ಶಾಲೆಯ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥಾ

(ಸಂಜೆವಾಣಿ ವಾರ್ತೆ)
ಔರಾದ:ಎ.15: ವಿಧಾನ ಸಭೆ ಚುನಾವಣೆ ಅಂಗವಾಗಿ ಸಾರ್ವಜನಿಕರಲ್ಲಿ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸುವಲ್ಲಿ ಮಕ್ಕಳ ಶ್ರಮದಾನ ಸಾರ್ಥಕಗೊಳಿಸಲು ಸರ್ವರು ಮತದಾನ ಮಾಡಬೇಕು ಎಂದು ಮುಖ್ಯಗುರು ಮೆಹಕರೆ ಬಾಲಿಕಾ ಹೇಳಿದರು.
ತಾಲೂಕಿನ ಕೌಡಗಾವ ಶಾಲಾ ಮಕ್ಕಳಿಂದ ಶುಕ್ರವಾರ ನಡೆದ ಮತದಾನ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮತದಾನ ನಮ್ಮ ಹಕ್ಕು, ಪವಿತ್ರ ಮತದಾನ ನಮ್ಮ ಧ್ಯೇಯವಾಗಬೇಕು. ಅದಕ್ಕೆ ಬೆಲೆ ಕಟ್ಟಬಾರದು. ಮತ ಚಲಾಯಿಸುವ ಮೂಲಕ ನಮ್ಮತನವನ್ನು ಕಾಪಾಡಿಕೊಳ್ಳಬೇಕು. ಒಂದು ಉತ್ತಮ ಮತ ಕ್ಷೇತ್ರದ ಅಭಿವೃದ್ಧಿಗೆ ನಾಂದಿ.
ಈ ಬಾರಿ ಚುನಾವಣೆಯಲ್ಲಿ ಏರ್ಪಟ್ಟ ಸ್ಪರ್ಧೆಯಲ್ಲಿ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವಲ್ಲಿ ಮತದಾನ ಸಹಕಾರವಾಗಲಿದೆ. ಅಲ್ಲದೆ ಉತ್ತಮ ಸಮಾಜಕ್ಕೆ ಸಾಥ್ ನೀಡಲಿದೆ. ಕಾರಣ ನಿಷ್ಕಾಳಜಿವಹಿಸದೇ ನಿಮ್ಮ ಹಕ್ಕನ್ನು ಚಲಾಯಿಸಬೇಕೆಂದು ಸಲಹೆ ನೀಡಿದರು.
18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಬೇಕು ಎಂದು ತಿಳಿಸಿದರು. ಯಾವುದೇ ಆಮಿಷಕ್ಕೆ ಒಳಗಾಗದೇ ಮತವನ್ನು ಚಲಾಯಿಸಬೇಕು. ಶಾಲಾ ಮಕ್ಕಳು ಗ್ರಾಮಸ್ಥರ ಮನೆಗೆ ಹಾಗೂ ಸಾರ್ವಜನಿಕ ಸ್ಥಳಗಳಿಗೆ ತೆರಳಿ ಮೇ 10 ರಂದು ನಡೆಯುವ ವಿಧಾನಸಭೆಯ ಚುನಾವಣೆಗೆ ಪ್ರತಿಯೊಬ್ಬರೂ ಮತದಾನ ಮಾಡುವಂತೆ ಮನವಿ ಮಾಡಿದರು.
ಶಾಲಾ ಮಕ್ಕಳು ಹಾಗೂ ಶಿಕ್ಷಕರ ನೇತೃತ್ವದಲ್ಲಿ
ಶಾಲಾ ಮಕ್ಕಳ ಜಾಗೃತಿ ಜಾಥಾ, ಮತದಾನ ಕುರಿತು ನಾನಾ ಘೋಷ್ಯವಾಕ್ಯಗಳನ್ನು ಕೂಗುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.
ಜಾಥಾದಲ್ಲಿ ಶಾಲೆಯ ಶಿಕ್ಷಕರಾದ ಸತೀಶ ಬಿರಾದರ, ವಿಜಯಕುಮಾರ್, ಬಸವರಾಜ, ಗೋಪಾಲ ರೆಡ್ಡಿ, ಪದ್ಮಾವತಿ, ಜ್ಯೋತಿ, ಕೃತಿಕಾ, ಬಿ.ಎಲ್.ಓ. ಲಾಲಪ್ಪ, ಶಾಲೆ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.