ಶಾಸಕರಿಂದ ಕಾಮಗಾರಿ ವೀಕ್ಷಣೆ

ಹಗರಿಬೊಮ್ಮನಹಳ್ಳಿ:ನ.14 ಪಟ್ಟಣದಲ್ಲಿ 1ಕೋಟಿ ರೂ.ಗಳ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್‍ರವರ ಭವನವನ್ನು ಶಾಸಕ ಭೀಮನಾಯ್ಕ ಶುಕ್ರವಾರ ಭೇಟಿ ನೀಡಿ ವೀಕ್ಷಣೆ ಮಾಡಿದರು.ನಂತರ ಕಾಮಗಾರಿ ಸಂಪೂರ್ಣ ಮುಗಿದಿದ್ದು ಮುಂದಿನ ತಿಂಗಳು ಡಿ.06ರಂದು ಡಾ.ಬಿ.ಆರ್.ಅಂಬೇಡ್ಕರ್‍ರವರ ಪರಿನಿರ್ವಾಣ ಪುಣ್ಯದಿನದಂದು ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.
ಪಟ್ಟಣದ ಚಿಂತ್ರಪಳ್ಳಿ ರಸ್ತೆಯಲ್ಲಿ ನಿಮಾರ್ಣಗೊಂಡು ಮುಗಿಯುವ ಹಂತದಲ್ಲಿ ಭವನವನ್ನು ವೀಕ್ಷಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕ್ಷೇತ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಭವನವನ್ನುನಿರ್ಮಾಣ ಮಾಡುವುದು ನನ್ನ ಕನಸಾಗಿತ್ತು . 2013-18ರ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಭವನಕ್ಕೆ ಅನುದಾನ ಬಿಡುಗಡೆಗೊಂಡಿತ್ತು. ತಾಂತ್ರಿ ದೋಷದಿಂದ ತಡವಾಗಿ ಆರಂಭವಾದ ಭವನದ ಕಾಮಗಾರಿಯೂ ಈಗ ಮುಕ್ತಾಯದ ಹಂತದಲ್ಲಿದೆ. ಆರಂಭದಲ್ಲಿ ಈ ನಿವೇಶನದಲ್ಲಿ ಶಿಲಾನ್ಯಾಸ ಮಾಡಲು ಬಂದಾಗ ಹಲವಾರು ಅಡೆತಡೆಗಳು ಎದುರಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ ಆಗ ನಾನು ಜೆಡಿಎಸ್ ಪಕ್ಷದ ಶಾಸಕನಾಗಿದ್ದೆ. ಆದರೂ ಸಹ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನಗಳನ್ನು ನೀಡಿದ್ದರು ಎಂದು ಸ್ಮರಿಸಿದರು.
ಬಾಬಾ ಸಹೇಬ ಡಾ.ಬಿ.ಆರ್.ಅಂಬೇಡ್ಕರ್‍ರ ಹೆಸರಲ್ಲಿ ಮತಪಡೆದು ಗೆದ್ದವರು ಈ ಕಷೇತ್ರದಲ್ಲಿ ಒಂದು ಡಾ.ಬಿ.ಆರ್.ಅಂಬೇಡ್ಕರ್‍ರವರ ಭವನವನ್ನು ಅವರ ಹಣೆಬರಹಕ್ಕೆ ನಿರ್ಮಿಸಲಾಗಲಿಲ್ಲ. ಈಗಲೂ ನಮ್ಮ ಪಕ್ಷದವರು ಮತ್ತು ವಿರೋಧ ಪಕ್ಷದವರು ನನ್ನ ವಿರುದ್ಧ ಆಗಾಗ ಶೆಡ್‍ಯಂತ್ರ ನಡೆಸುತ್ತಲೇ ಇದ್ದಾರೆ. ಆದರೆ, ನಾನು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಕ್ಷೇತ್ರದ ಜನರೊಂದಿಗೆ ಸೇರಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತಿದ್ದೇನೆ. ಡಿ.06ರಂದು ಉದ್ಘಾಟನೆ ಗೊಳ್ಳಲಿರುವ ಈ ಡಾ.ಬಿ.ಆರ್.ಅಂಬೇಡ್ಕರ್ ಭವನ ಕಾರ್ಯಕ್ರಮಕ್ಕೆ ಸಚಿವ ಶ್ರೀರಾಮುಲು ಅವರನ್ನು ಆಹ್ವಾನಿಸುತ್ತಿದ್ದೇವೆ. ಅದೇ ರೀತಿ ಮುಂದಿನ ದಿನಗಳಲ್ಲಿ ಭವನದ ಮೇಲಿನ ಮೊದಲನೇ ಮಹಡಿಯಲ್ಲಿ 1ಕೋಟಿ ರೂ.ಗಳ ವೆಚ್ಚದಲ್ಲಿ ‘ಮೆಮೋರಿಯಲ್’ ಹಾಲ್ ನಿರ್ಮಾಣಮಾಡುತ್ತೇವೆ ಎಂದರು
ಬಾಕ್ಸ್ ಮಾಡಿ ಹಾಕಿ ನಾಡಿನ ಹಿರಿಯ ಪತ್ರಕರ್ತ ರವಿಬೆಳೆಗೆರೆ ಬರಹವನ್ನೇ ಬದುಕಾಗಿಸಿಕೊಂಡು ನಾಡಿನಾಧ್ಯಂತ ಪತ್ರಿಕಾರಂಗದಲ್ಲಿ ಹೊಸ ಸಂಚಲನವನ್ನು ಮೂಡಡಿಸಿದ್ದರು ಅವರು ಇಂದು ನಮ್ಮನ್ನೆಲ್ಲ ಅಗಲಿರುವುದು ಖೇದದ ಸಂಗತಿ. ಹಾಯ್ ಬೆಂಗಳೂರು ಎಂಬ ಕಪ್ಪು ಬಿಳುಪು ಪತ್ರಿಕೆಯೊಂದಿಗೆ ರಾಜ್ಯಾಧ್ಯಂತ ಮನೆಮಾತಾದ ರವಿ ಬೆಳಗೆರೆಯವರು ನಮ್ಮ ಬಳ್ಳಾರಿ ಜಿಲ್ಲೆಯವರೆಂಬುದು ನಮ್ಮ ಹೆಮ್ಮೆ. ಅವರ ಅಕಾಲಿಕ ಮರಣದಿಂದ ಪತ್ರಿಕಾರಂಗ ಬಡವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರಿಣಿಸಲಿ ಎಂದರು.
ಈ ಸಂದರ್ಭಲ್ಲಿ ಜಿ.ಪಂ.ಮಾಜಿ ಸದಸ್ಯ ಹೆಗ್ಡಾಳ್ ರಾಮಣ್ಣ, ಅಕ್ಕಿ ತೋಟೇಶ, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಎಚ್.ದೊಡ್ಡ ಬಸಪ್ಪ, ಡಿಎಸ್‍ಎಸ್‍ನ ಉಮೇಶ್, ಕಹಳೆ ಬಸವರಾಜ್, ಎಚ್.ಮರಿಯಪ್ಪ, ಚಿಂತ್ರಪಳ್ಳಿ ದೇವೇಂದ್ರ, ಡಿಶ್ ಮಂಜುನಾಥ, ಹುಡೇದ್ ಗುರುಬಸವರಾಜ್, ಸೆರೆಗಾರ ಹುಚ್ಚಪ್ಪ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.