ಶಾಸಕರಿಂದ ಕಸಾಪುರಕ್ಕೆ ಇಂದು ಪಾದಯಾತ್ರೆ

ಬಳ್ಳಾರಿ, ಡಿ.25: ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಇಂದು ಕರೋನಾ ಈ ದೇಶದಿಂದ ತೊಲಗಲಿ ಎಂದು ಪ್ರಾರ್ಥಿಸಿ ನಗರದಿಂದ ಕಸಾಪುರಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ನಗರದ ಬಾಲ ಆಂಜನೇಯಸ್ವಾಮಿ ದೇವಸ್ಥಾನದಿಂದ ಇಂದು ಸಂಜೆ ನಾಲ್ಕು ಗಂಟೆಗೆ ಪಾದಯಾತ್ರೆ ಆರಂಭಗೊಂಡು ಜೋಳದರಾಶಿಯಲ್ಲಿ ತಂಗಲಿದೆ.
ಇಚ್ಚೆಯುಳ್ಳವರು ಇದರಲ್ಲಿ ಪಾಲ್ಗೊಳ್ಳಬಹುದು.
ಅದೃಷ್ಟ ಇರಬೇಕು:
ಸಚಿವ ಸ್ಥಾನಕ್ಕಾಗಿ ಈ ಪಾದಯಾತ್ರೆ ಅಲ್ಲ ಅದೃಷ್ಟ ಇರಬೇಕು, ಆ ದೇವರು ಇಚ್ಚೆಯಿದ್ದರೆ ಸಚಿವ ಸ್ಥಾನ ದೊರೆಯುತ್ತದೆ. ಇಲ್ಲದಿದ್ದರೆ ಶಾಸಕನಾಗಿಯೇ ಇರುವೆ ಎಂದು ಸೋಮಶೇಖರ ರೆಡ್ಡಿ‌ ಹೇಳಿದರು