
ಅರಕೇರಾ.ನ.೧೧- ಶಾಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕರ ಜತೆಗೆ ಎಸ್ಡಿಎಂಸಿಯ ಪಾತ್ರ ಬಹುಮುಖ್ಯವಾಗಿದೆ ಎಂದು ನೋಡಲ್ ಅಧಿಕಾರಿ ವೆಂಕಟಾಚಲಪತಿ ಹೇಳಿದರು.
ಅರಕೇರಾ ಪಟ್ಟಣದಲ್ಲಿನ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಎಸ್ಡಿಎಂಸಿ ರಚನೆ ವೇಳೆ ಅವರು ಮಾತನಾಡಿ, ಸ್ಥಳೀಯವಾಗಿ ಶಾಲೆಗೆ ಅಗತ್ಯವಾಗಿರುವ ಬೇಕು ಬೇಡಗಳನ್ನು ಒದಗಿಸಿ, ಸಮರ್ಪಕವಾಗಿ ಶಾಲೆಯ ಅಭಿವೃದ್ಧಿಗೆ ಪ್ರಯತ್ನಿಸುವ ಹೊಣೆ ನಿಮ್ಮ ಮೇಲಿದೆ ಎಂದರು. ಹಾಗೆಯೇ ನೂತನವಾಗಿ ರಚನೆಗೊಂಡ ಶಾಲಾ ಮೇಲುಸ್ತುವಾರಿ ಸಮಿತಿಯ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸಿದರು.
ಬಳಿಕ ಮುಖ್ಯ ಶಿಕ್ಷಕ ದೇವೇಂದ್ರ ಕುಮಾರ ಮಾತನಾಡಿ, ಎಸ್ಡಿಎಂಸಿ ಸಹಕಾರದಿಂದ ಶಾಲೆಗಳು ಪ್ರಗತಿ ಕಾಣಲಿವೆ. ಶಾಲಾ ಸಮುದಾಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಜಾಣ್ಮೆ ಶಾಲೆಯ ಮೇಲುಸ್ತುವಾರಿ ಸಮಿತಿಗೆ ಇರಬೇಕು. ಅಭಿವೃದ್ಧಿ ಕಾಣಲು ಶಿಕ್ಷಕರು ಹಾಗೂ ಮಕ್ಕಳ ಪ್ರಯತ್ನದ ಜತೆಗೆ ಎಸ್ಡಿಎಂಸಿ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು. ನಂತರ ಶಾಲೆಯ ವತಿಯಿಂದ ನೂತನ ಎಸ್ಡಿಎಂಸಿ ಅಧ್ಯಕ್ಷರಾಗಿ ಮಾನಸಯ್ಯ(ಮಹಾಂತೇಶ) ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ವಿಜಯಲಕ್ಷ್ಮಿ ನಾಗರಾಜ ದೇವರಮನಿ ಆಯ್ಕೆಯಾಗಿದ್ದಾರೆ.
ಸದಸ್ಯರುಗಳಾಗಿ: ಗೋವಿಂದ, ಲಕ್ಷ್ಮೀ, ಮಂಜುನಾಥ, ಮಹಾನಂದಾ, ಶ್ರೀದೇವಿ, ಸೌಭ್ಯಾಗ್ಯ, ಶ್ರೀದೇವಿ, ಶಾಲಂ ಅಲಿ, ಮಹ್ಮದ ಇದ್ರೀಸ್, ಸಲೀಂ, ಶಬಾನಾಬಾನು,ಶಮೀನಾಬೇಗಂ, ಮಹಿಬೂಬಿ, ನಾಗಯ್ಯಸ್ವಾಮಿ, ಸಿದ್ದಪ್ಪ, ಬಸ್ಸಮ್ಮ ಆಯ್ಕೆಗೊಂಡಿದ್ದಾರೆಂದು ಮುಖ್ಯೋಪಾಧ್ಯಯರಾದ ದೇವಿಂದ್ರಕುಮಾರ ರೇಕಲಮರಡಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೂತನ ಅಧ್ಯಕ್ಷ ಉಪಾಧ್ಯಕ್ಷ ಇವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಬದಲ್ಲಿ ಸಿಆರ್‌ಸಿ ಬಸವರಾಜ, ಶಿಕ್ಷಕ ಕಲ್ಲಬಂಡೆಪ್ಪ, ಬಸ್ಸಪ್ಪ ಅಂಗಡಿ, ಅಬೀಬಾ, ಪೊಲೀಸ್ ಪೇದೆ ಶಿವಕುಮಾರ ಎ.ಆರ್ ಸೇರಿದಂತೆ ಪೋಷಕರು ಇದ್ದರು. ನೂತನವಾಗಿ ಆಯ್ಕೆಯಾದ ಎಸ್.ಡಿ.ಎಂ.ಸಿ ಅಧ್ಯಕ್ಷರು ಆಯ್ಕೆಯಾದರು.