ಶಾಸಕರಿಂದ ನದಿಗೆ ಬಾಗೀನ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.16:  ತಾಲೂಕಿನ ಕೆಂಚನಗುಡ್ಡದ ಹತ್ತಿರದ ತುಂಗಭದ್ರಾ ನದಿಗೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ಭಾಗಿನ ಅರ್ಪಿಸಿದರು.
 ನಂತರ ಸುದ್ದಿಗಾರೊಂದಿಗೆ ಮಾತನಾಡಿ ಸಕಾಲದಲ್ಲಿ ಮುಂಗಾರು ಮಳೆ ಬೀಳುತ್ತಿದ್ದು, ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಹರಿಯುವು ಬರುತ್ತಿದ್ದು,  ಈ ಬಾರಿ ಬೆಳೆಯು ಉತ್ತಮವಾಗಿ ಬರಲಿದೆ, ಇದರಿಂದ ತಾಲೂಕಿನ ರೈತರಲ್ಲಿ ಮಂದಾಹಸ ಮೂಡಿದರಿಂದ ಎಲ್ಲರೂ ನೆಮ್ಮದಿ ಇರಲು ಸಾಧ್ಯವಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ಸೇರಿದಂತೆ ತಾಲೂಕಿನ ಎಲ್ಲಾ ಅಧಿಕಾರಿಗಳು ಇದ್ದರು