠರನ್ನು ಸ್ವಾಗತಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರುವಂತೆ ಮನವಿ ಮಾಡಿದರು.ಅಲ್ಲದೆ ಯಾತ್ರೆಯನ್ನು ಯಶಸ್ವಿಗೊಳಿಸುವುದು ಕ್ಷೇತ್ರದ ಪ್ರತಿಯೊಬ್ಬ ಜೆಡಿಎಸ್ ಕಾರ್ಯಕರ್ತನ ಹೊಣೆ ಎಂದರು.
ಜೆಡಿಎಸ್ ಕಾರ್ಯಕರ್ತರು ಹೃದಯ ವೈಶಾಲ್ಯವುಳ್ಳವರು.ನಮ್ಮ ಕಾರ್ಯಕರ್ತರು ಇಂತಹ ವ್ಯಕ್ತಿಗಳಿಗೆ ಕೆಲಸ ಮಾಡುವಂತೆ ನನಗೆ ನಿರ್ಬಂಧ ಏರಲಿಲ್ಲ .ಹಾಗಾಗಿ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಿದ್ದರ ಪರಿಣಾಮ ಇಂದು ಸರ್ವ ಪಕ್ಷದ ಕಾರ್ಯಕರ್ತರ ಅಭಿಮಾನಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು.
ಕಾರ್ಯಕ್ರಮದ ಮಧ್ಯೆ 50ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸಿ. ಬಿ.ಹುಂಡಿ ಚಿನ್ನಸ್ವಾಮಿ,ಮಾಜಿ ಜಿ.ಪಂ ಸದಸ್ಯ ಜಯಪಾಲಭರಣಿ, ಶಿವಮೂರ್ತಿ,ಯಜಮಾನ್ ಜೆ.ರಾಜು ,ಕಟ್ಟೆಪುರ ಸಿದ್ದಪ್ಪ,ತಲಕಾಡು ಸತೀಶ್,ಹೆಮ್ಮಿಗೆ ಹೊನ್ನಯ್ಯ,ತಲಕಾಡು ಗ್ರಾ .ಪಂ .ಮಾಜಿ ಅಧ್ಯಕ್ಷೆ ಯಶೋಧಮ್ಮ,ಶಂ ಭುದೇವಪುರ ರಮೇಶ್, ಹೊಸ ಕುಕ್ಕೂರು ಉಮಾಪತಿ,ಲೋಕೇಶ, ಚಿಕ್ಕಣ್ಣ, ಹಿರಿಯೂರು ಪ್ರಕಾಶ,ನಿಲಸೋಗೆ ಮಹೇಶ,ದೊಡ್ಡಮಾದ ನಾಯಕ, ಕುಕ್ಕೂರುಪ್ರಭು,ನರಸಮ್ಮ,ಗ್ರಾ ಪಂ ಸದಸ್ಯ ನಂಜಮಣ್ಣಿ,ಹಸ್ತಿಕೇರಿ ನಾಗರಾಜು,ಅರುಣ್, ಅಜ್ಮಲ್,ಸುನೀತಾ,ನರಸಿಂಹ,ರಘು,ತಾಲ್ಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಗೊರವನಹಳ್ಳಿ ನಾಗರಾಜು ಇತರರು ಇದ್ದರು.