ಮಾನ್ವಿ,ಜು.೨೪-ತಾಲೂಕಿನ ಸುಂಕೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಸ್ತ್ರಿಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ನಿರ್ಮಾಣವಾಗಿ ಕೇವಲ ನಾಲ್ಕೈದು ತಿಂಗಳು ಕಳೆದಿಲ್ಲ ಅಷ್ಟರಲ್ಲೇ ಶಾಲೆ ಕಾಂಪೌಂಡು ಸಂಪೂರ್ಣವಾಗಿ ಹಾಳಾಗಿ ಬೀಳುವ ಹಂತದಲ್ಲಿದೆ ಕೂಡಲೇ ದುರಸ್ತಿ ಮಾಡಿ ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಶಾಲಾ ಆಡಳಿತ ಮಂಡಳಿಯಿಂದ ತಾಲೂಕ ಪಂಚಾಯತಿ ಅಧಿಕಾರಿಗೆ ಮನವಿ ಪತ್ರವನ್ನು ನೀಡಲಾಗಿದೆ.
ನಂತರ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೃಷ್ಣ ಮಾತಾನಾಡಿ ನಾಲ್ಕೈದು ತಿಂಗಳಿಂದೆ ಮಾಡಿದ ನಮ್ಮೂರ ಶಾಲೆಯ ಕಾಂಪೌಂಡ್ ಸಂಪೂರ್ಣವಾಗಿ ಕಳಪೆ ಮಟ್ಟದ ಸಾಮಗ್ರಿಗಳಿಂದ ನಿರ್ಮಾಣ ಮಾಡಿದ ಪರಿಣಾಮವಾಗಿ ಇಂದು ಗೋಡೆಯು ಬಿರುಕು ಬಿಟ್ಟಿದ್ದು ಇನ್ನೂ ಕೆಲವು ದಿನಗಳಲ್ಲಿ ಬಿದ್ದು ಶಾಲಾ ಮಕ್ಕಳಿಗೆ ಪ್ರಾಣಹಾನಿ ಉಂಟು ಮಾಡುವ ಸಂಭವವಿದೆ ಆದರಿಂದ ಕೂಡಲೇ ಶಾಲಾ ಗೋಡೆಯನ್ನು ಮರು ನಿರ್ಮಾಣ ಮಾಡಿ ಶಾಲೆ ಮಕ್ಕಳನ್ನು ರಕ್ಷಣೆ ಮಾಡಬೇಕು ಹಾಗೂ ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳುವಂತೆ ತಿಳಿಸಿದರು..
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ತಿಮ್ಮಪ್ಪ, ಮುಖಂಡರಾದ ಜಲಾಲ್,ರಘು ಪಾಟೀಲ ಸೇರಿದಂತೆ ಅನೇಕರು ಇದ್ದರು.