ಶಾಲೆ ಆವರಣದಲ್ಲಿ ವಿದ್ಯಾಗಣಪತಿ ಪ್ರತಿಷ್ಟಾಪನೆ

ಕೋಲಾರ,ಸೆ,೯- ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಿರ್ಮಿಸಿರುವ ಬಲಮುರಿ ವಿದ್ಯಾಗಣಪತಿ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವ ಗಣಪತಿಹೋಮ, ಹವನ,ಪೂಜಾ ಕಾರ್ಯಗಳು ನಡೆದಿದ್ದು, ನೂರಾರು ಮಂದಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
ಮಂಗಳವಾರ ಹಾಗೂ ಬುಧವಾರ ಎರಡು ದಿನಗಳ ಕಾಲ ದೇಗುಲ ಪ್ರತಿಷ್ಠಾಪನಾ ಕಾರ್ಯ ನಡೆದಿದ್ದು, ಅನೇಕ ಗಣ್ಯರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.
ದೇವಾಲಯವನ್ನು ನಿರ್ಮಿಸಿಕೊಟ್ಟ ಗ್ರಾಪಂ ಸದಸ್ಯ ಎಎಸ್.ನಂಜುಂಡಗೌಡ ಕುಟುಂಬದವರು, ಹಾಗೂಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್ ಕುಟುಂಬದವರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಬೆಳಗ್ಗೆ ನಡೆದ ಗಣಪತಿ ಹೋಮದಲ್ಲಿ ದೇವಾಲಯಕ್ಕೆ ಗಣಪತಿ ಮೂರ್ತಿಯನ್ನು ಕೊಡುಗೆಯಾಗಿ ನೀಡಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಭಾಗವಹಿಸಿ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಕೃತಾರ್ಥರಾದರು.
ದೇಗುಲ ಪ್ರತಿಷ್ಟಾಪನೆಗೆ ಅಗತ್ಯವಾದ ಹೂವಿನ ಅಲಂಕಾರದ ಉಸ್ತುವಾರಿಯನ್ನು ಮುದುವಾಡಿ ಗ್ರಾಮದ ಡಿ.ಎನ್.ಫಣಿಕುಮಾರ್,ಜಯಲಕ್ಷ್ಮಿ ದಂಪತಿಗಳು ವಹಿಸಿಕೊಂಡಿದ್ದು, ಪೂಜಾ ಕಾರ್ಯಗಳಿಗೆ ಅಗತ್ಯವಾದ ನೆರವನ್ನು ಶಿಕ್ಷಕಿ ಸುಗುಣಾ, ಹಿಂದಿ ಶಿಕ್ಷಕಿ ಸಿದ್ದೇಶ್ವರಿ,ಕೆ.ಆರ್.ರಘುನಂದನ್, ಕೆ.ಎನ್.ಸುರೇಂದ್ರನಾಥ್, ಶಿಕ್ಷಕರಾದ ವೆಂಕಟರೆಡ್ಡಿ, ಸಿ.ಎ.ಮುನಿವೆಂಕಟಪ್ಪ, ಜಯರಾಮೇಗೌಡ ಮತ್ತಿತರರು ನೀಡಿದರು.
ಪ್ರತಿಷ್ಟಾಪನಾ ಕಾರ್ಯದಲ್ಲಿ ವೇದವಿದ್ವಾನ್ ರಾಮಕೃಷ್ಣಭಟ್ಟರು, ಜೆ.ಎನ್.ರಾಮಕೃಷ್ಣ, ರವಿಶಂಕರ್ ಅಯ್ಯರ್ ಭಾಗವಹಿಸಿ ಹೋಮ,ಹವನ, ಪ್ರತಿಷ್ಟಾಪನೆ ನಡೆಸಿಕೊಟ್ಟರು.
ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಕೆ.ಶ್ರೀನಿವಾಸಗೌಡ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ರಾಜ್ಯಕಾರ್ಯಕಾರಿ ಸದಸ್ಯ ಕೆ.ಎಸ್.ಗಣೇಶ್,ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು,ಮತ್ತಿತರರು ಪಾಲ್ಗೊಂಡಿದ್ದರು.