ಶಾಸಕನನ್ನು ಹೊಡೆಯೋಕೆ ಬಂದ್ರೆ ಸುಮ್ಮನೆ ಇರಬೇಕಾ: ಭೀಮಾನಾಯ್ಕ

 1. ತೋಳುಬತಟ್ಟಿದ್ದು ನಿಜ
 2. ಬಿಜೆಪಿಯ ಪ್ರಚೋದನೆ
 3. ಆಂದ್ರದಿಂದ ಗೂಂಡಾಗಳಿಗೆ ಆಹ್ವಾನ
 4. ಸದಸ್ಯರ ಅಪಹರಣಕ್ಕೆ ಯತ್ನ

  ಬಳ್ಳಾರಿ, ನ.9: ಒಬ್ಬ ಶಾಸಕನಾದ ನನಗೇ ಹೊಡೆಯೋಕೆ ಬಂದ್ರೆ ನಾನು ಸುಮ್ಮನೇ ಇರಬೇಕಾ ಹೀಗೆಂದು ಸುದ್ದಿಗಾರರನ್ನು ಪ್ರಶ್ನಿಸಿದರು ಹಗರಿಬೊಮ್ಮಹಳ್ಳಿ ಶಾಸಕ ಭೀಮಾನಾಯ್ಕ ಅವರು.
  ಇಂದು ಅವರು ಹಗರಿಬೊಮ್ಮನಳ್ಳಿ ಪುರಸಭೆ ಚುನಾವಣೆ ವೇಳೆ ಮೊನ್ನೆ ನಡೆದ ಗಲಾಟೆ ಮತ್ತು ಅದನ್ನು ನಿಯಂತ್ರಿಸಲು ಪೊಲೀಸ್ ವ್ಯವಸ್ಥೆ ವಿಫಲವಾಗಿದ್ದರ ಬಗ್ಗೆ ಎಸ್ಪಿ‌ ಅಡಾವತ್ ಅವರಿಗೆ ದೂರು ಸಲ್ಲಿಸಿ‌ ಮತ್ತು ತಮಗೆ ರಕ್ಷಣೆ ನೀಡುವಂತೆ ಮನವಿ‌ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
  ಮೊನ್ನೆ ನಡೆದ ಗಲಾಟೆಯಲ್ಲಿ ನಾನು ತೋಳು ತಟ್ಟಿದ್ದು ನಿಜ ಅದಕ್ಕೆ ಕಾರಣ ಬಿಜೆಪಿ ನಾಯಕರು. ಅವರು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಗಲಾಟೆ ಮಾಡೋಕೆ ಪ್ರಚೋದನೆ ಮಾಡಿದರು. ಬಿಜೆಪಿ ಅವರು ಮಾಡುತ್ತಿದ್ದ ಗಲಾಟೆ ನೋಡಿ ಸುಮ್ಮನೆ ಇರೋಕೆ ಆಗದೇ ನಾನು ಕೂಡ ತೋಳು ತಟ್ಟಿದ್ದೇನೆ ಎಂದರು.
  ಮಾಜಿ ಶಾಸಕ ನೇಮಿರಾಜ್ ನಾಯ್ಕ ಆಂಧ್ರದ ಗುಂಡಾಗಳನ್ನು ಕರೆಸಿ ಗಲಾಟೆ ಮಾಡಿದಿಸಿದ್ದಾರೆಂದು ಆರೋಪಿಸಿದ ಅವರು.
  ಗಲಾಟೆ ವೇಳೆ ಪಿಎಸ್ಐ ಅವರನ್ನು ಕೂಡ ಬಿಜೆಪಿ ಯವರು ನೂಕಾಟ ತಳ್ಳಾಟ ಮಾಡಿದ್ದಾರೆ. ಹಗರಿಬೊಮ್ಮನ ಹಳ್ಳಿಯಲ್ಲಿ ಕಾಂಗ್ರೆಸ್ ನಾಯಕರಿಗೆ ರಕ್ಷಣೆ ನೀಡುವಂತೆ ಎಸ್ಪಿ ಅವರಿಗೆ ಮನವಿ ಮಾಡಿದ್ದೇನೆ ಎಂದರು.
