ಶಾಲೆ ಪ್ರಾರಂಭಕ್ಕೆ ಪೂರ್ವ ಸಿದ್ಧತೆ

ಲಕ್ಷ್ಮೇಶ್ವರ, ಡಿ 31- ಕಳೆದ ಹತ್ತು ತಿಂಗಳಿನಿಂದ ಮಹಾಮಾರಿ ಕೊರೋನಾ ವೈರಸ್ ಭೀತಿಯಿಂದಾಗಿ ಇಡಿ ದೇಶ ತಲ್ಲಣಗೊಂಡು ಲಾಕ್ ಡೌನ್ ನಂತಹ ಕಠಿಣ ಕ್ರಮಗಳಿಂದಾಗಿ ಶಿಕ್ಷಣ ಸಂಸ್ಥೆಗಳು ಮುಚ್ಚಿದವು.
ಈಗ ಮತ್ತೆ ಹೊಸ ವರ್ಷದ ಜನವರಿ 1 ರಿಂದ ಶೈಕ್ಷಣಿಕ ಸಂಸ್ಥೆಗಳು ಆರಂಭಗೊಳ್ಳುತ್ತಿದ್ದು, ಕೋವಿಡ್ ಮಾರ್ಗಸೂಚಿ ಪ್ರಕಾರ ಶೈಕ್ಷಣಿಕ ಸಂಸ್ಥೆಗಳನ್ನು ರೋಗ ನಿರೋಧಕ ಕ್ರಿಮಿನಾಶಕಗಳನ್ನು ಸಿಂಪಡಿಸಿ ಶಾಲಾ ಕೊಠಡಿಗಳಲ್ಲಿ ಸಾಮಾಜಿಕ ಅಂತರದನ್ವಯ ಮತ್ತು ಮಾಸ್ಕ್ ಕಡ್ಡಾಯಗೊಳಿಸಿ ಶಾಲೆ ಆರಂಭಿಸುವಂತೆ ನಿರ್ದೇಶಿಸಿದೆ.
ಈ ಹಿನ್ನೆಲೆಯಲ್ಲಿ ತಾಲೂಕಿನ ಬಟ್ಟೂರು ಗ್ರಾಮದಲ್ಲಿ ಗ್ರಾಮಪಂಚಾಯಿತಿಯವರು ಗ್ರಾಮದ ಶ್ರೀ ಫಕ್ಕೀರಪ್ಪ ವೀರಪ್ಪ ಅಂಗಡಿ ಪ್ರೌಢಶಾಲೆಯಲ್ಲಿ ಗ್ರಾಪಂ ಸಿಬ್ಬಂದಿಯವರು ಶಾಲೆಯ ಆವರಣ ಮುಂಭಾಗದ ಗೇಟು, ಶಾಲಾ ಆವರಣ ಕೊಠಡಿಗಳನ್ನು ಶುಚಿಗೊಳಿಸಿದ್ದಾರೆ.
ಹತ್ತು ತಿಂಗಳ ನಂತರ ಮತ್ತೆ ಮಕ್ಕಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿದ್ಯಾಗಮದ ಮುಖಾಂತರ ಮತ್ತೆ ಶಾಲೆ ಬರುತ್ತಿರುವುದು ಮಕ್ಕಳ ಕಲರವ ಮೂಡಲಿದೆ.
ಗ್ರಾಪಂ ಅಧ್ಯಕ್ಷ ಎಸ್.ಸಿ. ಶಿಗ್ಲಿಮಠ, ಪಿ.ಡಿ.ಒ ಎಂ.ಡಿ.ಮಾದರ ಅವರು ಗ್ರಾಮದ ಎಲ್ಲ ಶಾಲೆಗಳ ಶುಚಿತ್ವಕ್ಕೆ ಕ್ರಮ ಕೈಗೊಂಡಿದ್ದಾರೆ.