ಶಾಸಕರನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆ ನಮಗೆ ನೀಡಿದ ಹಕ್ಕು

ಕೊರೊನಾ ನಿರ್ವಹಣೆ : ಶಿವರಾಜ ಪಾಟೀಲ್ ವಿಫಲ – ಆರೋಪ
ರಾಯಚೂರು.ಮೇ.೨೭- ಚುನಾಯಿತ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕು ದೇಶದ ಸಂವಿಧಾನ ಪ್ರತಿಯೊಬ್ಬ ನಾಗರೀಕನಿಗೂ ನೀಡಿದೆ. ಇದು ಪ್ರಜಾಪ್ರಭುತ್ವ. ಜನ ಪ್ರಶ್ನಿಸಲೇಬಾರದೆಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ಕನಿಷ್ಟ ಜ್ಞಾನವಿಲ್ಲದೇ ವಿಡಿಯೋ ಹರಿಬಿಡಲಾಗಿದೆಂದು ಸನ್ನಿ ರೋನಾಲ್ಡ್ ಮತ್ತು ಸ್ಟೀವನ್ ಬಿನ್ನಿ ಅವರಿಗೆ ಕಾಂಗ್ರೆಸ್ ಯುವ ಮುಖಂಡರಾದ ಪ್ರಭಾಕರ ರೆಡ್ಡಿ ಮತ್ತು ಪೋಗಲ್ ಪ್ರವೀಣ್ ರೆಡ್ಡಿ ಅವರು ತಿರುಗೇಟು ನೀಡಿದ್ದಾರೆ.
ಯಾರೋ ಅಮಾಯಕ ಹುಡುಗನಿಂದ ಹೇಳಿಕೆ ನೀಡಿಸಲಾಗಿದೆಂದು ಬಿನ್ನಿ ಅವರ ಹೇಳಿಕೆಗೆ ತಿರುಗೇಟು ನೀಡಿ, ಪ್ರಭಾಕರ ರೆಡ್ಡಿ ಯಾರು ಎಂಬುವುದನ್ನು ತಿಳಿಯಲು ಕಾಂಪೌಂಡ್‌ನಿಂದ ಹೊರಗೆ ಬಂದು ಯೋಚಿಸಿ. ಕಾಂಗ್ರೆಸ್ ಪಕ್ಷದಿಂದ ಅಧಿಕೃತವಾಗಿ ಟಿಕೆಟ್ ಪಡೆದು, ನಗರಸಭೆಯಲ್ಲಿ ಸ್ವರ್ಧಿಸಿದ ಯುವ ಕಾಂಗ್ರೆಸ್ಸಿನ ಸಕ್ರಿಯ ಕಾರ್ಯಕರ್ತ ಎನ್ನುವುದು ತಿಳಿಯುತ್ತದೆ. ಶಾಸಕರ ಬಗ್ಗೆ ನಿಮಗೆ ಪ್ರೀತಿಯಿದ್ದರೇ ಮನಗೆ ಕರೆದುಕೊಂಡು ಹೋಗಿ ಊಟ, ಉಪಚಾರ ಮಾಡಿ. ಆದರೆ, ನಮ್ಮ ಪ್ರಶ್ನಿಸುವ ಹಕ್ಕನ್ನು ಕೇಳದಿರಿ. ಅವರ ವೈಯಕ್ತಿಕ ವಿಚಾರ ನಾವು ಪ್ರಶ್ನಿಸುತ್ತಿಲ್ಲ. ಈ ಕ್ಷೇತ್ರದ ಶಾಸಕರಾಗಿ ಏನು ಮಾಡಿದ್ದಿರಿ ಎನ್ನುವುದೇ ನಮ್ಮ ಪ್ರಮುಖ ಪ್ರಶ್ನೆಯಾಗಿದೆ.
ಶಾಸಕ ಡಾ.ಶಿವರಾಜ ಪಾಟೀಲ್ ಅವರು ಕೊರೊನಾ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇವರ ವೈಫಲ್ಯಕ್ಕೆ ನೂರಾರು ಜನ ಕೊರೊನಾಕ್ಕೆ ಬಲಿಯಾಗಬೇಕಾಯಿತು. ಇಂತಹ ವೈಫಲ್ಯಗಳನ್ನು ನಾವು ಪ್ರಶ್ನಿಸುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದಿದ್ದರೇ, ರಾಜೀನಾಮೆ ನೀಡಿ, ಜಾಗ ಖಾಲಿ ಮಾಡಿ ಎಂದು ಹೇಳಿದ ಅವರು, ಸನ್ನಿ, ಬಿನ್ನಿ ಅವರೇ, ನೀವೇ ಹೇಳುವಂತೆ ಯಾರನ್ನು ಪ್ರಶ್ನಿಸಲಾಗುತ್ತದೆಯೋ ಅವರೇ ಉತ್ತರಿಸಬೇಕು ಎನ್ನುವುದು ನಿಮ್ಮ ಹೇಳಿಕೆಯ ಉದ್ದೇಶವಾಗಿದೆ.
