ಶಾಲೆ ಆರಂಭ ಮಕ್ಕಳಲ್ಲಿ ಸಂತಸ : ಎಂ.ವೈ.ಪಾಟೀಲ್

ಅಫಜಲಪುರ:ಜ.3: ಕಳೆದ 9 ತಿಂಗಳಿಂದ ಶಾಲೆಗಳು ಬಂದಾಗಿದ್ದರಿಂದ ಪಾಲಕರಲ್ಲಿ ಮಕ್ಕಳ ಭವಿಷ್ಯದ ಚಿಂತೆ ಎದುರಾಗಿತ್ತು. ಕೋವಿಡ್ 19 ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಶಾಲೆಗಳು ಪುನರಾರಂಭಿಸುವಂತೆ ರಾಜ್ಯ ಸರ್ಕಾರ ಆದೇಶ ಮಾಡಿದ್ದರಿಂದ .6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾಗಮ ಆರಂಭಿಸಲಾಗಿದ್ದು, ವಿದ್ಯಾರ್ಥಿ ಮತ್ತು ಪಾಲಕರಲ್ಲಿ ಸಂತಸ ಮೂಡಿದೆ ಎಂದು ಶಾಸಕ ಎಂ.ವೈ ಪಾಟೀಲ್ ಹೇಳಿದರು.

ತಾಲೂಕಿನ ಬಿದನೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಿಆರ್‍ಸಿ ಕೇಂದ್ರ ಗೊಬ್ಬುರ ಬಿ ಹಾಗೂ ಸರಕಾರಿ ಪ್ರೌಢ ಶಾಲೆ ಬಿದನೂರ ಆಶ್ರಯದಲ್ಲಿ ಶುಕ್ರವಾರ ನಡೆದ ಶಾಲಾ ಪ್ರಾರಂಭೋತ್ಸವ ಹಾಗೂ ವಿದ್ಯಾಗಮ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳೂ ಓದಿನ ಕಡೆ ಗಮನ ಹರಿಸಿ ಅಲ್ಪ ಸಮಯದಲ್ಲಿ ಉತ್ತಮ ಫಲಿತಾಂಶ ಪಡೆಯುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಬಿಇಓ ದೇಗಲಮಡಿ, ಮುಖ್ಯಗುರು ಮಹಾಂತೇಶ ತಿಪ್ಪಣ್ಣ, ಜಿಪಂ ಉಪಾಧ್ಯಕ್ಷೆ ಶೋಭಾ ಶಿರಸಗಿ, ಸುಧಾಕರ ನಾಯಕ, ಸಿದ್ದಾರೂಢ ಪಾಟೀಲ, ಶೆಟ್ಟೆಪ್ಪ ಡೊಂಗ್ರಿ, ಸಿದ್ದು ಸಿರಸಗಿ, ವಿಜಯಕುಮಾರ ಸಾಲಿಮಠ ಇತರರಿದ್ದರು.