ಶಾಲೆಯ ಸಮಯದಲ್ಲಿ ಶಿಕ್ಷಕರು ಇರದೇ ಇರುವುದು ಅಪರಾಧ- ಶಶೀಧರ ಕೊಸುಂಬೆ


ಸಂಜೆವಾಣಿ ವಾರ್ತೆ
ಸಂಡೂರು :ನ: 9   ಶಿಕ್ಷಕರು ಶಾಲೆಯ ಸಮಯದಲ್ಲಿ ಶಾಲೆಯಲ್ಲಿ ಇರದೇ ಇರುವುದು ವಿದ್ಯಾರ್ಥಿಗಳಿಗೆ ದ್ರೋಹ ಮಾಡಿದಂತೆ ಅದನ್ನು ಕಡ್ಡಾಯವಾಗಿ ಕ್ರಮವಹಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೊಸುಂಬೆ ತಿಳಿಸಿದರು.
ಅವರು ಪಟ್ಟಣದ 14ನೇ ವಾರ್ಡನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಈ ಸಂದರ್ಭದಲ್ಲಿ ಪ್ರಭಾರಿ ಮುಖ್ಯ ಶಿಕ್ಷಕ ಪರಶುರಾಮ ಅವರ ಚಲನವಲನ ವಹಿಯನ್ನು ಪರಿಶೀಲಿಸಿದಾಗ ಅವರು ಯಾವುದೇ ಮಾಹಿತಿ ಇಲ್ಲದೆ ಶಾಲೆಯಲ್ಲಿ ಇಲ್ಲದಿರುವುದನ್ನು ಗಮನಿಸಿ, ನಂತರ ಹಾಜರಿ ಪುಸ್ತಕದಲ್ಲಿಯೂ ಸಹ ಸಹಿ ಇಲ್ಲದೇ ಇರುವುದು, ಅನಧಿಕೃತ ಗೈರು ಹಾಜರಾಗಿರುವುದಕ್ಕೆ ತಮ್ಮ ಕೋಪವನ್ನು ವ್ಯಕ್ತ ಪಡಿಸಿದರು, ಅಲ್ಲದೆ ಗೈರು ಹಾಜರಿಯಾದ ಶಿಕ್ಷಕರಿಗೂ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಸಹ ನೋಟಿಸ್ ಜಾರಿಗೊಳಿಸಿದರು.
ಮಕ್ಕಳ ಹಕ್ಕುಗಳ ಸಂಘ ರಚನೆ, ದೂರು ಪೆಟ್ಟಿಗೆ ಮಕ್ಕಳ ಸಹಾಯವಾಣಿ ಬರಹದ , 24 ಮಕ್ಕಳಲ್ಲಿ ಕೆವಲ 11 ಮಕ್ಕಳು ಮಾತ್ರ ಹಾಜರಿದ್ದು ಉಳಿದ ಮಕ್ಕಳ ಗೈರು ಹಾಜರಿ ಬಗ್ಗೆ ಮಾಹಿತಿ ನೀಡಿಲು ಸೂಚಿಸಿದರು. ಇದೇ ಸಂದರ್ಭದಲ್ಲಿ 13ನೇ ವಾರ್ಡನ ಜನತಾಕಾಲೋನಿಯ ಅಂಗನವಾಡಿ ಕೇಂದ್ರಕ್ಕೆ, ಸುಶೀಲಾನಗರ ಗ್ರಾಮದ ಮುರಾರ್ಜಿ ವಸತಿಶಾಲೆಯಲ್ಲಿನ ಪರಿಸ್ಥಿತಿ ಹಾಗೂ ಪಟ್ಟಣದ ಸಾರ್ವಜನಿಕರ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿಯ ಸಮಸ್ಯೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತವನ್ನು ಪತ್ತೆ ಮಾಡಿದರು.
ವಿಶೇಷವಾಗಿ ಜನತಾ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿ ಸರ್ಕಾರಿ ದಾಖಲೆಗಳನ್ನು ಮನೆಯಲ್ಲಿ ಇಟ್ಟಿರುವುದು ಕಂಡು ಬಂದಿದ್ದು ಅದಕ್ಕೆ ಕಾಋಣ ಕೇಳಿ ವಿಚಾರಣೆ ಕೈಗೊಂಡರು, ಸುಶೀಲಾನಗರ ಗರಾಮದ ಮುರಾರ್ಜಿ ವಸತಿಶಾಲೆಯಲ್ಲಿ ಸಿ.ಸಿ.ಟಿ.ವಿ. ಕ್ಯಾಮರ ಸಮಸ್ಯೆ ಇದೆ, ಮಕ್ಕಳ ಸಂಘಗಳು ಸರಿಯಾಗಿ, ಸಕ್ರಿಯಾವಾಗಿ ಕಾರ್ಯ ನಿರ್ವಹಿಸದೇ ಇರುವ ಬಗ್ಗೆ ದೂರುಗಳ ಮೂಲಕ ಪರಿಶೀಲನೆ ನಡೆಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಹಳಷ್ಟು ಸಿಬ್ಬಂದಿ ಸರಿಯಾಧ ರೀತಿಯಲ್ಲಿ ಕಾರ್ಯನಿರ್ವಹಿಸದೇ ಇರುವುದು ಮಕ್ಕಳ ಪುನಶ್ಚೇತನ ಮತ್ತು ಪೌಷ್ಠಿಕ ಘಟಕಗಳು ಮುಚ್ಚಿರುವ ಬಗ್ಗೆ ಬಾಣಂತಿಯರಿಗೆ ಎ.ಸಿ., ಬಿಸಿನೀರಿನ ವ್ಯವಸ್ಥೆ ಇಲ್ಲದೇ ಇರುವುದು, ಬಿ.ಕಾಂಪ್ಲೆಕ್ಸ್ ಮತ್ತು ಇತರ ಮಾತ್ರೆಗಳು ಅಸ್ಪತ್ರೆಯಲ್ಲಿ ಇಲ್ಲದೇ ಇರುವುದನ್ನು ಕಂಡು ಕೋಪ ವ್ಯಕ್ತಪಡಿಸಿದರು, ನವಜಾತ ಶಿಶುಗಳ ಆರೈಕೆಯಲ್ಲಿ ವೈತ್ಯಯ ಉಂಟಾಗಿರುವ ಬಗ್ಗೆ ಸಹ ಎಚ್ಚರಿಕೆ ನೀಡಿದರು. ತಾಲೂಕು ವೈದ್ಯಾಧಿಕಾರಿ ಡಾ. ಭರತ್, ಡಾ. ರಾಮಶೆಟ್ಟಿಯವರಿಗೆ ನೋಟಿಸ್ ನೀಡಿ ಕಾರಣ ಕೇಳಿದರು.
ಪಟ್ಟಣದ ಪುರಸಭೆ ಬಸ್ ನಿಲ್ದಾಣದಲ್ಲಿ ಸಾಕ್ಷರತಾ ದಿನಾಚರಣೆಯನ್ನು ಜಾಗೃತಿ ಜಾಥದಾ ಮೂಲಕ ಆಚರಿಸಲಾಯಿತು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.