ಶಾಲೆ ಮಗುವಿನ ಸರ್ವತೋಮುಖ ಬೆಳವಣಿಗೆಯ ಕೇಂದ್ರ

ಭಾಲ್ಕಿ:ನ.17:ಶಾಲೆ ಕೇವಲ ಭೌತಿಕ ಕಟ್ಟಡವಾಗಿರದೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಕೇಂದ್ರವಾಗಿದ್ದು, ಶಿಕ್ಷಕರು ಮಕ್ಕಳ ಏಳಿಗೆಗೆ ಅವಿರತವಾಗಿ ಶ್ರಮಿಸಬೇಕು ಎಂದು ಸಂಸ್ಥೆ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಹೇಳಿದರು.
ಇಲ್ಲಿಯ ಶ್ರೀ ಭಾಲ್ಕೇಶ್ವರ ಶಿಶುವಿಹಾರ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಗವಂತ ಎಲ್ಲ ವಿದ್ಯಾರ್ಥಿಗಳಿಗೆ ಅಧ್ಬುತ ಜ್ಞಾನ, ಶಕ್ತಿ, ಕೌಶಲವನ್ನು ಕರುಣಿಸಿದ್ದಾನೆ. ಇದನ್ನು ಅರಿತು ಗುರುಗಳು ಮಕ್ಕಳ ಅಂತರಂಗದ ಶಕ್ತಿಯನ್ನು ಹೊರಗೆಡವಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಪ್ರಮುಖರಾದ ಕ್ರಾಂತಿಕುಮಾರ ಸಿರ್ಸೆ, ಶಿವಲಿಂಗ ಕುಂಬಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಶಾಂತ ಬಿರಾದಾರ, ಶಿವಕುಮಾರ ಹಿರೇಮಠ, ಸಂಸ್ಥೆಯ ಕಾರ್ಯದರ್ಶಿ ಶಿವಕುಮಾರ ಪಾಟೀಲ ಮಾತನಾಡಿದರು.
2021-22 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿ ಪಡೆದ ನಾಗರಾಜ, ಸೃಷ್ಟಿ, ಮತ್ತು ಕಾವ್ಯ ಅವರಿಗೆ ನಿವೃತ್ತ ಮುಖ್ಯ ಶಿಕ್ಷಕ ಗುರಲಿಂಗಯ್ಯಾ ಸ್ವಾಮಿ ನಗದು ಬಹುಮಾನ ನೀಡಿ ಸನ್ಮಾನಿಸಿದರು.
ಅಭಿಷೇಕ ಕುಲಕರ್ಣಿ, ಸಂದೀಪ ದೇವಕೆ, ಬಸವರಾಜ ಯಾಲಾ, ಶಿವಶರಣಯ್ಯಾ ಸ್ವಾಮಿ, ನಿರ್ದೇಶಕರಾದ ಗೋವಿಂದರಾವ್ ಭಾಲ್ಕೆ, ವಿಜಕುಮಾರ ಭುಜಗುಂಡೆ, ಸಂತೋಷ ದೇವಪ್ಪಾ, ಸುನಿತಾ ಸಂಗೋಳ್ಗೆ, ಎಂ.ಪಿ ರಾಠೋಡ್, ಮುಖ್ಯಶಿಕ್ಷಕ ¨ಲಾಜಿ ಬಿರಾದಾರ ಉÀಸ್ಥಿತರಿದ್ದರು. ಶಿವಕಾಂತಾ ರುದನೂರೆ ನಿರೂಪಿಸಿದರು. ಶಿವಶಂಕರ ಸ್ವಾಮಿ ಸ್ವಾಗತಿಸಿದರು. ರೇವಣಪ್ಪಾ ಮೂಲಗೆ ವಂದಿಸಿದರು.