
ಸಂಜೆವಾಣಿ ವಾರ್ತೆ
ಗಂಗಾವತಿ, ಏ.22: ಗಂಗಾವತಿ ತಾಲೂಕಾ (ಕಾರಟಗಿ, ಕನಕಗಿರಿ) ವ್ಯಾಪ್ತಿಯಲ್ಲಿರುವ ಶಾಲೆಗಳು ಸಿಬಿಎಸ್‍ಇ ಮತ್ತು ಇಸಿಎಸ್‍ಇ ಪಠ್ಯಕ್ರಮಕ್ಕಾಗಿ ಅನುಮತಿ ಪಡೆದಿವೆ ಎನ್ನುವುದನ್ನು ಖಾತರಿ ಪಡಿಸಿಕೊಂಡು ಪಾಲಕರು ಎಚ್ಚರಿಕೆಯಿಂದ ತಮ್ಮ ಮಕ್ಕಳನ್ನು ದಾಖಲಿಸಬೇಕೆಂದು ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್‍ಗೌಡ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಶಾಲಾ ಮಾನ್ಯತೆ ನವೀಕರಣ, ಬೋಧಿಸುವ ಪಠ್ಯಕ್ರಮ ಮಾಧ್ಯಮಗಳ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಥವಾ ಶಾಲಾ ಆಡಳಿತ ಮಂಡಳಿಯಿಂದ ಖಚಿತ ಪಡಿಸಿಕೊಂಡು ಮಕ್ಕಳನ್ನು ದಾಖಲಿಸಬೇಕೆಂದು ತಿಳಿಸಿರುವ ಅವರು, ಗ್ಲೋಬಲ್ ಪಬ್ಲಿಕ್ ಸ್ಕೂಲ್ ಕಾರಟಗಿ, ವಿದ್ಯಾನಿಕೇತನ ಪಬ್ಲಿಕ್ ಶ್ರೀರಾಮನಗರ, ಸೇಂಟ್‍ಪಾಲ್ಸ್ ಆಂಗ್ಲ ಮಾಧ್ಯಮ ಶಾಲೆ, ನೆಕ್ಕಂಟಿ ರಾಮಾರಾವ್ ಆಂಗ್ಲ ಮಾದ್ಯಮ ಶಾಲೆ, ರೆಡ್ಡಿ ವೀರಣ್ಣ ಆಂಗ್ಲ ಮಾಧ್ಯಮ ಶಾಲೆ ಮತ್ತು ಸಪ್ತಗಿರಿ ಆಂಗ್ಲ ಮಾದ್ಯಮ ಶಾಲೆ ಇವು ಮಾತ್ರ ಆಂಗ್ಲ ಮಾಧ್ಯಮ ಶಾಲೆಗಳಾಗಿದ್ದು 1 ರಿಂದ 10 ನೇತರಗತಿಯವರೆಗೆ ಸರಕಾರದಿಂದ ಪರವಾನಿಗೆ ಪಡೆದಿದ್ದು ಪಾಲಕರು ಜಾಗರೂಕತೆಯಿಂದ ತಮ್ಮ ಮಕ್ಕಳನ್ನು ದಾಖಲಿಸಬೇಕೆಂದು ತಿಳಿಸಿದ್ದಾರೆ.