ಶಾಸಕರಿಂದ ಆಟೋ ಚಾಲಕರಿಗೆ ಲೈಸೆನ್ಸ್ ವಿತರಣೆ

ಬಳ್ಳಾರಿ, ನ.9: ಆಟೋ ಚಾಲಕರ ಸಂಘದಿಂದ ನಗರ್ 200 ಆಟೋ ಚಾಲಕರಿಗೆ ಚಾಲನೆ ಪರವಾನಿಗೆ (ಡ್ರೈವಿಂಗ್ ಲೈಸೆನ್ಸ್) ಕಾರ್ಡುಗಳನ್ನು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಸಂಘದ ಎಸ್.ಎನ್.ಪೇಟೆ ಕಚೆರಿಯಲ್ಲಿ ವಿತರಣೆ ಮಾಡಿದರು.
ಕಾರ್ಡು ವಿತರಿಸಿ ಮಾತನಾಡಿದ ಶಾಸಕರು. ಆಟೋ ಚಾಲಕರೆಲ್ಲ ಚಾಲನಾ ಪರವಾನಿಗೆಯನ್ನು ಖಡ್ಡಾಯವಾಗಿ ಪಡೆದುಕೊಳ್ಳಿ ಇಲ್ಲದಿದ್ದರೆ ವಿನಾಕಾರಣ ದಂಡ ಕಟ್ಟಬೇಕಾಗುತ್ತದೆ. ಅದಕ್ಕಾಗಿ ಅಗತ್ಯ ದಾಖಲೆಗಳೊಂದಿಗೆ ಆಟೋ ಚಾಲನೆ ಮಾಡಿ ನಿಮ್ಮ ಸಮಸ್ಯೆಗಳಿದ್ದರೆ ತಿಳಿಸಿ ಅದಕ್ಕೆ ಸ್ಪಂದಿಸಲಿದೆಂದರು.
ಆರ್ ಟಿ ಓ ಅಧಿಕಾರಿ ಶೇಖರ್ ಸಹ ಚಾಲಕರಿಗೆ ಚಾಲನೆ ಪರವಾನಿಗೆ ಕಾರ್ಡುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕೆ.ಎಸ್.ಅಶೋಕ್ ಕುಮಾರ್, ಆಟೋ ಚಾಲಕರ ಸಂಘದ ಅಧ್ಯಕ್ಷ ಉಂಡೇಕರ್ ರಾಜೇಶ್ ಮೊದಲಾದವರು ಇದ್ದರು.