ಶಾಸಕರಿಂದ ಜನಸ್ಪಂದನಾ ಕಾರ್ಯಕ್ರಮ


ಸಿಂಧನೂರು.ಅ.೦೨- ತಾಲೂಕಿನ ಗೋರೆಬಾಳ, ಗಾಂಧಿನಗರ, ಜಾಲಿಹಾಳ, ಕೆ.ಬಸಾಪುರ ಗ್ರಾಮ ಪಂಚಾಯತಿ ಗಳಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಅವರ ಎರಡು ದಿನಗಳ ಕಾಲ ಜನಸ್ಪಂದನಾ ಕಾರ್ಯಕ್ರಮ ಇರುವುದರಿಂದ ಸಂಬಂಧಿಸಿದ ತಾಲುಕ ಮಟ್ಟದ ಅಧಿಕಾರಿಗಳು ಹಾಗೂ ಪಿಡಿಒ ಗಳು ಅಗತ್ಯ ಮಾಹಿತಿಗಳೊಂದಿಗೆ ಕಾರ್ಯಕ್ರಮದಲ್ಲಿ ಹಾಜರಿರಬೇಕು ಎಂದು ತಾಲುಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಅಕ್ಟೋಬರ್ ೩ (ಮಂಗಳವಾರ) ರಂದು ಕ್ರಮವಾಗಿ ಗೋರೆಬಾಳ ,ಜಾಲಿಹಾಳ ,ಗಾಂಧಿನಗರ ಪಂಚಾಯತಿ ಗಳಲ್ಲಿನ ಹಳ್ಳಿಗಳು ಹಾಗೂ ಅಕ್ಟೋಬರ್ ೪(ಬುದುವಾರ) ದಂದು ಬಸಾಪುರ ಕೆ. ಗ್ರಾಮ ಪಂಚಾಯತಿ ಹಳ್ಳಿಗಳು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆ ವರೆಗೆ ಎರಡು ದಿನಗಳ ಕಾಲ ನಿರಂತರವಾಗಿ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಂಬಂಧಿಸಿದ ತಾಲೂಕ ಮಟ್ಟದ ಅಧಿಕಾರಿಗಳು ಹಾಗೂ ಆಯಾ ಗ್ರಾಮ ಪಂಚಾಯತಿ ಪಿಡಿಒಗಳು ಕಡ್ಡಾಯವಾಗಿ ನಿಗಧಿತ ಸಮಯದೊಂದಿಗೆ ತಮ್ಮ ಇಲಾಖೆಯ ಅಗತ್ಯ ಮಾಹಿತಿಗಳೊಂದಿಗೆ ಕಾರ್ಯಕ್ರಮದಲ್ಲಿ ಹಾಜರಿರಬೇಕು ಎಂದು ತಾಲೂಕ ಪಂಚಾಯತಿ ಇ.ಒ ಚಂದ್ರಶೇಖರ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದರು.