ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಭೂ ವಿಜ್ಞಾನಿಗಳ ಭೇಟಿ

ರಾಯಚೂರು, ಸೆ. 14 -ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಹಾಗೂ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರ ಮಾರ್ಗದರ್ಶನದೊಂದಿಗೆ ಆರ್ಟ್ ಆಫ್ ಲಿವಿಂಗ್ ಫೌಂಡೆಶನ್ ನ ರಾಷ್ಟ್ರೀಯ ನಿರ್ದೇಶಕರು, ಭೂ ವಿಜ್ಞಾನಿಗಳಾದ ಡಾ. ಲಿಂಗರಾಜ್ ಯಲಿ, ಜಿಯೋಪಿಜಿಯಿಸ್ಟ್ ಸಹದೇವ್, ವಿಜ್ಞಾನಿಗಳಾದ ರವೀಂದ್ರ ಭಟ್, ಭವ್ಯತಾ, ಡಾ. ಶಾಂತಿ, ಶ್ರೀನಿವಾಸ್, ಸಣ್ಣ ನಿರಾವರಿ ಇಲಾಖೆಯ ಎಇಇ ಲೋಕೇಶ, ಪಿಡಿಓ ಶರಣಗೌಡ, ಮಲ್ಲಪ್ಪಗೌಡ, ಸೇರಿ ತಾಲೂಕ ಪಂಚಾಯ್ತಿಯ ಅಧಿಕಾರಿಗಳು ಸೇರಿ ಅನೇಕರು ಉಪಸ್ಥಿತರಿದ್ದರು.

ನಂತರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು,ಅಂತರ್ಜಲ‌ ಮಟ್ಟ ಹೆಚ್ಚಿಸಲು ಪ್ರಾಕೃತಿಕವಾಗಿರುವ ಕೆರೆಗಳು ಹಳ್ಳಗಳನ್ನು ವೀಕ್ಷಣೆ ಮಾಡಿದರು.