ಶಾಸಕರಿಂದ ಗೋಪೂಜೆ


ಶಿರಹಟ್ಟಿ,ನ.8 ಪಟ್ಟಣದ ಗ್ರಾಮದೇವತೆ ದೇವಸ್ಥಾನದಲ್ಲಿ ಶಾಸಕ ರಾಮಣ್ಣ ಲಮಾಣಿ ಮತ್ತು ತಹಶೀಲ್ದಾರ ಜೆ.ಬಿ. ಮಜ್ಜಗಿ ಗೋದೋಳಿ ಲಗ್ನದ ಸಮಯದಲ್ಲಿ ಸರಕಾರದ ನಿರ್ದೇಶದಂತೆ ಬಲಿಪಾಡ್ಯ ದಿನವಾದ ಶುಕ್ರವಾರ ಗೋವು ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಸರಕಾರದ ನಿರ್ದೇಶದಂತೆ ದೀಪಾವಳಿಯ ಬಲಿಪಾಡ್ಯ ಹಬ್ಬದ ದಿನದಂದು ದೇವಾಲಯಗಳಲ್ಲಿ ಗೋವುಗಳನ್ನು ಪೂಜಿಸುವುದರ ನಿರ್ದೇಶನದಂತೆ ಗೋವುವನು ದೇವಾಲಯಕ್ಕೆ ಕರೆತಂದು ಅರಿಷಿಣ ಕುಂಕುಮ ಹೂವುಗಳಿಂದ ಅಲಂಕರಿಸಿ ಅಕ್ಕಿ ಬೆಲ್ಲ ಬಾಳೆಹಣ್ಣು ಸಿಹ ತಿನಿಸು ಮುಂತಾದವುಗಳನ್ನು ತಿನಿಸಿ ಧೋಪ ದೀಪಗಳಿಂದ ಪೂಜಿಸಿ ನಮಸ್ಕರಿಸುವ ವ್ಯೆವಸ್ಥೆಹಮ್ಮಿಕೊಂಡಿದ್ದು, ಈ ಎಲ್ಲ ಆಚರಣೆಗಳನ್ನು ಸಾಯಂಕಾಲ ಗೋಧೋಳಿಸಮಯದಲ್ಲಿ ನೆರವೇರಿಸಲಾಯಿತು. ಇದರಿಂದ ಗೋವಿನ ಪ್ರಾಮುಖ್ಯತೆಯನ್ನು ನಾವೆಲ್ಲ ಅರಿಯಬೇಕಿದೆ. ಇತಿಹಾಸದ ಪುಟ್ಟಗಳನ್ನು ಅವಲೋಕಿಸಿದಾಗ ದೇವಾನು ದೇವತೆಗಳನ್ನು ಗೋವಿನಲ್ಲಿ ಕಾಣಲಾಗುತ್ತದೆ. ಜೊತೆಗೆ ಸಾಕಷ್ಟು ಪವಿತ್ರವಾದ ಭಾವನೆಯನ್ನು ಹೊಂದಲಾಗಿದೆ. ಆದ್ದರಿಂದ ಸರಕಾದ ನಿರ್ಧಾರದಿಂದ ಸಾರ್ವಜನಿಕರಿಂದ ಪ್ರಶಂಸೆಗೆ ಕಾರಣವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ಪರಮೇಶ ಪರಬ, ತಹಶೀಲ್ದಾರ ಜೆ.ಬಿ. ಮಜ್ಜಗಿ, ಬಿಜೆಪಿ ಮಂಡಳದ ಆಧ್ಯಕ್ಷ ಫಕ್ಕಿರೇಶ ರಟ್ಟಿಹಳ್ಳಿ, ಕಂದಾಯ ನಿರೀಕ್ಷ ಮಹಾಂತೇಶ ಮುಗದುಂ ಮುಂತಾದವರು ಉಪಸ್ಥಿತರಿದ್ದರು.