ಶಾಲೆಯಿಂದ ಹೊರಗುಳಿದ ಮಕ್ಕಳ ಸರ್ವೆಗೆ ಇಒ ಸೂಚನೆ

ಆಳಂದ:ಎ.1: ಸರ್ಕಾರ ವಹಿಸಿದ ಕೆಲಸವನ್ನು ಮಾಡಲು ಹಿಂಜರಿದರೆ ಶಿಸ್ತಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಾಗಮೂರ್ತಿ ಶೀಲವಂತ ಅವರು ಗ್ರಾಪಂ ಅಧಿಕಾರಿಗಳಿಗೆ ಎಚ್ಚರಿಸಿದರು.

ಪಟ್ಟಣದ ತಾಪಂ ಕಚೇರಿಯಲ್ಲಿ ಕರೆದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಶಾಲೆ ಬಿಟ್ಟ ಮಕ್ಕಳ ಅಂಕಿಶ ನೀಡುವಂತೆ ಸೂಚಿಸಲಾಗಿದೆ. ಮೇಲಾಗಿ ಈ ಕೆಲಸ ಕಾರ್ಯದ ವರದಿ ನೀಡುವಂತೆ ಇಲಾಖೆಗೆ ನಾಯಾಲಯ ಆದೇಶವಿದೆ. ಆದರೂ ಬೇರಳೆಣಿಕೆಯಷ್ಟೇ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಬಿಟ್ಟಿರೆ ಇನ್ನೂಳಿದವರು ನಿರುತ್ಸಾ ತೋರಿದ್ದು ಸರಿಯಲ್ಲ. ಕೂಡಲೇ ಮನೆ, ಮನೆಗೆ ಭೇಟಿ ನೀಡಿ ಶಾಲೆ ಬಿಟ್ಟ ಮಕ್ಕಳ ವರದಿ ನೀಡಬೇಕು. ಇಲ್ಲವಾದಲ್ಲಿ ಶಿಸ್ತಿನ ಕ್ರಮಕ್ಕೆ ಸಿದ್ಧರಾಗಿ ಎಂದು ಹೇಳಿದರು.

ಇದುವರೆಗೂ ವರದಿ ಗಮನಿಸಿದರೆ 5800 ಮನೆಗಳಿಗೆ ಮಾತ್ರ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಭೇಟಿಕೊಟ್ಟು ಶಾಲೆ ಬಿಟ್ಟವರ ಮಹಿತಿ ಕಲೆಹಾಕಲಾಗಿದೆ. ಇನ್ನೂ ಸಾಧಿಸಬೇಕಾದ ಗುರಿ ಬಹಳಷ್ಟಿದೆ ತುರ್ತಾಗಿ ಈ ಕೆಲಸವನ್ನು ಮಾಡಬೇಕು ಎಂದು ತಾಕೀತು ಮಾಡಿಡರು.

ಈ ಕೆಲಸಕ್ಕೆ ಊರಿಗೊಂದು ಅಂಗನವಾಡಿ ಕಾರ್ಯಕರ್ತೆಯರ, ಸ್ವಸಹಾಯ ಗುಂಪಿನವರು ಮತ್ತು ಗ್ರಾಪಂ ಸಿಬ್ಬಂದಿ ಒಳಗೊಂಡು ತಂಡ ರಚಿಸಿಕೊಂಡು ಸರ್ವೆ ಕೈಗೊಳ್ಳಬೇಕು. ವಿಳಂಬವಾದಲ್ಲಿ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಉದ್ಯೋಗ ಖಾತ್ರಿ ಪ್ರಬಾರಿ ಸಹಾಯಕ ನಿರ್ದೇಶಕ ಮೊಮ್ಮದ್ ಸಲೀಂ, ಅಭಿವೃದ್ಧಿ ಅಧಿಕಾರಿ ಮಂಜೂರ ಪಟೇಲ್, ಸಾಯಬಣ್ಣ ಕವಲಗಿ, ಪ್ರಮೋದ ಘೂಗರೆ, ಸಿದ್ಧರಾಮ ಚಿಂಚೋಳಿ, ಓದುಲಿಂಗ, ಅಮೀತಕುಮಾರ, ಪ್ರವೀಣಕುಮಾರ, ಮಮತಾ, ವಿದ್ಯಾರಾಣಿ, ಚಂದ್ರಕಲಾ, ರಿಯಾಜ್ ಚೌದರಿ, ನಾಗೇಶ ಮೂರ್ತಿ ಮತ್ತಿತರು ಇದ್ದರು.

ಶಿಷ್ಯವೇತನ ಬಿಡುಗಡೆ: ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ ಅವರು ಪ್ರತಿಕ್ರಿಯೆ ನೀಡಿ 6ರಿಂದ 14 ವರ್ಷದ ಮಕ್ಕಳು ಶಾಲೆಯಿಂದ ಹೊರಗುಳಿದು ಬಾಲಕಾರ್ಮಿಕರಾಗಿ ಹೋಟೆಲ್. ಗ್ಯಾರೇಜ್‍ನಲ್ಲಿ ಕೆಲಸಕ್ಕೆ ತೊಡಗುತ್ತಾರೆ. ಅದನ್ನು ತಪ್ಪಿಸಿ ಇಂಥ ಮಕ್ಕಳನ್ನು ಗುರುತಿಸಿ ಅವರನ್ನು ಪುನಃ ಶಾಲೆಗೆ ಸೇರಿಸಬೇಕಾಗಿದೆ. ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಪಾಸಬುಕ್ ಸಂಖ್ಯೆಗೆ ಆಧಾರ ನಂಬರ ಲಿಂಗ ಕೈಗೊಂಡರೆ ಮಕ್ಕಳ ಖಾತೆಗೆ ಶಿಷ್ಯ ವೇತನ ನೆರವಾಗಿ ಬರುತ್ತದೆ. ಶಾಲೆಗಳ ಮುಖ್ಯ ಶಿಕ್ಷಕರು ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗಳಿಗೆ ಮಕ್ಕಳ ದಾಖಲೆಯನ್ನು ತಕ್ಷಣವೇ ನೀಡಬೇಕು ಎಂದರು.

ಬ್ಯಾಂಕ್ ಸಂಖೆ ಮತ್ತು ಆಧಾರ ಸಂಖ್ಯೆ ಲಿಂಕ್ ಆಗದೆ ಇರುವ 2018ರಲ್ಲಿ 700 ಮಕ್ಕಳು ಹಾಗೂ 1920ನೇ ಸಾಲಿನ 800 ಮಕ್ಕಳು ಖಾತೆಗಳಿಗೆ ಆಧಾರ ಲಿಂಕ ಇರದೆ ಇರುವುದರಿಂದ ಶಿಷ್ಯ ವೇತನಕ್ಕೆ ವಿಳಂಬವಾಗಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಣವಿದೆ. ಆದರೆ ಆಧಾರ ಲಿಂಕ್ ಇಲ್ಲದೆ ಮಕ್ಕಳಿಗೆ ಹಣ ದೊರೆಯುತ್ತಿಲ್ಲ ಈ ಕೆಲಸ ತುರ್ತಾಗಿ ಕೈಗೊಳ್ಳಲಾಗುವುದು.