ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಶಾಲಾ ಸಂಸತ್ತು ರಚನೆ

ಚಿತ್ತಾಪುರ:ನ.30: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಸಾಮಾನ್ಯ ಜ್ಞಾನವನ್ನು ಹೆಚ್ಚಿನ ರೀತಿಯಲ್ಲಿ ಅಧ್ಯಯನ ಮಾಡಬೇಕಾದ ಅನಿವಾರ್ಯತೆ ಇರುವದರಿಂದ ಮಕ್ಕಳಿಗೆ ವಿವಿಧ ರೀತಿಯ ಚಟುವಟಿಕೆಗಳನ್ನು ಪ್ರಾಯೊಗಿಕವಾಗಿ ಮಾಡುವದರ ಮಾರ್ಗದರ್ಶನವನ್ನು ನೀಡಲಾಗುತ್ತಿದೆ ಎಂದು ಮುಖ್ಯಗುರು ವೀರಭದ್ರಪ್ಪ ಪಾಟೀಲ್ ಹೇಳಿದರು.

ಪಟ್ಟಣದ ಆಚಾರ್ಯ ಚಾಣಕ್ಯ ಶಿಕ್ಷಣ ಸಂಸ್ಥೆಯ ಗಾಯತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ರಚನೆ ಮಾಡಲಾದ ಶಾಲಾ ಸಂಸತ್ತನ್ನು ರಚನೆ ಮಾಡಿದ ನಂತರ ಮಾತನಾಡಿದ ಅವರು ಹಿಂದೆ ಎಲ್ಲಾ ಉರ್ತಿರ್ಣರಾದರೆ ಸಾಕು ಎನ್ನುವ ಪರಿಸ್ಥಿತಿ ಇತ್ತು ಆದರೆ ಈಗ ಎಲ್ಲಾ ರಂಗಗಳಲ್ಲೂ ಪೈಪೊಟಿ ಎದುರಾಗಿದ್ದು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಪೈಪೊಟಿ ಎದುರಾಗಿದ್ದು ಅಂತಹ ಪರಿಸ್ಥಿತಿಯ ಕುರಿತು ಸಿದ್ದತೆ ಮಾಡಬೇಕಾಗಿರುವದು ನಮ್ಮ ಕರ್ತವ್ಯವಾಗಿದೆ. ಹಾಗಾಗಿ ಶಾಲೆಯಲ್ಲಿ ಶಿಕ್ಷಣದ ಜೊತೆ ಸಾಮಾನ್ಯ ಜ್ಞಾನ, ವಿಜ್ಞಾನ ಕುರಿತಾದ ರಸಪ್ರಶ್ನೆ ಕಾರ್ಯಕ್ರಮಗಳು, ಕೀಡೆ ಹಾಗೂ ರಾಜಕೀಯವಾಗಿ ಅವರಿಗೆ ಮಾಹಿತಿ ಒದಗಿಸುವ ಉದ್ದೇಶದಿಂದ ಶಾಲಾ ಸಂಸತ್ತು ರಚನೆ ಮಾಡುವದರ ಮೂಲಕ ಪ್ರಾಯೊಗಿಕವಾಗಿ ಅವರಿಗೆ ಮಾಹಿತಿ ನೀಡುವದರ ಮೂಲಕ ಜ್ಞಾನ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಶಾಲಾ ಸಂಸತ್ತಿನ ಪದಾಧಿಕಾರಿಗಳು:
ರಾಜ್ಯಪಾಲರು: ರೇವಣಸಿದ್ದ ಮಲ್ಲಿಕಾರ್ಜುನ, ಮುಖ್ಯಮಂತ್ರಿಯಾಗಿ: ಕು. ಅಶೊಲ ಶಿವರಾಯಗೌಡ, ಉಪಮುಖ್ಯಮಂತ್ರಿಯಾಗಿ: ಭಾಗ್ಯಲಕ್ಷ್ಮಿ ದೇವಪ್ಪ, ಹಣಕಾಸು ಸಚಿವರಾಗಿ: ಸಹನಾ ರವಿಶಂಕರ, ಶಿಕ್ಷಣ ಸಚಿವರಾಗಿ: ಕಾರ್ತಿಕ ಚಂದ್ರಕಾಂತ, ನೀರಾವರಿ ಸಚಿವರಾಗಿ: ಈಶ್ವರಿ ಸಂತೊಷ, ಶ್ರೇಯಸ್ ಶಂಭುಲಿಂಗ, ಪರಿಸರ ಹಾಗೂ ನೈರ್ಮಲ್ಯ ಸಚಿವರಾಗಿ: ನಾಗೀಣಿ ಸಾಬಣ್ಣ, ಆರೊಗ್ಯ ಸಚಿವರಾಗಿ: ಅರಮಾನ ಅಬ್ದುಲ್ ಸಲೀಂ, ಆಹಾರ ಮತ್ತು ನಾಗರಿಕ ಹಾಗೂ ಪ್ರವಾಸೊದ್ಯಮ ಸಚಿವರಾಗಿ: ಆಕಾಶ ಮರೆಪ್ಪ, ಚೈತ್ರಾ ಬಸವರಾಜ, ಕ್ರೀಡಾ ಹಾಗೂ ಕನ್ನಡ ಮತ್ತು ಸಂಸ್ಕøತಿಕ ಸಚಿವರಾಗಿ: ನವೀನ್‍ಕುಮಾರ ಕಾಶಪ್ಪ, ಜ್ಯೋತಿ ಶಿವಯೊಗಪ್ಪ ಅವರನ್ನು ಆಯ್ಕೆ ಮಾಡಲಾಯಿತು ಎಂದು ಚುನಾವಣೆ ಅಧಿಕಾರಿ ಬಸವರಾಜ ಪಾಟೀಲ್ ತರನಳ್ಳಿ ತಿಳಿಸಿದರು.

ಮುಖ್ಯ ಚುನಾವಣಾಧಿಕಾರಿಯಾಗಿ ಸಹ ಶಿಕ್ಷಣ ಬಸವರಾಜ ಪಾಟೀಲ್ ತರನಳ್ಳಿ, ಸಹಾಯಕ ಚುನಾವಣಾಅಧಿಕಾರಿಯಾಗಿ: ವಿಷ್ಣುವರ್ಧನ ರೆಡ್ಡಿ, ವೀಕ್ಷಕರಾಗಿ ಸಹ ಶಿಕ್ಷಕರಾದ ಅನಿಲ್‍ಕುಮಾರ ಸನ್ಮುಕ್, ವೀರೇಶ ಮಕಾಪ, ಭೀಮಪ್ಪ ದಂಡು, ವಿಜಯಲಕ್ಷ್ಮೀ ಸ್ವಾದಿ ಕಾರ್ಯನಿರ್ವಹಿಸಿದರು.
ರಾಜ್ಯಪಾಲರಿಗೆ ಮುಖ್ಯಗುರುಗಳು ಪ್ರಮಾಣ ವಚನ ಬೊದಿಸಿದರು. ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರುಗಳಿಗೆ ರಾಜ್ಯಪಾಲರು ಪ್ರಮಾಣವಚನ ಬೊದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಭದ್ರಪ್ಪ ಪಾಟೀಲ್ ವಹಿಸಿದ್ದರು.