ರಾಯಚೂರು,ಜೂ.೨೬-
ತಾಲೂಕಿನ ಯರಮರಸ್ ವಲಯಕ್ಕೆ ಶಾಶ್ವತ ಗ್ರಾಮ ಆಡಳಿತಧಿಕಾರಿ ನೇಮಕ ಮಾಡುವಂತೆ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಲು ಕಮಲಾಪೂರ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಯಚೂರು ಹೊರಹೊಲಯ ವ್ಯಾಪ್ತಿಯಲ್ಲಿ ಬರುವ ಯರಮರಸ್ ವಲಯಕ್ಕೆ ಪ್ರಸ್ತುತ ಪ್ರಭಾರಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಆಡಳಿತ ಧಿಕಾರಿಯಾದ ಮಂಜುನಾಥ ಇವರು ಕಳೆದ ೩-೪ ದಿನಗಳಿಂದ ಯರಮರಸ್ ವಲಯದ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸದರಿಂದ ಯರಮರಸ್ ನಿವಾಸಿಗಳಿಗೆ ಸರ್ಕಾರಿ ಸೌಲಭ್ಯ ಪಡೆಯಲು ತೊಂದರೆಯಾಗುತ್ತಿದೆ ಎಂದು ದೂರಿದರು.
ಈ ವಿಚಾರವನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೆ ಭೇಟಿ ಕೊಟ್ಟು, ಮಹಾಸ್ವಾಮಿಗಳ ತಹಶೀಲ್ ಕಾರ್ಯಾಲಯಕ್ಕೆ ನಾವು ಸಲ್ಲಿಸಿದ ಜಾತಿ & ಆದಾಯ ಪ್ರಮಾಣ ಪತ್ರ, ಜನನ-ಮರಣ ಪ್ರಮಾಣ ಪತ್ರ ಇನ್ನಿತರ ಕಂದಾಯ, ಇಲಾಖೆಯ ಸಲ್ಲಿಸಿದ ಅರ್ಜಿಗಳಿಗೆ ಸಹಿ ಅಥವಾ ಮೊಹರು ಕೂಡ ಮಾಡಲು ಕೇಳಿದರೆ, ಗ್ರಾಮ ಲೆಕ್ಕಾಧಿಕಾರಿಗಳು ಮಂಜುನಾಥ ಇವರು ನಾನು ಇಷ್ಟು ವರ್ಷ ಪ್ರಭಾರಿಯಾಗಿ ಆ ಯರಮರಸ್ ವಲಯಲ್ಲಿ ಕರ್ತವ್ಯ ಮಾಡಿದ್ದೇನೆ. ನನ್ನ ಮೇಲಾಧಿಕಾರಿ ತಹಶೀಲ್ದಾರರು ಯರಮರಸ್ ವಲಯದಿಂದ ತೆಗೆದು ಹಾಕಿ ಬೇರೆ ವಲಯಕ್ಕೆ ನಿಯೋಜಿಸಿದ್ದಾರೆ. ಆ ವಲಯಕ್ಕೆ ಹೊಸ ಗ್ರಾಮ ಲೆಕ್ಕಾಧಿಕಾರಿ ವೀರೇಶ ಎಂಬುವವರನ್ನು ತಹಶೀಲ್ದಾರರು ನೇಮಕ ಮಾಡಿದ್ದಾರೆಂದು ಸಾರ್ವಜನಿಕರು ಹೇಳಿದ್ದಾರೆ.
ಸಾರ್ವಜನಿಕರು ಕಳೆದ ೪-೫ ದಿನಗಳಿಂದ ತಹಶೀಲ್ ಕಾರ್ಯಲಯಕ್ಕೆ ಅಲೆದಾಡುತ್ತಿದ್ದಾರೆ.
ಈಗಾಗಲೆ ಕಾಲೇಜುಗಳು ಪ್ರಾರಂಭವಾಗಿರುವುದರಿಮದ ಜಾತಿ ಶಾಲಾ ಮತ್ತು ಆದಾಯ ಪ್ರಮಾಣ ಪತ್ರ, ೩೧೭(ಜೆ) ಪ್ರಮಾಣ ಪತ್ರ ಇನ್ನಿತರ ದಾಖಲಾತಿಗಳನ್ನು ಪಡೆದುಕೊಳ್ಳಲು ಶಾಲಾ ಕಾಲೇಜು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿರೇಶ ಅವರು ಎಸಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ. ಇವರನ್ನು ವಿಚಾರಿಸಿದರೆ ಯರಮರಸ್ ವಲಯಕ್ಕೆ ಆಡಳಿತಧಿಕಾರಿ ನಾನು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದಕಾರಣ ಯರಮರಸ್ ವಲಯಕ್ಕೆ ಶಾಶ್ವತ ಗ್ರಾಮ ಆಡಳಿತಧಿಕಾರಿ ನೇಮಕ ಮಾಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿ. ಎಸ್ ಯಲ್ಲಪ್ಪ, ನರಸಿಂಹಲು ಕಮಲಾಪೂರು, ಆನಂದ ಏಗನೂರು ಸೇರಿದಂತೆ ಉಪಸ್ಥಿತರಿದ್ದರು.