ಶಾಲೆ ಬೀಗ ಮುರಿದು  ಪ್ರೊಜೆಕ್ಟರ್, ಕ್ರೀಡಾ ಸಾಮಗ್ರಿ, ಊಟದ ಎಣ್ಣೆ ಕದ್ದೊಯ್ಯದ ಕಳ್ಳರು.


ಕೂಡ್ಲಿಗಿ.ಆ.6 :- ಶಾಲೆಯ ಬೀಗಮುರಿದು ಪ್ರೊಜೆಕ್ಟರ್,  ಊಟದ  ಎಣ್ಣೆ, ವಾಲಿಬಾಲ್ ಹಾಗೂ ನೆಟ್ ಮತ್ತು ಶೂಗಳನ್ನು ಯಾರೋ ಕಳ್ಳರು ಕದ್ದೊಯ್ದ ಘಟನೆ ತಾಲೂಕಿನ ಗಡಿಭಾಗವಾದ ತಾಯಕನಹಳ್ಳಿ ಗ್ರಾಮದ ಸರ್ಕಾರಿ ಹೈಸ್ಕೂಲ್ ನಲ್ಲಿ ಕಳೆದ ರಾತ್ರಿಯಿಂದ ಇಂದು ಬೆಳಗಿನ ಜಾವದ ಮಧ್ಯವಧಿಯಲ್ಲಿ ಜರುಗಿದೆ.
ಇಂದು ಶನಿವಾರ ಇರುವ ಕಾರಣ ಬೆಳಿಗ್ಗೆ ಶಾಲೆಯ ಬೀಗ ತೆರೆದು ಸ್ವಚ್ಛಗೊಳಿಸಲು ಬಂದ ಡಿ ಗ್ರೂಪ್ ನೌಕರ ಶಾಲೆಯ ಬಾಗಿಲು ತೆಗೆದಿದ್ದನ್ನು ಕಂಡು ತಕ್ಷಣ ಶಾಲಾ ಮುಖ್ಯ ಗುರುಗಳಿಗೆ ಮಾಹಿತಿ ನೀಡಲಾಗಿ ತಕ್ಷಣ ಧಾವಿಸಿದ ಮುಖ್ಯಗುರುಗಳು ಹಾಗೂ ಶಿಕ್ಷಕರು ಬಂದು ನೋಡಲಾಗಿ ಮೊದಲು ಆಫೀಸ್ ರೂಮ್ ಬಾಗಿಲು ಮುರಿದು ಅಲ್ಲಿದ್ದ ಶಾಲಾ ಕೊಠಡಿಗಳ ಬೀಗ ತೆಗೆದುಕೊಂಡು ಹೋದ ಕಳ್ಳರು ಎಲ್ಲಾ ರೂಮ್ ಗಳನ್ನು ತೆಗೆದು ಅಲ್ಲಿ ಏನು ಇಲ್ಲದಿದ್ದರಿಂದ ಮತ್ತೆ ಬಾಗಿಲು ಹಾಕಿದ್ದಾರೆ ನಂತರ ಕ್ರೀಡಾ ಕೊಠಡಿಗೆ ಹಾಗೂ ಆಹಾರ ಸಾಮಗ್ರಿಗಳಿರುವ ಕೊಠಡಿಗಳ ಬೀಗ ಮುರಿದು ಅಲ್ಲಿದ್ದ ಶಾಲಾ 48 ಸಾವಿರ ರೂ ಬೆಲೆಬಾಳುವ ಪ್ರೊಜೆಕ್ಟರ್, ಐದು ಸಾವಿರ ರೂ ನ 30ಲೀಟರ್ ಸನ್ ಫ್ಲವರ್ ಎಣ್ಣೆ, 1900 ರೂ ಬೆಲೆಬಾಳುವ ಮೂರು ವಾಲಿಬಾಲ್, ಎಂಟು ಸಾವಿರ ರೂ ಬೆಲೆಗಳ 6 ಜೊತೆ ಶೂ ಗಳು, 1200 ರೂ ಬೆಲೆಯ ವಾಲಿಬಾಲ್ ನಟ್ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಈ ಘಟನೆ ಕುರಿತಂತೆ ಹೊಸಹಳ್ಳಿ ಪೊಲೀಸರಿಗೆ ಮಾಹಿತಿ ನೀಡಲಾಗಿ ತಕ್ಷಣ ಧಾವಿಸಿದ ಹೊಸಹಳ್ಳಿ ಪಿಎಸ್ಐ ಹಾಗೂ ಸಿಬ್ಬಂದಿ ಪರಿಶೀಲನೆ ಮಾಡಿಸಿದ್ದಾರೆ ತಾಯಕನಹಳ್ಳಿ ಸರ್ಕಾರಿ ಹೈಸ್ಕೂಲ್ ಮುಖ್ಯಗುರುಗಳಾದ ರಂಗಪ್ಪ ನೀಡಿದ ದೂರಿನಂತೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದಿದೆ.

Attachments area