ಶಾಲೆ ಪ್ರಾರಂಭೋತ್ಸವ


ಗುಳೇದಗುಡ್ಡ,ಜೂ.2: ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಸಂಭ್ರಮದಿಂದ ಆಚರಿಸಲಾಯಿತು.
ಶಾಲೆಯ ಪ್ರಾಚಾರ್ಯರ ಮಹೇಶ ಜಕ್ಕನ್ನವರ, ಉಪಪ್ರಾಚಾರ್ಯರು ಎಂ.ಪಿ, ಮಾಗಿ ಹಾಗೂ ಶಿಕ್ಷಕರು ಶಾಲಾ ಮಕ್ಕಳಿಗೆ ಹೂವು ನೀಡಿ, ಡ್ರಮ್ಸೆಟ್ ಬಾರಿಸುವ ಮುಖಾಂತರ ಸ್ವಾಗತಿಸಿ, ಸಿಹಿ ಹಂಚಲಾಯಿತು. ನಂತರ ಶಾರದಾ ಮಾತೆಗೆ ಪೂಜೆಯನ್ನು ಸಲ್ಲಿಸಿ, ಶಾಲಾ ಮಕ್ಕಳಿಗೆ ಈ ವ?ರ್Àದ ಪಠ್ಯ ಪುಸ್ತಕಗಳನ್ನ ವಿತರಣೆ ಮಾಡಲಾಯಿತು. ನಂತರ ಸಿ.ಎಂ. ಕುರುಬರ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲಾ ಪ್ರಾರಂಭೋತ್ಸವದ ನೃತ್ಯ ಗೀತೆಯನ್ನು ವಿದ್ಯಾರ್ಥಿಗಳಿಂದ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಆರ್.ವಿ. ಬುಳ್ಳಾ. ಎಂ. ಎಂ. ಜಾಬಾಲಿ, ಸಿ. ಪಿ. ಹಲಗಲಿ, ದೇವರಾಜ್ ಅಡ್ಡಿ, ಎಲ್. ಆಯ್. ಅಂಗಡಿ, ಎಸ್. ಎಂ. ಬೇಸಘರ, ಎಸ್ ಎಸ್ ಪಟ್ಟಣಶೆಟ್ಟಿರವರು, ಪಿ. ಆರ್. ಮೂಲಂಗಿ, ಎಸ್ ಎಸ್ ಉಳ್ಳೆಗಡ್ಡಿ, ಎಸ್.ಎಸ್. ಬಿರಾದರ ಎಸ್. ಎನ್. ದೇವಗಿರಿಕರ, ಎಸ್ ಭಾಗ್ಯಮ,್ಮ ಶಿಲ್ಪಾ ದಳವಾಯಿ, ಹಾಗೂ ಸಿಬ್ಬಂದಿ ಇದ್ದರು.