ಶಾಲೆ ತೊರೆಯೋಣ ಅಭಿಯಾನಕ್ಕೆ ಕೈ ಜೋಡಿಸಿ : ಬೀರಲಿಂಗ ಗೌಡಗೇರಾ

ಶಹಾಪೂರ:ಆ.23:ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳ ಈಡೇರಿಕೆಗಾಗಿ ಸಾಂಕೇತಿಕವಾಗಿ ಎರಡು ದಿನಗಳ ಕಾಲ ಅತಿಥಿ ಶಿಕ್ಷಕರು ಭೋದನಾ ಚಟುವಟಿಕೆಗಳನ್ನು ಹಾಗೂಶಾಲೆ ತೊರೆಯುವುದು. ರಾಜ್ಯ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ (ರಿ) ಕರ್ನಾಟಕ, ರಾಜ್ಯದ ಸರಕಾರಿ ಶಾಲೆಗಳಲ್ಲಿ ಕಳೆದ 11-12 ವರ್ಷಗಳಿಂದ ಕಡಿಮೆ ವೇತನ, ಸೇವಾ ಭದ್ರತೆ, ಕೃಪಾಂಕವು ಸೇರಿದಂತೆ ಇನ್ನು ಯಾವುದೇ ರೀತಿಯ ಸೌಲಭ್ಯಗಳಿಲ್ಲದೆ ಪ್ರಾಮಾಣಿಕತೆಯಿಂದ ಶೈಕ್ಷಣಿಕ ಬದುಕನ್ನು ಕಟ್ಟಿಕೊಡುವಲ್ಲಿ ಕಾರ್ಯನಿರತರಾಗಿ ದ್ದಾರೆ.ಸರಕಾರದ ಹಂತದಲ್ಲಿ ಹಾಗೂಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರತಿಯೊಂದು ಅಧಿಕಾರ ವರ್ಗಕ್ಕೂ ಸಾಕಷ್ಟು ಬಾರಿ ಹಾಗೂ ಇದೆ ವರ್ಷದ ಮಾರ್ಚ್, ಹಾಗೂ ಜುಲೈ ತಿಂಗಳಿನಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಹೋರಾಟ ಕೈಗೊಂಡು, ಪ್ರತಿಭಟನಾನಿರತ ಜಾಗಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ಬಂದು ಅಹವಾಲು ಸ್ವೀಕರಿಸಿ ಬೇಡಿಕೆಗಳ ಈಡೇರಿಕೆಯ ಬಗ್ಗೆ ಸೂಕ್ತ ಭರವಸೆ ನೀಡಿದ್ದರು. ಶಿಕ್ಷಣ ಇಲಾಖೆಯ ಸಚಿವರಾದ ಮಧು ಬಂಗಾರಪ್ಪರವರ ಸಮ್ಮುಖದಲ್ಲಿ ಅತಿಥಿ ಶಿಕ್ಷಕರ ಸಮಸ್ಯೆ ಗಳ ಬಗ್ಗೆ ಸಭೆಯನ್ನು ಮಾಡಿದ್ದರು. ಸಚಿವರು ಕೂಡ ಸೂಕ್ತ ಭರವಸೆಯನ್ನು ನೀಡಿದರೂ ಸಹಈವರೆಗೆ ಯಾವುದೇ ಒಂದೇ ಒಂದು ಬೇಡಿಕೆ ಈಡೇರಿರುವುದಿಲ್ಲ.

ಇಷ್ಟೆಲ್ಲ ಬೆಳವಣಿಗೆಗಳು ಗತಿಸಿದರು ಕೂಡ ಯಾವ ಒಂದು ಅತಿಥಿ ಶಿಕ್ಷಕರ ಬೇಡಿಕೆಗಳ ಈಡೇರಿಕೆ ಕುರಿತಂತೆ ಸರಕಾರದಿಂದ ಆದೇಶಗಳು ಬಾರದ ಹಿನ್ನಲೆಯಲ್ಲಿ ಮೇಲೆ ತಿಳಿಸಿದಂತೆ ಸಾಮೂಹಿಕವಾಗಿ ಹಾಗೂ ಸಾಂಕೇತಿಕವಾಗಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಸ್ತ ಅತಿಥಿ ಶಿಕ್ಷಕರು ಎರಡು ದಿನಗಳ ಕಾಲ ನಮ್ಮ

ಬೇಡಿಕೆಗಳು ಈಡೇರಲು ಶಾಲೆ ತೊರೆಯೋಣ ಅಭಿಯಾನವನ್ನು ಕೈಗೊಳ್ಳಬೇಕು. ಆದ್ದರಿಂದ ರಾಜ್ಯಾದ್ಯಂತ ದಿನಾಂಕ: 23-08-02023 ಮತ್ತು 24.08.2023 ಈ ಎಡರು ದಿನಗಳವರೆಗೆ ಶಾಲೆ ತೊರೆಯೋಣ ಅಭಿಯಾನದ ಪ್ರಯುಕ್ತ ಎರಡು ದಿನಗಳು ಜಿಲ್ಲೆಯ ಯಾವಬ್ಬ ಅತಿಥಿ ಶಿಕ್ಷಕರು ಶಾಲೆಗೆ ಹಾಜರಾಗದೇ ಮನೆಯಲ್ಲಿದ್ದು ಶಾಲೆ ತೊರೆಯೋಣ ಅಭಿಯಾನಕ್ಕೆ ಬೆಂಬಲ ನೀಡಬೇಕೆಂದು ಪತ್ರಿಕೆ ಮೂಲಕ ವಿನಂತಿ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ(ರಿ)ಯಾದಗಿರಿ ಜಿಲ್ಲಾ ವತಿಯಿಂದ ಬುಧುವಾರ ದಿನಾಂಕ 23-08-2023 24-08-2023 ರಾಜ್ಯ ವ್ಯಾಪ್ತಿ ಎರಡು ದಿನ ಸಾಂಕೇತಿಕ ಶಾಲೆ ತೊರೆದು ಧರಣಿ ಹಮ್ಮಿಕೊಳ್ಳಲಾಗುತ್ತಿದ್ದು, ಅತಿಥಿ ಶಿಕ್ಷಕರ ಸಂಘದ ಬೇಡಿಕೆಗಳಾದ ಅತಿಥಿ ಶಿಕ್ಷಕರ ವೇತನ ಹೆಚ್ಚಳ ಹಾಗೂ ಐದು ಕೃಪಾಕ ನೀಡುವುದು ಪ್ರತಿ ಸರಿಯಾಗಿ ತಿಂಗಳ ವೇತನ ಬಿಡುಗಡೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವಂತೆ ಸುಪ್ರೀಂ ಕೋರ್ಟ್ ಆದೇಶವನ್ನು ಸರ್ಕಾರ ಗಣನೆಗೆ ತೆಗೆದುಕೊಂಡು ವೇತನ ಹೆಚ್ಚಳ ಮಾಡುವುದು ಸಿ.ಎಲ್ ಮತ್ತು ಇ.ಎಲ್ ನೀಡುವುದು ಹಾಗೂ ಮಹಿಳಾ ಅತಿಥಿ ಶಿಕ್ಷಕಿಯರಿಗೆ ವೇತನ ಸಹಿತ ಹೆರಿಗೆ

ರಜೆ ನೀಡುವುದು ಸರಕಾರಿ ಶಿಕ್ಷಕರ ಜೊತೆ ಹಾಜರಿ ಅತಿಥಿ ಶಿಕ್ಷಕರ ಹಾಜರಿ ಪುಸ್ತಕ ವಿಲೀನೀಕರಣ ಹಿರಿತನ ಹಾಗೂ ಸೇವೆ ಆದರೂ ಪರಿಗಣಿಸಿ ದೆಹಲಿ ಹರಿಯಾಣ ಪಂಜಾಬ್ ರಾಜ್ಯಗಳ ರೀತಿಯಲ್ಲಿ ಸೇವೆಯನ್ನ ಆದರಿಸಿ ಕಾಯಂಗೊಳಿಸಬೇಕು ಮೊದಲ ಕೆಲಸ ಮಾಡಿದವರಿಗೆ ಮೊದಲ ಆದ್ಯತೆ ನೀಡಿ ಮೆರಿಟ್ ಪದ್ಧತಿಯನ್ನು ಕೈಬಿಡಬೇಕು ಈ ಮೊದಲೇ ಮಾರ್ಚ್ ಮತ್ತು ಜುಲೈನಲ್ಲಿ ನಡೆದ ಪ್ರತಿಭಟನೆಯಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ನೀಡಿದ ಭರವಸೆಗಳಾದ ಹಾಜರಾತಿ ವಿಲೀನೀಕರಣ ಹಾಗೂ ಪೇಮೆಂಟ್ ಹೆಚ್ಚಳ ವರ್ಷದ 12 ತಿಂಗಳು ಅತಿಥಿ ಶಿಕ್ಷಕರನ್ನು ಮುಂದುವರಿಸುತ್ತವೆ.

ಶೇಕಡ ಐದು ಕೃಂಪಾಕ ನೀಡುತ್ತೆವೆ ಎಂದು ಹೇಳಿದರು

ಈ ಬೇಡಿಕೆಗಳನ್ನು ಈಡೇರಿಸಿಲ್ಲಸಚಿವರನೀಡಿದ ಆಶ್ವಾಸನೆ ಗಾಳಿಗೆ ತೂರಿದಂತಾಗಿದೆ ಅತಿಥಿ ಶಿಕ್ಷಕರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾರೆ. ಎರಡು ದಿನಗಳು ಸಾಂಕೇತಿಕ ಧರಣಿ ಹಮ್ಮಿಕೊಂಡಿದ್ದು ಆಗಲಾದರೂ ಸರಕಾರ ಹಾಗೂ ಸಚಿವರು ಬೇಡಿಕೆ ಈಡೇರಿಸದೇ ಹೋದರೆ ಮುಂಬರುವ ದಿನಗಳಲ್ಲಿ ಎರಡು ದಿನಗಳ ಬದಲಾಗಿ ಸರ್ಕಾರ ನಮ್ಮ ಬೇಡಿಕೆ ಇಡೆರಿಸುವವರೆಗೂ ನಿರಂತರವಾಗಿ ಅನಿರ್ದಿಷ್ಟಾವಧಿ ಕಾಲ ಶಾಲೆ ತೋರೆಯುವ ಮೂಲಕ ಧರಣಿಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರಾಜ್ಯ ಅತಿಥಿ ಶಿಕ್ಷಕರ ಸಂಘದ ಮುಖಂಡರಾದ ಶ್ರೀ ಬೀರಲಿಂಗಪ್ಪ ಗೌಡಗೇರಾ ವಿನಂತಿಸಿದ್ದಾರೆ