  ಬಿಜೆಪಿ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ಇಲ್ವಾ ಎಂದ ಅವರು. ಘಟನೆಗೆ ಸಂಬಂಧಿದಂತೆ ಎಸ್ಪಿ ಅವರಿಗೆ ನಾನು ದೂರು ಕೊಟ್ಟಿದ್ದೇನೆ. ನಮಗೆ ರಕ್ಷಣೆ ಬೇಕಿದೆ. ನಾನು ಈ ಘಟನೆ ಸಂಬಂಧಿಸಿದಂತೆ ಗೃಹ ಮಂತ್ರಿಗಳಿಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರಿಗೆ ಪತ್ರ ಬರೆಯುವೆ ಎಂದರು.
  ಘಟನೆಯಲ್ಲಿ ಮಾಜಿ ಶಾಸಕ ನೇಮಿರಾಜ್ ನಾಯ್ಕ್ ಕೈವಾಡ ಇದೆ. ಎಂದೂ ಕೂಡ ಬಾರದ ಮಾಜಿ ಶಾಸಕ ನೇಮಿರಾಜ್ ನಾಯ್ಕ್ ಈಗ ಬಂದಿದ್ದಾರೆ. ಅವರ ಬೆಂಬಲಿಗರು ನಮ್ಮ ಪಟ್ಟಣ ಪಂಚಾಯತ್ ಸದಸ್ಯರನ್ನು ಹೈಝಾಕ್ ಮಾಡಲು ಪ್ರಯತ್ನ ಮಾಡಿದ್ದಾರೆ. ನಮ್ಮ ಸದಸ್ಯನನ್ನು ಹೊತ್ತುಕೊಂಡು ಹೋಗಲು ಬಂದಾಗ, ಗರಗದ ಪ್ರಕಾಶ್ ಬಾಲೇ ಅಂತ ಕರೆದ್ರು, ಅವರು ಹೊಡೆಯೋಕೆ ಬಂದ್ರು- ಹೊಡೆಯೋಕೆ ಬಂದಾಗ ನಾನು ತೋಳು ತಟ್ಟಿದ್ದು ನಿಜ ಎಂದರು.
  ಮಾಜಿ ಶಾಸಕ‌ ನೇಮಿರಾಜ್ ವಿರುದ್ಧ ಹರಿಹಾಯ್ದ ಅವರು ಜನ ನಿಮ್ಮನ್ನು ಸೋಲಿಸಿದ್ದಾರೆ- ಆದ್ರೂ ಬುದ್ದಿ ಬಂದಿಲ್ಲ. ನಿಮಗೆ- ಚುನಾವಣಾ ರಾಜಕೀಯ ಮಾಡಬೇಕು ಹೊರತು, ಈ ರೀತಿ ರಾಜಕೀಯ ದ್ವೇಷದ ರಾಜಕಾರಣ ಮಾಡೋದಲ್ಲ. 2023 ರಲ್ಲಿ ಚುನಾವಣೆ ಇದೆ ಬಾ, ಸ್ಪರ್ಧೆ ಮಾಡು, ಜನ ಆಶೀರ್ವಾದ ಮಾಡಿದ್ರೆ, ನೀನು ಆಡಳಿತ ಮಾಡು, ಅದನ್ನು ಬಿಟ್ಟು ಗುಂಡಾ ಸಂಸ್ಕೃತಿ ತೋರೋದು ಸರಿಯಲ್ಲ ಎಂದರು.
  ಅಲ್ಲಿನ ಸಿಪಿಐ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಎಸ್ಪಿಗೆ ದೂರು ನೀಡಿದ್ದೇನೆ ಎಂದರು.