ಶಾವಂತಗೇರಾ ಗ್ರಾ.ಪಂ.31ಲಕ್ಷ ಅವ್ಯವಹಾರ- ಕ್ರಮಕ್ಕೆ ಆಗ್ರಹ

ಗಬ್ಬೂರು:-ದೇವದುರ್ಗ ತಾಲೂಕಿನ ಶಾವಂತಗೇರಾ ಗ್ರಾಮ ಪಂಚಾಯಿತಿಯಲ್ಲಿ 2022-23ನೇ ಸಾಲಿನ14,15ನೇ ಹಣಕಾಸು ಯೋಜನೆಯಲ್ಲಿ ಕುಡಿಯುವ ನೀರು, ನೈರ್ಮಲ್ಯ,ಘನತಾಜ್ಯ ಮತ್ತು ಬೀದಿ ದಿಪಗಳ ಕಾಮಗಾರಿಗಳಲ್ಲಿ ಖರೀದಿ ಮಾಡದೆ 31ಲಕ್ಷ ಅನುದಾನವನ್ನು ದುರ್ಬಳಕೆ ಮಾಡಿರುವುದನ್ನು ಖಂಡಿಸಿ.
             ಕೂಡಲೇ ತನಿಖಾ ತಂಡ ರಚನೆ ಮಾಡಿ, ಆರೋಪಿತ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಅಭಿವೃದ್ದಿ ಅಧಿಕಾರಿಯಾದ ಗುರುಸ್ವಾಮಿ ಮತ್ತು ದೇವದುರ್ಗದ ಇಓ ಪಂಪಾಪತಿ ಹಿರೇಮಠ ಬಗ್ಗೆ  ಜಿಲ್ಲಾ ಪಂಚಾಯತ ಮುಖ್ಯಧಿಕಾರಿಗಳಿಗೂ ದೂರು ನೀಡಿದರು ಏನು ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಇವರು ಕೂಡಲೇ ಇವರ ಮೇಲೆ ಸಂಪೂರ್ಣ ತನಿಖೆ ನಡೆಸಿ ಭ್ರಷ್ಟಚಾರದಲ್ಲಿ ವಂಚಿಸಿರುವ ಹಣವನ್ನು ಪಂಚಾಯಿತಿಗೆ ಕಟ್ಟಿಸಿ ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
            ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ14 ಮತ್ತು15ನೇ ಹಣಕಾಸು ಪಂಚವಾರ್ಷಿಕ ಯೋಜನೆಯಡಿ ಸಾಲಿಗೆ ಸರ್ಕಾರದಿಂದ ಅನುದಾನ ಬಿಡುಗಡೆಗೊಂಡಿದ್ದು, ಗ್ರಾಮ ಪಂಚಾಯಿತಿಯಿಂದ ಕೋಟ್ಯಾಂತರ ರೂಪಾಯಿ ಹಣವನ್ನು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಗುರುಸ್ವಾಮಿ ಇವರು ಸರ್ಕಾರದ ಬೊಕ್ಕಸಗಳನ್ನು ಲೂಟಿ ಮಾಡಿದ್ದಾನೆ ಎಂದು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
                2021-22ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಲವಾರು ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೇನೆಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅಭಿವೃದ್ದಿ ಅಧಿಕಾರಿಯಾದ ಗುರುಸ್ವಾಮಿ ಇವರು ಶಾವಂತಗೇರಾ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಸರ್ಕಾರದ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಡಿ‌.ಹೆಚ್. ನಾಯಕ ಹಂಚಿನಾಳ ಅವರು ಗಂಭಿರವಾಗಿ ಆರೋಪಿಸಿದ್ದಾರೆ.