
ರಾಯಚೂರು,ಫೆ.೨೭- ತಾಲೂಕಿನ ಗಾರಲದಿನ್ನಿ ಗ್ರಾಮದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್
ಅವರು ಗ್ರಾಮೀಣ ಮಟ್ಟದ ಕಬ್ಬಡಿ ಪಂದ್ಯಾವಳಿ ರೈಡ್ ಮಾಡುವ ಮೂಲಕ ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡಿದರು.
ನಂತರ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮನೆಮನೆಗೆ ವೈಯಕ್ತಿಕ ನಳದ ವ್ಯವಸ್ಥೆಗೆ ವಿಶೇಷ ಪೊಜೆ ಸಲ್ಲಿಸಿ ನಳದ ನೀರು ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರು ಸಿದ್ಧನಗೌಡ ಪೋಲೀಸ್ ಪಾಟೀಲ್‌ರವರು, ಪಕ್ಷದ ಮುಖಂಡರುಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು, ಮತ್ತು ಕ್ರೀಡಾಪಟುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.