ಶಾಲೆ ಬೀಗ ಮುರಿದು ಸಾಮಗ್ರಿ ಕಳವು

ಕಲಬುರಗಿ,ಜು.26-ಶಾಲೆಯ ಬೀಗ ಮುರಿದು ಟಿವಿ, ಪ್ರಿಂಟರ್ ಮತ್ತು ಝರಾಕ್ಸ್ ಮಷೀನ್ ಕಳವು ಮಾಡಿಕೊಂಡು ಹೋಗಿರುವ ಘಟನೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಪಾಳಾ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಗಣಕಯಂತ್ರ ಕೋಣೆಯ ಬೀಗ ಮುರಿದು 2.50 ಲಕ್ಷ ರೂ.ಮೌಲ್ಯದ ಐ-ಆಕ್ಟಿವಾ ಪ್ಯಾನಲ್ ಟಿವಿ, 2 ಲಕ್ಷ ರೂ.ಮೌಲ್ಯದ ತೋಸಿಭಾ ಕಂಪನಿಯ ಪ್ರಿಂಟರ್ ಮತ್ತು ಝರಾಕ್ಸ್ ಮಷೀನ್ ಕಳವು ಮಾಡಿಕೊಂಡು ಹೋಗಲಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ನೀಲಕಂಠ ಸಿಂಧೆ ಅವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.