ಶಾಲೆಯೇಜೀವಂತ ಗುಡಿಯಾದರೆ ಮಕ್ಕಳೆ ದೇವರು: ಡಾ. ವಿಫುಲ್ ಕೋಳೆಕರ್

ಇಂಡಿ:ಮಾ.19: ಜ್ಞಾನ ದೇವಿಯ ದೇಗುಲವಿದು ಕೈಮುಗಿದು ಒಳಗೆ ಬಾ ಎಂಬ ನಾಣ್ಮುಡಿಯಂತೆ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಶಾಲೆಯ ಪಾತ್ರ ಪ್ರಮುಖವಾಗಿದ್ದು ಶಿಕ್ಷಕರು ದೇವರಿದ್ದಂತೆ ಶಾಲೆ ಜೀವಂತ ಗುಡಿಯಾದರೆ ಮಕ್ಕಳೇ ದೇವರು ಎಂದು ಡಾ. ವಿಫುಲ್ ಕೋಳೆಕರ್ ಹೇಳಿದರು.
ಪಟ್ಟಣದ ಆರ್.ಎಂ. ಶಹಾ ಪಬ್ಲಿಕ್ ಶಾಲೆಯಲ್ಲಿ ಚಿಣ್ಣರ ಪದವಿ ಪ್ರಧಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಶಾಲೆ ಎಂಬ ದೇಗುಲದಲ್ಲಿ ಬೆಣ್ಣೆ ಮುದ್ದೆಯಂತಿದ್ದ ಮಕ್ಕಳನ್ನು ಯಾವ ರೀತಿ ರೂಪಿಸಬೇಕು ಎಂಬುದು ಶಿಕ್ಷಕರ ಕೈಯಲ್ಲಿದೆ. ಶಿಕ್ಷಕ, ವಿಧ್ಯಾರ್ಥಿ ಪಾಲಕ ಶಿಕ್ಷಣದಲ್ಲಿ ಪ್ರಮುಖ ಪಾತ್ರವಿದೆ. ಕೆವಲ ಮಕ್ಕಳನ್ನು ಶಾಲೆಗೆ ಕಳಿಸಿದರೆ ಸಾಲದು ಅವರ ಬಗ್ಗೆ ಪಾಲಕರು ಸದಾ ಗಮನವಿಡಬೇಕು. ಇಂದು ವಿಜ್ಞಾನ ತಂತ್ರಜ್ಞಾನ ದಿನಗಳಲ್ಲಿ ಪಾಲಕರಿಗೆ ಬಿಡುವಿಲ್ಲ ಹೀಗಾಗಬಾರದು ಮಕ್ಕಳಿಗಾಗಿ ಕೆಲವೊಂದು ಸಮಯ ನಿಗದಿ ಮಾಡಿಕೊಳ್ಳಿ ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೆ ಆಸ್ತಿ ಮಾಡಿ. ಇಂದಿನ ಆರ್. ಶಹಾ ಬ್ಲಿಕ ಶಾಲೆಯಲ್ಲಿ ಈ ಚಿಣ್ಣರ ಪದವಿ ಪ್ರಧಾನ ಕಾರ್ಯಕ್ರಮವು ಮಕ್ಕಳ ಜೀವನದಲ್ಲಿ ಮಹತ್ವದ ದಿನವಾಗಿದೆ ಮಕ್ಕಳ ಮುಂದಿನ ಕಲಿಕೆಗೆ ಅನುಕೂಲವಾಗುತ್ತದೆ.ಪ್ರತಿಯೊಂದು ಮಗುವಿನಲ್ಲಿ ಸುಪ್ತ ಶಕ್ತಿ ಅಡಗಿರುತ್ತದೆ ಅದನ್ನು ಹೊರಗೆ ತರಬೇಕಾದರೆ ಇಂತಹ ಕಾರ್ಯಕ್ರಮಗಳ ಮುಖಾಂತರ ಸಾಧ್ಯೆ ಎಂದರು.

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಒಳ್ಳೆಯ ಹವ್ಯಾಸಗಳು ರೂಢಿಸಿಕೊಳ್ಳಬೇಕು. ಈಚಿಣ್ಣರ ಪದವಿ ಪ್ರಧಾನ ಕಾರ್ಯಕ್ರಮವು ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗುತ್ತದೆ. ಅಲ್ಲದೇ ಮಕ್ಕಳು ಮೊಬೈಲ್ ಹಾಗೂ ಟಿವಿ ಬಳಕೆಯಿಂದ ದೂರವಿದ್ದು ಒಳ್ಳೆಯ ಸಂಸ್ಕಾರವನ್ನು ಅಳವಡಿಕೊಳ್ಳುವ ಮೂಲಕ ಸಮಾಜದ ಮಾದರಿ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂದು ಸಂಸ್ಥಾಪಕ ಅಧ್ಯಕ್ಷ ಡಿ.ಆರ್. ಶಹಾ ಮಕ್ಕಳಿಗೆ ಹಿತನುಡಿ ಹೇಳಿದರು.
ಕಾರ್ಯಕ್ರಮದಲ್ಲಿ ಚಿಣ್ಣರು ನಡೆಸಿಕೊಟ್ಟ ಸಾಂಸ್ಕøತಿಕ ಕಾರ್ಯಕ್ರಮಗಳು ನೋಡುಗರ ಗಮನಸೆಳೆದವು. ಪಾಲಕರು ಸಹ ತಮ್ಮ ಮಕ್ಕಳ ಪ್ರಗತಿಯ ಕುರಿತು ಸಂತಸವನ್ನು ವ್ಯಕ್ತಪಡಿಸಿದರು. ಅಲ್ಲದೇ ಈ ಒಂದು ಚಿಣ್ಣರ ಪದವಿ ಪ್ರದಾನ ಸಮಾರಂಭದಲ್ಲಿ 3-5 ವರ್ಷದ ಮಕ್ಕಳಿಗಾಗಿ ನೃತ್ಯ,ಗಾಯನ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.
ಶ್ರೀಮತಿ ರೂಪಾ ಕಾಪ್ಸೆ , ಆಡಳಿತಾಧಿಕಾರಿ ಶ್ರೀಮತಿ ಕಲ್ಪನಾ ಶಹಾ, ಶೈಕ್ಷಣಿಕ ಮಾರ್ಗದರ್ಶಕ ನಜೀರ್ ಹುಂಡೇಕರ್, ಪ್ರಚಾರ್ಯ ನವೀನ ಜಮಾದಾರಪ್ರಕಾಶ್ ಪಾಟೀಲ, ಎಲ್ಲಾ ಸಿಬ್ಬಂದಿ ವರ್ಗ ಹಾಗೂ ಪಾಲಕರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ನರ್ಸರಿ, ಎಲ್. ಕೆ. ಜಿ ಮತ್ತು ಯು. ಕೆ. ಜಿ ಮಕ್ಕಳು ನಿರೂಪಿಸಿದರು. ಶಿಕ್ಷಕಿ ವೈಷ್ಣವಿ ಜಗತಾಪ್ ವಂದಿಸಿದರು.