ಶಾಲೆಯೊಂದು ಸರಸ್ವತಿ ಮಂದಿರ :ವಿರೇಶ್ ಬಿ ಚಿಂಚೋಳಿ

ಹುಣಸಗಿ : ಮಾ.7:ಮಕ್ಕಳಿಗೆ ವಿದ್ಯೆ ನೀಡುವ ಎಲ್ಲಾ ಸಂಸ್ಥೆಗಳೂ ದೇವಾಲಯಗಳೇ ಆಗಿರುತ್ತವೆ ಎಂದು ಎಸ್,ಡಿ,ಎಮ್,ಸಿ, ಅಧ್ಯಕ್ಷ ವಿರೇಶ್ ಬಿ ಚಿಂಚೋಳಿ ಹೇಳಿದರು.
ಅವರು ಹುಣಸಗಿ ಪಟ್ಟಣದ ಸರಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ವಾರ್ಷಿಕ ಸ್ನೆ?ಹ ಸಮ್ಮೆ?ಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಂತರ ಪ್ರಾಸ್ತವಿಕವಾಗಿ ಮುಖ್ಯಗುರು ಯಲ್ಲಪ್ಪ ಚಂದನಕೇರಿ ಮಾತನಾಡಿ, ಭಾರತ ದೇಶದಲ್ಲಿ ನೀಡುವ ಸಂಸ್ಕøತಿ, ಸಂಸ್ಕಾರ ಆಧಾರಿತ ಶಿಕ್ಷಣವನ್ನು ಜಗತ್ತಿನ ಎಲ್ಲಿಯೂ ನೀಡಲು ಸಾಧ್ಯವಿಲ್ಲ. ಹೀಗಾಗಿಯೇ ಹಿಂದಿನ ನಳಂದಾ, ತಕ್ಷಶಿಲಾ ವಿದ್ಯಾಲಯಗಳಿಗೆ ನಾಮುಂದು ತಾಮುಂದು ಎಂದು ಜಗತ್ತಿನಾದ್ಯಂತ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದರು ಎಂದರು.
ಕಾರ್ಯಕ್ರಮದಲ್ಲಿ ಬಸವರಾಜಸ್ವಾಮೀ ಸ್ಥಾವರಮಠ ಮಾತನಾಡಿದರು, ಈ ಸಂದರ್ಭದಲ್ಲಿ ಬಸವರಾಜ ಮಲಗಲದಿನ್ನಿ, ಸಂಗಣ್ಣ ವೈಲಿ, ಎಮ್,ಎಸ್,ಚಂದಾ, ಶಿವಲಿಂಗಸ್ವಾಮೀ ವೀರಕ್ತಮಠ, ಗುರುಲಿಂಗಪ್ಪ ಸಜ್ಜನ್, ಸಿದ್ದಣ್ಣ ಅಂಕಲಕೋಟಿ, ಶಿವನಗೌಡ ಪಾಟೀಲ್, ಹೊನ್ನಕೇಶವ ದೇಸಾಯಿ, ಭೀಮಾಶಂಕರ್ ದೇಸಾಯಿ, ಭೀಮನಗೌಡ ಕುಪ್ಪಿ, ಬಸಲಿಂಗಯ್ಯ ಹಿರೇಮಠ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕನಗೌಡ ಅರಿಕೇರಿ, ಅನಿಫ್ ಬೆನ್ನೂರ್, ಮೇಲಪ್ಪ ಗುಳುಗಿ, ಗೌಡಪ್ಪ ಬಾಲಗೌಡ್ರ,ವಿದ್ಯಾರ್ಥಿ ಪ್ರತಿನಿಧಿ ಅನುಷಾ ಎನ್ ಚಿಂಚೋಳಿ ಸೇರಿದಂತೆ ಮತ್ತಿತರರು ವೇದಿಕೆ ಮೇಲೆ ಹಾಜರಿದ್ದರು. ಟಿ,ಸಿ,ಸಜ್ಜನ್ ಸ್ವಾಗತಿಸಿದರು. ನಾಗನಗೌಡ ಪಾಟೀಲ್ ನಿರೂಪಿಸಿದರು. ಮಾಶಾಕ ಯಾಳಗಿ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ನಡೆದ ಸಂಸ್ಕೃತಿಕಾ ಕಾರ್ಯಕ್ರಮ ಎಲ್ಲರ ಮನ ರಂಜಿಸಿತು. ವಿದ್ಯಾರ್ಥಿಗಳ ಕಾರ್ಯಕ್ರಮವನ್ನು ಕುಮಾರಿ ಸಂಜನಾ, ಹಾಗೂ ಕುಮಾರಿ ಬಸವಶ್ರೀ ನಡೆಸಿ ಕೊಟ್ಟರು, ಕಾರ್ಯಕ್ರಮಕ್ಕೆ ಪೆÇಲೀಸ್ ಇಲಾಖೆಯಿಂದ ಭದ್ರತೆ ಕಲ್ಪಿಸಲಾಗಿತ್ತು.