ಶಾಸಕರಿಂದ ಕೋವಿಡ್ ನಿಯಂತ್ರಣ ಪರಿಶೀಲನಾ ಸಭೆ

????????????????????????????????????

ಸಿರುಗುಪ್ಪ ಮೇ 21 : ನಗರದ ತಾಲೂಕು ಪಂಚಾಯಿತಿ ಕಛೇರಿಯ ಸಭಾಂಗಣದಲ್ಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ತಾಲೂಕಿನಲ್ಲಿ ಕೋವಿಡ್ ನಿಯಂತ್ರಣದ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಯಿತು.
ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿ ಸರ್ಕಾರವು ಕರೋನಾ ನಿಯಂತ್ರಣಕ್ಕಾಗಿ ಕರೋನಾ ವಾರಿಯರ್ಸ್‍ಗಳಾದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೂ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಇಂತಹ ಸಂದರ್ಭದಲ್ಲಿ ಅವರು ನಿರ್ಭೀತಿಯಿಂದ ಎಲ್ಲಾ ಇಲಾಖೆಗಳು ಒಟ್ಟಾಗಿ ಉತ್ತಮ ಕಾರ್ಯ ನಿರ್ವಹಿಸಲು ಕೋವಿಶೀಲ್ಡ್ ಮತ್ತು ಕೋವ್ಯಾಕ್ಷಿನ್ ಲಸಿಕೆ ನೀಡುವ ಮೂಲಕ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಕ್ಕೆ ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ 1250 ಕೋಟಿ ಬಡ ಕಾರ್ಮಿಕರಿಗೆ ಕುಶಲ ಕರ್ಮಿಗಳಿಗೆ ಟ್ಯಾಕ್ಷಿ ಕ್ಯಾಬ್ ಚಾಲಕರಿಗೆ ಸಹಾಯ ವಾಗಲೆಂದು ಘೋಷಿಸುವ ಸರ್ಕಾರ ಬಡವರ ಪರವಾಗಿದೆಂದು ಸಾಬೀತು ಪಡಿಸಿದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ಹಾಗೂ ಜಿಂದಾಲ್ ಕಾರ್ಖಾನೆಯು ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಒಂದು ಸಾವಿರ ಬೆಡ್‍ಗಳ ಆಸ್ಪತ್ರೆಯನ್ನು ತೆರೆದು ಬಡವ-ಬಲ್ಲಿದನ್ನೆದೇ ಎಲ್ಲಾ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವುದರೊಂದಿಗೆ ಕಾರ್ಖಾನೆಯ ಆಕ್ಸಿಜನ್ ಘಟಕದಿಂದ ರಾಜ್ಯವೂ ಸೇರಿದಂತೆ ದೇಶದ ಇನ್ನಿತರ ರಾಜ್ಯಗಳಿಗೂ ಜೀವಾನಿಲವನ್ನು ಒದಗಿಸುತ್ತಿರುವುದಕ್ಕೆ ಎಷ್ಟು ಧನ್ಯವಾದಗಳು ಹೇಳಿದರೂ ಸಾಲದು ಸರ್ಕಾರವು ಘೋಷಿಸಿರುವ ಪ್ಯಾಕೇಜನ್ನು ಬಡ ಕಾರ್ಮಿಕರಿಗೆ ಸರಿಯಾದ ರೀತಿಯಲ್ಲಿ ದೊರೆಯುವಂತೆ ಕಾರ್ಯನಿರ್ವಹಿಸಿ ಎಂದು ತಿಳಿಸಿದರು.
ತಾಲೂಕಿನಲ್ಲಿ ಸೋಂಕಿತ ರೋಗಿಗಳಿಗೆ ಆಕ್ಷಿಜನ್, ರೆಮಿಡಿಸಿವರ್, ಕೋವ್ಯಾಕ್ಷಿನ್, ಕೋವಿಶೀಲ್ಡ್ ಕೊರತೆಯಾಗದಂತೆ ಗಮನವಹಿಸಲಾಗಿದೆ, ಹಿಂದೆಂದೂ ಕಾಣದ ಸಾವುಗಳು ತಾಲೂಕಿನಲ್ಲಿ ಸಂಭವಿಸಿರುವುದು ದು:ಖಕರ ಹಾಗೂ ವಿಷಾದನೀಯವಾದದ್ದು ಎಂದು ತಿಳಿಸಿದರು.
