ಶಾಸಕರಿಂದ ಕಾಮಗಾರಿಗಳಿಗೆ ಚಾಲನೆ

??????

ಮುಂಡಗೋಡ,ಏ17 : ರಾಜ್ಯದ ಉತ್ಪನದ ಶೇ65ರಷು ಹಣವನ್ನು ಸರ್ಕಾರದ ನೌಕರರ ಸಂಬಳ, ಭತ್ಯ, ಹಾಗೂ ತುಟ್ಟಿ ಭತ್ಯಯನ್ನು ನೀಡುತ್ತಿದ್ದೇª.É ಇನ್ನಷ್ಟು ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಿದರೇ ನಯಾಪೈಸೆ ಅಭಿವೃದ್ಧಿಗೆ ತರಲು ಹಣ ಇರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಅವರು ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ 1ಕೋಟಿ 50ಲಕ್ಷ ರೂ. ಅನುದಾನದ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. 2ಲಕ್ಷ 40 ಸಾವಿರ ಕೋಟಿಯ ರಾಜ್ಯದ ಬಜೆಟ್‍ನಲ್ಲಿ ಮೂರು ಭಾಗವಾಗಿ ವಿಂಗಡಿಸಿದ್ದೇವೆ. ಅದರಲ್ಲಿ ಒಂದು ಭಾಗದಲ್ಲಿ 80 ಸಾವಿರ ಕೋಟಿ ಹಣವನ್ನು ನೌಕರರ ಸಂಬಳ, ಸರ್ಕಾರದ ವಾಹನದ ಇತರೆ ಖರ್ಚು, ಇನ್ನೊಂದು ಭಾಗಕ್ಕೆ ವಿವಿಧ ಯೋಜನೆಗಳಿಗಾಗಿ 80 ಸಾವಿರ ಕೋಟಿ ಹಣ, ಮೂರನೇ ಭಾಗಕ್ಕೆ ಕೇವಲ 45 ಸಾವಿರ ಕೋಟಿಯ ಹಣ ಈ ಹಣದಲ್ಲಿ ರಾಜ್ಯದ ಅಭಿವೃದ್ಧಿ, ನೀರಾವರಿ ಯೋಜನೆಗಳು, ರಸ್ತೆ, ಸಿಸಿ ರಸ್ತೆ, ಹಾಗೂ ಕಟ್ಟಡಗಳಿಗೆ ಮಾಡಬೇಕಾಗಿದೆ. ಆ ಕಾರಣಕ್ಕಾಗಿ ಅನುಪಾತಕ ಹಣದ ಖರ್ಚನ್ನು ಯಾವುದೇ ಸರ್ಕಾರಗಳು ಕಡಿಮೆ ಮಾಡದಿದ್ದರೆ ರಾಜ್ಯದ ಜನರಿಂದ ಆಯ್ಕೆಯಾಗಿಹೋಗಿ ಜನಕ್ಕೆ ಕೇವಲ ಭಾಷಣದ ಭರವಸೆ ಕೊಡಬಹುದು ಹೊರೆತು ಯಾವುದೇ ಕಾರಣಕ್ಕೂ ಅಭಿವೃದ್ಧಿಯ ಭರವಸೆ ಕೊಡಲು ಆಗದ ಸ್ಥಿತಿಗೆ ಬಂದು ತಲುಪಿದ್ದೇವೆಹಾಗೂ ಎಲ್ಲ ರಾಜಕೀಯ ಪಕ್ಷಗಳು ಮಾತನಾಡುತ್ತಾರೆ ನಂತರ ವಾಸ್ತವ ಗತಿ ಗೊತ್ತಾದ ಮೇಲೆ ನಾವು ಎಲ್ಲಿಗೆ ಹೋಗಿ ಮುಟ್ಟಿದ್ದೇವೆ ಎಂಬ ಭಾವನೆ ಮೂಡುತ್ತದೆ ಎಂದ ಅವರು ಸಾರಿಗೆ ನೌಕರರ ಮುಷ್ಕರದಿಂದ ಎಲ್ಲರಿಗೂ ತೊಂದರೆ ಉಂಟಾಗಿದ್ದು ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವ ಮತ್ತು 6ನೇ ವೇತನವನ್ನು ನೀಡುವ ಪ್ರಶ್ನೆ ಸರ್ಕಾರದ ಮುಂದೆ ಇಲ್ಲ. ಸಾರಿಗೆ ನೌಕರರು ಸಾರ್ವಜನಿಕರ ಜತೆ ಉತ್ತಮ ಸಂಬಂಧ ಇಟ್ಟುಕೊಂಡರೆ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳುತ್ತದೆ. ಇದರಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಎಲ್ಲ ರಾಜಕೀಯ ಪಕ್ಷಗಳಿಗೆ ವಿನಂತಿಸುತ್ತೇನೆ ಎಂದರು.
ಜಿ.ಪಂ.ಸದಸ್ಯ ಎಲ್.ಟಿ.ಪಾಟೀಲ ಮಾತನಾಡಿ ತಾಲೂಕಿನಲ್ಲಿಯೇ ಹೆಚ್ಚು ಹಿಂದುಳಿದ ಜನಾಂಗದವರು ವಾಸಿಸುವ ಗ್ರಾಮದಲ್ಲಿ ಅತಿ ಅವಶ್ಯವಿರುವ ಪಶು ಚಿಕಿತ್ಸಾಲಯದ ಕಟ್ಟಡದ ಶಿಲಾನ್ಯಾಸವಾಗಿರುವುದು ಸಂತಸದ ಸಂಗತಿ ಎಂದರು. ತಹಸೀಲ್ದಾರ್ ಶ್ರೀಧರ ಮುಂದಲಮನಿ, ದೇವು ಪಾಟೀಲ, ರಮೇಶ ರಾಯ್ಕರ, ಸಿ.ಕೆ.ಅಶೋಕ ಮಾತನಾಡಿದರು.
ಮೈನಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ 67ಲಕ್ಷ ರೂ. ಅನುದಾನದ 536 ಮನೆಗಳಿಗೆ ಮನೆ-ಮನೆಗೆ ನಲ್ಲಿ ಯೋಜನೆ, ಶಿಡ್ಲಗುಂಡಿಯಲ್ಲಿ 26.5ಲಕ್ಷ ರೂ. ಅನುದಾನದ 110 ಮನೆಗಳಿಗೆ 25ಸಾವಿರ ಲೀ. ಓವರ್ ಹೆಡ್ ಟ್ಯಾಂಕ್, 12.5 ಲಕ್ಷ ರೂ. ಅನುದಾನದ ಜಗಜೀವನರಾಮ್ ಸಭಾಭವನ ಕಟ್ಟಡ, 35ಲಕ್ಷ ರೂ. ವೆಚ್ಚದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಕಟ್ಟಡದ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಗ್ರಾ.ಪಂ.ಅಧ್ಯಕ್ಷೆ ಸೀತಾ ಎಡಗೆ, ಬಸಯ್ಯ ನಡುವಿನಮನಿ, ದಾವು ಜೋರೆ, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದ್ದರು.