ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಯಶವಂತರಾಯಗೌಡರು

ಇಂಡಿ : ಮೇ.24:ಇಂಡಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಬೆಂಗಳೂರಿನಲ್ಲಿ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ವಿಧಾನಸೌಧದಲ್ಲಿ ಸೋಮವಾರ ಆರಂಭವಾದ ಮೂರು ದಿನಗಳ ಅಧಿವೇಶನದ ಮೊದಲ ದಿನದಂದು ಹಂಗಾಮ ಸ್ಪೀಕರ್ ಆರ್.ವಿ.ದೇಶಪಾಂಡೆ ಅವರು ಯಶವಂತರಾಯಗೌಡರಿಗೆ ಪ್ರಮಾಣ ವಚನ ಬೊಧಿಸಿದರು.
ಯಶವಂತರಾಯಗೌಡರು ದೇವರ ಹೆಸರಿನಲ್ಲಿ, ತಂದೆ ತಾಯಿ ಕ್ಷೇತ್ರದ ಮತದಾರರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಯಶವಂತರಾಯಗೌಡರು ವಿಧಾನಸಭೆ ಪ್ರವೇಶಿಸುತ್ತಿರುವದು ಇದು ಮೂರನೆಯ ಬಾರಿ.ಪ್ರವೇಶಕ್ಕೂ ಮುನ್ನ ವಿಧಾನಸಭೆಯ ಬಾಗಲಿಗೆ ತಲೆಬಾಗಿ ನಮಸ್ಕರಿಸಿದರು.
ಶಾಸಕನಾಗಿ ಆಯ್ಕೆ ಮಾಡಿದ ಕ್ಷೇತ್ರದ 2 ಲಕ್ಷ 40 ಸಾವಿರ ಜನರ ಪ್ರತಿನಿಧಿಯಾಗಿ ವಿಧಾನಸೌಧದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ ಇಂಡಿ ಮತಕ್ಷೇತ್ರದ ಎಲ್ಲ ಮತದಾರರಿಗೂ ಇದಕ್ಕಾಗಿ ಹಗಲಿರುಳು ಎನ್ನದೇ ಶ್ರಮಿಸಿದ ಪಕ್ಷದ ಮುಖಂಡರು,ಕಾರ್ಯಕರ್ತರ,ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುವೆ ಎಂದು ಶಾಸಕರು ತಿಳಿಸಿದ್ದಾರೆ.