ಹಾಗಿದ್ದರೇ, ರವಿ ಬೋಸರಾಜು ಅವರ ಆರೋಪಗಳಿಗೆ ಯಾರು ಉತ್ತರಿಸಬೇಕು. ನೇರವಾಗಿ ಶಾಸಕರನ್ನು ಪ್ರಶ್ನಿಸಿದ ರವಿ ಬೋಸರಾಜು ಅವರಿಗೆ ನಿಮ್ಮ ಶಾಸಕರು ಉತ್ತರಿಸುವಂತೆ ಮನವರಿಕೆ ಮಾಡಿ. ತಾಕತ್ತಿದ್ದರೇ, ನಿಮ್ಮ ಶಾಸಕರನ್ನು ರವಿ ಬೋಸರಾಜು ಅವರಿಗೆ ಉತ್ತರಿಸುವಂತೆ ಹೇಳಿ. ಶಾಸಕ ಡಾ.ಶಿವರಾಜ ಪಾಟೀಲ್ ಅವರು ಕೇವಲ ಕೆಲವು ಜವರನ್ನು ಕರೆದುಕೊಂಡು ಫೋಸ್ ನೀಡಿದರೇ ಹೊರತು, ಇಲ್ಲಿ ವೈದ್ಯಕೀಯ ಸವಲತ್ತು ಸುಧಾರಣೆಗೆ ಕ್ರಮ ಕೈಗೊಳ್ಳಲಿಲ್ಲ. ರವಿ ಬೋಸರಾಜು ಅವರು ಮೈದಾನಕ್ಕಿಳಿದ ನಂತರ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಜಿಲ್ಲೆಗೆ ಬೇಕಾದಂತಹ ವ್ಯವಸ್ಥೆ ಮಾಡಲಾಯಿತು.
ರವಿ ಬೋಸರಾಜು ಅವರು ಧ್ವನಿಯೆತ್ತದಿದ್ದರೇ, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಮುಖ ನೋಡುತ್ತಿರಲಿಲ್ಲ. ಶಾಸಕರು, ಕೊರೊನಾ ಸೋಂಕಿತರ ಬಗ್ಗೆ ಆಲೋಚನೆಯೂ ಮಾಡುತ್ತಿರಲಿಲ್ಲ. ಎನ್ನುವ ಸತ್ಯ ತಿಳಿಯಬೇಕು. ಅಮೇರಿಕಾ ಮೂಲದ ಬೋಯಿಂಗ್ ಆಸ್ಪತ್ರೆ ಜಿಲ್ಲೆಯಲ್ಲಿ ಸ್ಥಾಪಿಸುವಂತೆ ಮಾಡುವ ಧೈರ್ಯ ನಿಮ್ಮ ಶಾಸಕರಿಗಿಲ್ಲವೇ?. ಈ ಬಗ್ಗೆ ರವಿ ಬೋಸರಾಜು ಅವರು ಒತ್ತಾಯಿಸಿದ್ದಾರೆ. ನ್ಯಾಯಾಲಯದಲ್ಲಿ ಪಿಐಎಲ್ ದಾವೆ ಹೂಡಿದ್ದಾರೆ. ನಿಮ್ಮ ಶಾಸಕರು ಈ ವಿಷಯದಲ್ಲಿ ಮೌನವಹಿಸಿದ್ದೇಕೆ?. ಅತ್ಯುತ್ತಮ ಸುಸಜ್ಜಿತ ಆಸ್ಪತ್ರೆ ಜಿಲ್ಲೆಗೆ ಬೇಡವೇ?. ಈ ಬಗ್ಗೆ ಶಾಸಕರು ಸ್ಪಷ್ಟಪಡಿಸಬೇಕು.
ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಒಬ್ಬ ಶಾಸಕರಾಗಿ ಸರ್ಕಾರದ ಮೇಲೆ ಒತ್ತಡ ತಂದು ಜನರ ಜೀವ ಉಳಿಸುವ ಪ್ರಯತ್ನ ಮಾಡುವ ಬದಲು ಕೇವಲ ಫೋಟೋಗಳಿಗಾಗಿ ಅಲ್ಲಿ, ಇಲ್ಲಿ ಭೇಟಿ ಕೊಡುತ್ತಿದ್ದಾರೆ. ಇದೇನಾ ಶಾಸಕರು ಮಾಡಬೇಕಾದ ಕೆಲಸ. ಸರ್ಕಾರ ವಿಫಲಗೊಂಡಾಗ ಪ್ರತಿ ಪಕ್ಷಗಳು ಅವರನ್ನು ಎಚ್ಚರಿಸುವ ಪ್ರಜಾಪ್ರಭುತ್ವ ಕೆಲಸವನ್ನು ರವಿ ಬೋಸರಾಜು ಅವರು ಮಾಡಿದ್ದಾರೆ. ಮುಂದೆ ಹೇಳಿಕೆ ಕೊಡುವಾಗ ಈ ಬಗ್ಗೆ ಗಮನ ಇರಲಿ. ರವಿ ಬೋಸರಾಜು ಯಾರು ಎನ್ನುವುದು ತಿಳಿದು ಪ್ರತಿಕ್ರಿಯಿಸಿ.