ಶಾಲೆಯ ಪ್ರಗತಿಗೆ ಸಹಕಾರ ಅಗತ್ಯ

ಭಾಲ್ಕಿ:ಏ.7: ಎಲ್ಲರ ಸಹಕಾರದಿಂದ ಶಾಲಾಭಿವೃದ್ಧಿ ಸಾಧ್ಯ ಎಂದು ಹಳೆಯ ವಿದ್ಯಾರ್ಥಿಗಳ ಸಂಘದ ನೂತನ ಅಧ್ಯಕ್ಷ ರಮೇಶ ಪಂಚಾಳ ಹೇಳಿದರು. ತಾಲೂಕಿನ ಕೋನಮೇಳಕುಂದಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಹಳೆಯ ವಿದ್ಯಾರ್ಥಿಗಳ ಸಂಘ ರಚನೆ-2023-24ರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಒಬ್ಬರಿಂದ ಶಾಲೆ ಪ್ರಗತಿ ಹೊಂದಲು ಸಾಧ್ಯವಿಲ್ಲ. ಶಿಕ್ಷಕರ ಜತೆಗೆ ಗ್ರಾಮಸ್ಥರ ಕಾಳಜಿ ಇದ್ದರೆ ಸರಕಾರಿ ಶಾಲೆ ಬೆಳವಣಿಗೆ ಹೊಂದಲು ಸಾಧ್ಯ ಎಂದರು. ಶಾಲೆಯಲ್ಲಿ ಕಲಿಕೆ ಗುಣಮಟ್ಟ ಹೆಚ್ಚಿಸುವುದರ ಜತೆಗೆ ಮಕ್ಕಳ ದಾಖಲಾತಿ ಹೆಚ್ಚಿಸುವ ಕೆಲಸ ಆಗಬೇಕಿದೆ. ಎಲ್ಲರೂ ನನ್ನ ಮೇಲೆ ಸಾಕಷ್ಟು ಪ್ರೀತಿ, ವಿಶ್ವಾಸ ಇಟ್ಟು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಶಾಲಾ ಪ್ರಗತಿಗೆ ಪ್ರಾಮಾಣಿಕವಾಗಿ ದುಡಿಯುವುದಾಗಿ ವಿಶ್ವಾಸ ವ್ಯಕ್ತ ಪಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಮಾನಕಾರ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ ಮುಖ್ಯಶಿಕ್ಷಕಿ ಅನ್ನಪೂರ್ಣ ಸಿ.ಎಸ್.ಅವರು ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಅಗತ್ಯತೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಸಂಗಮೇಶ ಬಿರಾದಾರ, ಎಸ್‍ಡಿಎಂಸಿ ಅಧ್ಯಕ್ಷ ಶಿವರಾಜ ಚೆಲ್ವಾ, ಪಿಡಿಓ ವಿಶ್ವಶೀಲಾ, ಶಿಕ್ಷಕರಾದ ಅನಿಲಕುಮಾರ ಬಿರಾದಾರ, ಲಕ್ಷ್ಮೀ ಸೇರಿದಂತೆ ಹಲವರು ಇದ್ದರು. ಸಹ ಶಿಕ್ಷಕಿ ಲತಾ ಪ್ರಾರ್ಥನೆ ಗೀತೆ ನಡೆಸಿ ಕೊಟ್ಟರು. ಶಿಕ್ಷಕಿ ನಿರ್ಮಲಾ ಚೆಲ್ವಾ ಸ್ವಾಗತಿಸಿದರು. ಸಹ ಶಿಕ್ಷಕ ನಾಗಶೆಟ್ಟಿ ಬಿರಾದಾರ ನಿರೂಪಿಸಿದರು. ದೈಹಿಕ ಶಿಕ್ಷಕ ಸೂರ್ಯಕಾಂತ ವಂದಿಸಿದರು.
ಆಯೋಗದ ಸದಸ್ಯರಿಗೆ ಸನ್ಮಾನ :
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಇದೇ ಮೊದಲ ಬಾರಿಗೆ ಶಾಲೆಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ, ಅಭಿನಂದಿಸಲಾಯಿತು.


ಹಳೆಯ ವಿದ್ಯಾರ್ಥಿಗಳ ಸಂಘ ರಚನೆ :
ಇದೇ ವೇಳೆ ಹಳೆಯ ವಿದ್ಯಾರ್ಥಿಗಳ ಸಂಘ ರಚನೆ ಮಾಡಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ನಿವೃತ್ತ ಮುಖ್ಯಗುರು ರಮೇಶ ಪಂಚಾಳ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಕೀರ್ತಿಕುಮಾರ ಬಿರಾದಾರ, ಕಾರ್ಯದರ್ಶಿಯಾಗಿ ಸಂಜೀವಕುಮಾರ ಮೇತ್ರೆ ಮತ್ತು ಖಜಾಂಚಿಯಾಗಿ ದತ್ತಾತ್ರಿ ಹಂಪಾ ಆಯ್ಕೆಯಾದರು. ಉಳಿದಂತೆ ಶಶಿಧರ ಕೋಸಂಬೆ, ಶಿವಕಾಂತ ಬಿರಾದಾರ, ಸೋಮನಾಥ ಹೊಸಾಳೆ, ಅನಿಲಕುಮಾರ ಬಿರಾದಾರ, ಸಂಗಮೇಶ ಬಿರಾದಾರ, ಪ್ರವೀಣ ಮೇತ್ರೆ ಅವರು ಸದಸ್ಯರಾಗಿ ಆಯ್ಕೆಯಾದರು.