ಶಾಲೆಯಲ್ಲಿ ಪರಿಸರ ದಿನಾಚರಣೆ

ಚಾಮರಾಜನಗರ, ಜೂ.06- ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಪರಿಸರ ಮಿತ್ರ ಪ್ರಶಸ್ತಿ ಪಡೆದ ಕಾಡಂಚಿನ ಗ್ರಾಮದಲ್ಲಿರುವ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕ ಮಹದೇಶ್ವರಸ್ವಾಮಿ ಅವರು ಖುದ್ದು ಗಿಡಗಳಿಗೆ ನೀರು ಹಾಲಿ ಪೆÇೀಷಿಸುವ ಹವ್ಯಾಸ ಇಟ್ಟುಕೊಂಡಿದ್ದು ಇವರ ಕ್ರಿಯಾಶೀಲತೆ ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಈಗಾಗಲೇ ಪರಿಸರ ಮಿತ್ರ ಶಾಲೆ ಎಂಬ ಹೆಗ್ಗಳಿಕೆ ಗಳಿಸಿದೆ. ಶಾಲಾ ಪರಿಸರ ಅತ್ಯುತ್ತಮವಾಗಿದೆ. ವಿವಿಧ ಬಗೆಯ ಹೂ ಗಿಡಗಳು, ನೆರಳು ಕೊಡುವ ಮರಗಳು, ಸೊಪ್ಪು, ತರಕಾರಿ ಗಿಡಗಳು ಸೇರಿದಂತೆ ವೈವಿಧ್ಯಮಯ ಸುಂದರ ಉದ್ಯಾನವನವು ಎಲ್ಲರನ್ನು ಸ್ವಾಗತಿಸುತ್ತಿದೆ.