ದಾವಣಗೆರೆ. ಜೂ.೧೭; ನಗರದ ಗ್ರಾಮಾಂತರ ಪೊಲೀಸ್ ಠಾಣೆ ರಸ್ತೆಯಲ್ಲಿರುವ ಸೋಮೇಶ್ವರ ಶಾಲೆಯ ಪಕ್ಕದ ಖಾಲಿ ಜಾಗದಲ್ಲಿ ದಿಢೀರ್ ಎಂದು ಕಟ್ಟಡ ನಿರ್ಮಾಣವಾಗುತ್ತಿದ್ದು, ಈ ಕಟ್ಟಡ ಅಕ್ರಮವೋ??? ಸಕ್ರಮವೋ??? ಎಂದು ಪಾಲಿಕೆ ಆಯುಕ್ತರು ಸ್ಪಷ್ಟೀಕರಣ ನೀಡಬೇಕೆಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಕೆ.ಎಲ್. ಹರೀಶ್ ಬಸಾಪುರ ವಿನಂತಿಸಿದ್ದಾರೆ.ಈಗ ಕಟ್ಟಡ ನಿರ್ಮಾಣವಾಗುತ್ತಿರುವ ಸ್ಥಳದಲ್ಲಿ ಮೊದಲು ನೀರಾವರಿ ಇಲಾಖೆಯಿಂದ ಒಳಚರಂಡಿ ಮೂಲಕ ನೀರು ಹರಿದು ಸಾಗುತ್ತಿತ್ತು ಕೆಲವು ದಿನಗಳ ಹಿಂದೆ ಅದನ್ನು ಮುಚ್ಚಿ ಹಾಗೆ ಬಿಟ್ಟಿದ್ದ ಪ್ರಭಾವಶಾಲಿಗಳು ಈಗ ಕಟ್ಟಡ ನಿರ್ಮಾಣ ಮಾಡುತ್ತಿದ್ದು ಈ ಜಾಗ ಸರ್ಕಾರದ್ದೊ??? ಖಾಸಗಿಯವರದ್ದೊ??? ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದ್ದು, ಪಾಲಿಕೆ ಆಯುಕ್ತರು ಈ ಅನುಮಾನಕ್ಕೆ ತೆರೆ ಎಳೆಯಬೇಕು ಎಂದರು.