ಶಾಲೆಯ ಮಕ್ಕಳಿಗೆ ಅಕ್ಕಿ,ಗೋಧಿ ವಿತರಣೆ

ಆಲಮೇಲ:ಜೂ.7:ಕರೋನಾ ಮಹಾಮಾರಿಯ ಪರಿಣಾಮದಿಂದ ಈ ವರ್ಷವು ಕೂಡ ಶಾಲೆಗಳು ಆರಂಭವಾಗದೆ ಇರುವದರಿಂದ ಲಾಕ್ ಡೌನ್ ಸಂದರ್ಭದಲ್ಲಿ ಮಕ್ಕಳಿಗೆ ಸರಕಾರ ಬಿಸಿ ಊಟ ಯೋಜನೆ ಅಡಿಯಲ್ಲಿ ಅಕ್ಕಿ, ಗೋಧಿ, ಬೆಳೆಕಾಳುಗಳನ್ನು ನೀಡಬೇಕು ಎಂದು ಆದೇಶ ಹೊರಡಿಸಿ ಹಿನ್ನಲೆಯಲ್ಲಿ ತಾಲ್ಲೂಕಿನ ಹೊಸ ತಾರಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷ ಶಿವಕುಮಾರ ಕಂಟೇಕುರ ಸರಕಾರದ ನಿಯಮದ ಪ್ರಕಾರ ಮಕ್ಕಳ ಪರವಾಗಿ ಅವರ ಪಾಲಕರಿಗೆ ವಿತರಿಸಿದರು. ಈ ವೇಳೆ ಶಾಲೆ ಮುಖ್ಯ ಗುರು ಎಸ್.ಹೆಚ್.ಜಮಾದಾರ, ಸಹ ಶಿಕ್ಷಕ ಡಿ.ವಿ.ಡೊಳ್ಳಿ ಇದ್ದರು.