ಶಾಸಕನಾಗುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ-ಡಾ. ಎಸ್ ಎಸ್ ಪಾಟೀಲ್

ರಾಯಚೂರು ಏ ೨೯
ನಗರ ಶಾಸಕರು, ಬಿಜೆಪಿ ಅಭ್ಯರ್ಥಿಯಾದ ಡಾ. ಎಸ್ ಎಸ್ ಪಾಟೀಲ್ ಅವರು ಇಂದು ವಾರ್ಡ್ ನಂ-೧೨ರಲ್ಲಿ
ಶ್ರೀ ಉರುಕುಂದು ಈರಣ್ಣ ಸ್ವಾಮಿ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸುದರ ಮೂಲಕ ಪ್ರಚಾರ ಕಾರ್ಯ ಪ್ರಾರಂಭ ಮಾಡಿದರು.
ಪ್ರಚಾರದ ಸಂಧರ್ಭದಲ್ಲಿ ಮಾತನಾಡಿದ ಡಾ. ಎಸ್ ಎಸ್ ಪಾಟೀಲ್ ಅವರು ಜನರ ಕಾಯಕ ಮಾಡುವ ಶಾಸಕನ ಸ್ಥಾನ ಸಿಕ್ಕಿದ್ದು ನನ್ನ ಸೌಭಾಗ್ಯ ಇದ್ದೆಲ್ಲ ನೀವೂ ಕೊಟ್ಟ ಅಮೂಲ್ಯವಾದ ಮತ, ನಿಮ್ಮ ಭರವಸೆ ಉಳಿಸಿಕೊಳ್ಳುವ ಜವಾಬ್ದಾರಿ ನನ್ನ ಮೇಲೆ ಇದೆ, ಇನ್ನಷ್ಟು ಅಭಿವೃದ್ಧಿ ಮಾಡುವ ಕಾರ್ಯಕ್ಕೆ ಈ ಬಾರಿ ನನಗೆ ಮತ ನೀಡಿ ನೀವಿಟ್ಟಿರುವ ನಂಬಿಕೆ ಉಳಿಸಿಕೊಳ್ಳುವೆ ಎಂದು ಹೇಳಿದರು.
ಡಾ ಎಸ್.ಎಸ್ ಪಾಟೀಲ್ ಹಾಗೂ ಕಾರ್ಯಕರ್ತರು ಪಾದಯಾತ್ರೆ ಮೂಲಕ ವಿವಿದಡೆ ಮತದಾರರ ಮನೆ ಮನೆಗೆ ತೆರಳಿ ಭರ್ಜರಿ ಪ್ರಚಾರ ಮಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಹಾಗು ವಾರ್ಡ್ ನ ಎಲ್ಲಾ ಮುಖಂಡರು, ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.