ಶಾಸಕರಿಂದ ಕಿತ್ತೂರ ಉತ್ಸವ ಸಿದ್ಧತೆ ಪರಿಶೀಲನೆ, ಸಭೆ

(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರು,ಅ 17: ಕಿತ್ತೂರ ಉತ್ಸವದ ಸಿದ್ಧತೆಗಳನ್ನು ಪರಿಶೀಲಸಿ ತಹಶೀಲ್ದಾರ ಕಛೇರಿಯಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ವಿವಿಧ ಉಪ ಸಮಿತಿಗಳ ಅಧ್ಯಕ್ಷರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಈ ಉತ್ಸವಕ್ಕೆ ಹಾಸ್ಯನಟ ಸಾಧುಕೊಕೀಲ ಹಾಗೂ ಅವರ ತಂಡ ಆಗಮಿಸಲಿದೆ. ಉತ್ಸವಕ್ಕೆ ಮೂರು ವೇದಿಕೆಗಳು ಸಜ್ಜಾಗಿದ್ದು ಸ್ಥಳಿಯರಿಗೂ ಅವಕಾಶ ಕಲ್ಪಿಸಲಾಗಿದೆ. ವೀರಜ್ಯೋತಿಯ ಮೆರವಣಿಗೆಯಲ್ಲಿ ಕೊಲ್ಲಾಪೂರದ ಜಾಂಜ್ ಹಾಗೂ ತಾಷಾ ಪಥಕ್, ಚಂಡಿವಾಧ್ಯಗಳು ಆಗಮಿಸುತ್ತಿವೆ. ಮೆರವಣಿಗೆಯಲ್ಲಿ ವಿವಿಧ ಇಲಾಖೆಯ ಸ್ಥಬ್ದಚಿತ್ರಗಳು, ಕುದುರೆಗಳು, ಕಲಾ ತಂಡಗಳು ಸೇರಿದಂತೆ ಶಾಲಾ ಮಕ್ಕಳು ವಿವಿಧ ಕಾರ್ಯಕ್ರಮಗಳ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಿತ್ತೂರು ಉತ್ಸವಕ್ಕೆ ಆಯಾ ಗ್ರಾಮಗಳಿಂದ ಆಗಮಿಸುವ ಸಾರ್ವಜನಿಕರಿಗೆ ಮಿನಿ ಬಸ್ ವ್ಯವಸ್ಥೆ ಮಾಡಲಾಗಿದೆ, ಸಾರ್ವಜನಿಕರ ಸಲಹೆಯಂತೆ ಈ ಬಾರಿ ಕೋಟೆಯ ಆವರಣದಲ್ಲಿ ಮಳಿಗೆಗಳನ್ನು ಅಳವಡಿಸಲಾಗುವುದು, ಉತ್ಸವಕ್ಕೆ ಆಗಮಿಸುವ ಗಣ್ಯಮಾನ್ಯರಿಗೆ ಹಾಗೂ ಕಲಾವಿದರಿಗೆ ಕೊಟೆಯ ಮುಂಬಾಗಿಲಿನಿಂದ ಬರಲು ಹೋಗಲು ಅವಕಾಶ ಕಲ್ಪಿಸಲಾಗಿದ್ದು ಉತ್ಸವ ವೇಳೆ ಕಿತ್ತೂರು ಪಟ್ಟಣ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಇರಲಿದೆ. ಉತ್ಸವದ ಸಂದರ್ಭದಲ್ಲಿ ಜನರಿಗೆ ತುರ್ತು ವೈದ್ಯಕೀಯ ಸೌಲಭ್ಯ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ವೇಳೆ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕ್ಕಿರಪೂರ, ತಹಶೀಲ್ದಾರ ರವೀಂದ್ರ ಹಾದಿಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಡಿಡಿಪಿಐ ಬಸವರಾಜ ನಾಲತ್ವಾಡ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅಜ್ಜನ್ನವರ, ಡಿವೈಎಸ್ಪಿ ರವಿ ನಾಯ್ಕ , ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾಂವ, ಪಪಂ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಹೆಸ್ಕಾಂ ಅಧಿಕಾರಿ ಎಮ್. ಕೆ. ಹಿರೇಮಠ, ಕೃಷ್ಣಾ ಬಾಳೆಕುಂದರಗಿ, ಅಸ್ಫಾಕ ಹವಾಲ್ದಾರ, ಮುದಕಪ್ಪ ಮರಡಿ, ಬಸವರಾಜ ಸಂಗೊಳ್ಳಿ, ಅನೀಲ ಎಮ್ಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಎಲ್ಲ ಉಪ ಸಮೀತಿಗಳ ಅಧ್ಯಕ್ಷರು ಹಾಗೂ ಸದಸ್ಯರು ಇದ್ದರು.