ಶಾಶ್ವತ ಕುಡಿಯುವ ನೀರು ಪೂರೈಕೆಗೆ ಸಂಪುಟ ಅಸ್ತು ಭೀಮಾ ನದಿಯಿಂದ ಪೈಪಲೈನ ಕಾಮಗಾರಿ: ದರ್ಶನಾಪುರ

ಶಹಾಪುರ:ಮೇ.28:ಹಲವಾರು ಹಳ್ಳಿಗಳ ಮತ್ತು ಶಹಾಪುರ ನಗರದ ಜನತೆಯ ಬಹುದಿನಗಳ ಬೇಡಿಕೆಯಾz.À ಭೀಮಾ ನದಿಯಿಂದ ಶಾಶ್ವತ ಕುಡಿಯುವ ನೀರಿನ ಪೈಪಲೈನ ಕಾಮಗಾರಿಗೆ ರಾಜ್ಯ ಬಿಜೆಪಿ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು.59 ಕೊಟಿ ರೂ,ಗಳ ಮಂಜೂರಾತಿಗೆ ರಾಜ್ಯ ಸರ್ಕಾರ ಅನುಮೋದಿಸಿದೆ,
ಕ್ಷೇತ್ರದ ಕನಸು ನನಸಾಗಿಸಲು ಸಹಕಾರ ನೀಡಿದ ಮುಖ್ಯಮಂತ್ರಿ ಬಿಎಸ್,ವೈ.ಮತ್ತು ಕರ್ನಾಟಕ ಒಳಚರಂಡಿ ಕುಡಿಯುವ ನೀರು ಪೂರೈಕೆ ಮಂಡಳಿಯ ಅಧ್ಯಕ್ಷರಾದ ರಾಜುಗೌಡರಿಗೆ ಶಹಾಪುರ ಮತ ಕ್ಷೇತ್ರದ ಮಾಜಿ ಮಂತ್ರಿಗಳು ಹಾಲಿ ಶಾಸಕರಾದ ಶರಣಬಸ್ಸಪ್ಪಗೌಡ ದರ್ಶನಾಪುರವರು ವಿಶೇಷವಾಗಿ ಅಭಿನಂಧನೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೆಳಕೆಯೊಂದನ್ನು ನೀಡಿ ಸದರಿ ಯೋಜನೆಯಿಂದ ಕ್ಷೇತ್ರದ ಶಿರವಾಳ ಮಡ್ನಾಳ. ಶಹಾಪುರ ನಗರ ಸೇರಿದಂತೆ ಇನ್ನೂ ಹಲವಾರು ಗ್ರಾಮಗಳಿಗೆ ಸದುಪಯೋಗವಾಗಲ್ಲಿದೆ. ಹಲವಾರು ವರ್ಷಗಳಿಂದಲೂ ಕಾಲುವೆ ನೀರನ್ನೆ ಆಶ್ರೆಯಸಿದ್ದ ಕ್ಷೇತ್ರದ ಜನರು ಇಂದು ಶಾಸ್ವತ ಕುಡಿಯುವ ನೀರು ಪೂರೈಕೆಯಿಂದ ನೆಮ್ಮದಿಯಾದಂತಾಗಿದೆ. ಮುಂದಿನ ದಿನಮಾನಗಳಲ್ಲಿ 59 ಕೊಟಿ ರೂ,ವೆಚ್ಚದ ಕ್ರೀಯಾ ಯೊಜನೆ ಸಿದ್ದತೆ ಮಾಡಿಕೊಂಡು. ಶಿಘ್ರ ಕಾಮಗಾರಿ ಪ್ರಾರಂಭಗೊಳ್ಳುವ ಇಂಗಿತವನ್ನು ದರ್ಶನಾಪುರವರು ತಿಳಿಸಿದರು. ಕ್ಷೇತ್ರ ಮತ್ತು ಜಿಲ್ಲಾ ಅಭಿವೃದ್ದಿ ವಿಷಯದಲ್ಲಿ. ಪಕ್ಷ ಬೇದ ಮರೆತುಕೊಂಡು ನಾವು ಒಂದೆ ಜಿಲ್ಲೆಯ ಪ್ರತಿನಿಧಿಗಳು ಎನ್ನುವ ಸಹಕಾರದ ಭಾವನೆಗಳು ಅಭಿವ್ಯಕ್ತವಾದಾಗ. ಪ್ರಗತಿ ಕಾಮಗಾರಿಗಳು ರೂಪಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರಾಜುಗೌಡರು ವಿಶೆಷ ಕಾಳಜಿಯಿಂದ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು ಸಂತಸ ತಂದಿದೆ.ಎಂದು ದರ್ಶನಾಪುರವರು ಹೇಳಿದರು.ಈ ಕುಡಿಯುವ ನೀರಿನ ವ್ಯವಸ್ಥೆಯಾದಲ್ಲಿ, ನಗರ ಸೇರಿದಂತೆ ಹಲವಾರು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯ ಉಂಟಾಗದು ಎಂದು ಅವರು ತಿಳಿಸಿದರು. ಈ ಹಿಂದೆ ಎಚ್,ಡಿ,ಕುಮಾರಸ್ವಾಮೀಯವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಹಣಕಾಸು ಇಲಾಖೆ ಅನುಮೋಧನೆಯಲ್ಲಿ ಈ ಯೋಜನೆ ತಟಸ್ಥಗೊಂಡಿತ್ತು.ಇಂದು ರಾಜ್ಯ ಬಿಜೆಪಿ ಸರ್ಕಾರ ಮತ್ತು ಸುರುಪುರ ಮತ ಕ್ಷೇತ್ರದ ಶಾಸಕರಾಗಿರುವ ರಾಜುಗೌಡರು ಸತತ ಪ್ರಯತ್ನಗಳಿಂದ ಇಂದು ಜನಮನದಾಸೆಯನ್ನು ಪೂರೈಸಿದಂತಾಗಿದೆ ಎಂದು ದರ್ಶನಾಪುರವರು ಹರ್ಷ ವ್ಯಕ್ತಪಡಿಸಿದರು.