ತಹಶಿಲ್ದಾರ್ ಸತೀಶ್.ಬಿ.ಕೂಡಲಗಿಯವರು ಮಾತನಾಡಿ ತಾಲೂಕಿನ ಗಡಿಭಾಗಗಳಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗುವುದು. ಕೋವಿಡ್ ಸೋಂಕಿತರಿಗೆ ಕೋವಿಡ್ ಕಿಟ್ ಸುತ್ತ ಮುತ್ತಲಿನ ನಾಗರಿಕರಿಗೆ ಆರೋಗ್ಯ ಕಿಟ್ ವಿತರಿಸಲಾಗಿದೆ, ಹೋಂ ಐಸುಲೇಶನಲ್ಲಿರುವುವರಿಂದ ಸೋಂಕು ಹೆಚ್ಚಾಗಿದೆಂಬ ಮಾಹಿತಿ ಮೇರೆಗೆ ತಾಲೂಕಿನ ರಾವಿಹಾಳ್, ರಾರಾವಿ, ಸಿರಿಗೇರಿ, ಕರೂರು, ತೆಕ್ಕಲಕೋಟೆಯಲ್ಲಿರುವ ವಿದ್ಯಾರ್ಥಿ ನಿಲಯಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆದು ಸೋಂಕಿತರಿಗೆ ಚಿಕಿತ್ಸೆ ನೀಡಲಾಗುವುದೆಂದು ತಿಳಿಸಿದರು.
ಆರೋಗ್ಯ ಇಲಾಖೆಯ ನೋಡಲ್ ಅಧಿಕಾರಿ ಪ್ರಹ್ಲಾದ್ ಮಾತನಾಡಿ ಕೋವಿಡ್ ಎರಡನೇ ಅಲೆಯಿಂದಾಗಿ ತಾಲೂಕಿನಲ್ಲಿ ಒಟ್ಟು 2099 ಪ್ರಕರಣಗಳು ಪತ್ತೆಯಾಗಿದ್ದು 67 ಸಾವು ಸಂಭವಿಸಿರುತ್ತವೆ, 1341, ಡಿಸ್ಚಾರ್ಜ್ ಆಗಿದ್ದು ಸದ್ಯ 691 ಸಕ್ರಿಯ ಪ್ರಕರಣಗಳಲ್ಲಿ 508 ಸೋಂಕಿತರು ಹೋಂ ಐಸುಲೇಶನಲ್ಲಿದ್ದಾರೆ, 19 ಕೋವಿಡ್ ಆರೈಕೆ ಕೇಂದ್ರದಲ್ಲಿದ್ದಾರೆ, ಇನ್ನೂ 164 ಸೋಂಕಿತರು ಖಾಸಗಿ, ಪ್ರಾಥಮಿಕ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಸಭೆಯಲ್ಲಿ ವರದಿ ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಶಿವಪ್ಪ ಸುಭೇದಾರ್, ನಗರಸಭೆ ಪೌರಾಯುಕ್ತ ಪ್ರೇಮ್ ಚಾಲ್ರ್ಸ್, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ದೇವರಾಜ್, ಡಾ.ವಿದ್ಯಾಶ್ರೀ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಡಿ.ಭಜಂತ್ರಿ, ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹಮದ್, ಪಿ.ಎಸ್.ಐ ಕೆ.ರಂಗಯ್ಯ, ಬಿ.ಸಿ.ಎಂ. ಅಧಿಕಾರಿ ಎ.ಗಾದಿಲಿಂಗಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಾಷು ಮೋದಿನ್, ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಪಂಚಾಯಿತಿ ಪಿ.ಡಿ.ಓ ಗಳು ಭಾಗವಹಿಸಿದ್ದರು.
21-ಸಿರುಗುಪ್ಪ-2 : ಸಿರುಗುಪ್ಪ ನಗರದ ತಾಲೂಕು ಪಂಚಾಯಿತಿ ಕಛೇರಿಯ ಸಭಾಂಗಣದಲ್ಲಿ ನಡೆದ ತಾಲೂಕಿನಲ್ಲಿ ಕೋವಿಡ್ ನಿಯಂತ್ರಣದ ಕುರಿತು ಪರಿಶೀಲನಾ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಕುರಿತು ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿದರು.