ಶಾಲೆ, ಕಾಲೇಜುಗಳಿಗೆ ನಾಲ್ಕು ಬೆಂಚ್ ಕೊಟ್ಟರೆ ಸಾಲದು, ಪದವಿಧರರ ಬೇಡಿಕೆಗೆ ಸ್ಪಂದಿಸಬೇಕಿದೆ: ಪ್ರತಾಪರೆಡ್ಡಿ

ಬೀದರ್:ಮೇ.17: ಕೇವಲ ಶಾಲೆಗಳಿಗೆ ನಾಲ್ಕಾರು ಬೇಂಚ್‍ಗಳು ಮತ್ತು ಶೌಚಾಲಯ ಕಟ್ಟಿಸಿಕೊಟ್ಟರೆ ಸಾಲದು. ಪದವೀಧರರ ಸಮಸ್ಯೆಗಳು ಬಗೆಹರಿಸಬೇಕಿದೆ ಎಂದು ವಿಧಾನ ಪರಿಷತ್ ಸ್ವತಂತ್ರ ಅಭ್ಯರ್ಥಿ ಪ್ರತಾಪರೆಡ್ಡಿ ಹೇಳಿದರು.
ಈಶಾನ್ಯ ಪದವೀಧರರ ಮತಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ನಾರಾ ಪ್ರತಾಪರೆಡ್ಡಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರ ಸಮಸ್ಯೆಗಳು, 371 ಜೆ ಅಡಿಯಲ್ಲಿ ನೇಮಕವಾದ ಶಿಕ್ಷಕರ ಬಡ್ತಿ ಸಮಸ್ಯೆಗಳಿಗೆ ಪರಿಹಾರ, ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಆರೋಗ್ಯ ವಿಮೆ ಒದಗಿಸಿಕೊಡುವುದು ಸೇರಿದಂತೆ ಒಟ್ಟು 42 ವಿಧಾನಸಭಾ ಕ್ಷೇತ್ರಗಳು, ಐದು ಲೋಕಸಭಾ ಕ್ಷೇತ್ರಗಳು ಮತ್ತು ಏಳು ಜಿಲ್ಲೆಗಳ ಪದವೀಧರರ ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವೆ. ಯಾರ ಗುಲಾಮಗಿರಿಯೂ ಮಾಡದೆ ಈ ಕುರಿತು ಧೈರ್ಯದಿಂದ ಸದನದಲ್ಲಿ ಧ್ವನಿ ಎತ್ತುವೆ ಎಂದು ಪ್ರತಾಪರೆಡ್ಡಿ ಪ್ರತಿಪಾದಿಸಿದರು
ಹಿಂದಿನ ಎಂಎಲ್‍ಸಿಗಳು ಏನೇನು ಕೆಲಸ ಮಾಡಿದ್ದಾರೆ ಎಂದು ಧೈರ್ಯವಾಗಿ ಹೇಳಲಿ ನೋಡೋಣ ಎಂದು ಸವಾಲ್ ಎಸೆದರಲ್ಲದೆ ಇದುವರೆಗೆ ಸದನದಲ್ಲಿ ಎಷ್ಟು ಪ್ರಶ್ನೆ ಕೇಳಿದ್ದಾರೆ? ಎಲ್ಲಾ ಜಿಲ್ಲೆಗಳಿಗೂ ಎಷ್ಟು ಬಾರಿ ಪ್ರವಾಸ ಕೈಗೊಂಡಿದ್ದಾರೆ? ಎಷ್ಟು ಶೈಕ್ಷಣಿಕ ಸಂಸ್ಥೆಗಳಿಗೆ ಭೇಟಿ ನೀಡಿದ್ದಾರೆ ಎಂದು ಬಿಜೆಪಿ ಮತ್ತು ಕಾಂಗ್ರೇಸ್ ಅಭ್ಯರ್ಥಿಗಳಿಗೆ ಪ್ರಶ್ನಿಸಿದ್ದಾರೆ.,
ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಸಗಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ/ಉಪನ್ಯಾಸಕರಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಅನುದಾನ ಒದಗಿಸಿಕೊಟ್ಟು ಅವರ ಜೀವನ ಮಟ್ಟ ಸುಧಾರಿಸಲು ಪ್ರಯತ್ನ ಮಾಡಲಾಗುವುದು, ಕ.ಕ.ಭಾಗದ ಕಲೆ ಸಾಹಿತ್ಯ ಮತ್ತು ಸಂಸ್ಕøತಿ ವೃದ್ಧಿಗಾಗಿ ಸತತ ಪ್ರಯತ್ನ, ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಕ.ಕ.ದ ಏಳು ಜಿಲ್ಲೆಗಳಲ್ಲಿ ಉದ್ಯೋಗ ಮೇಳ ಆಯೋಜನೆ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಹೀಗಾಗಿ ಕಳೆದ ಹಲವು ವರ್ಷಗಳಿಂದ ಬಿಜೆಪಿ ಮತ್ತು ಕಾಂಗ್ರೇಸ್ ಅಭ್ಯರ್ಥಿಗಳ ಮುಖ ನೋಡಿದ್ದೀರಿ. ಈ ಬಾರಿ ಸ್ವತಂತ್ರ ಅಭ್ಯರ್ಥಿಯಾದ ನನಗೂ ಈ ಭಾಗದ ಅಭಿವೃದ್ಧಿಗೆ ಒಂದು ಅವಕಾಶ ನೀಡಿ, ಪ್ರಥಮ ಪ್ರಾಶಸ್ತ??ದ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು.
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ, ಚಿತ್ರನಟ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಪ್ರತಾಪರೆಡ್ಡಿಯವರು ಇಸ್ಕಾನ್ ಸಂಸ್ಥೆ 4 ಎಕರೆ ಜಮೀನು, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎಕರೆ ಜಮೀನು, ಭಾರತೀಯ ವೈದ್ಯಕೀಯ ಸಂಸ್ಥೆಗೆ 1 ಎಕರೆ ಜಮೀನು ದಾನವಾಗಿ ನೀಡಿದ್ದು, ರೈತರ ಸಮಸ್ಯೆಗೆ ಸ್ಪಂದಿಸಿ ರೈತರಿಗೆ 630 ಕೋಟಿ ಪರಿಹಾರ ಧನ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದು ಇವರ ಉದಾರತೆಗೆ ಉದಾಹರಣೆಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ನಸಿಮೋದ್ದಿನ್ ಪಟೇಲ್ ಉಪಸ್ಥಿತರಿದ್ದರು.