ಶಾಲೆಗೆ ಹಾಜರಾಗದ ಶಿಕ್ಷಕರ ವಿರುದ್ದ ಕ್ರಮ:ಬಿಇಓ

ಅರಸೀಕೆರೆ, ಜು. ೨೧- ತಾಲ್ಲೂಕಿನಲ್ಲಿ ಬೆರಳೆಣಿಕೆಯಷ್ಟು ಶಿಕ್ಷಕರು ಶಾಲೆಗೆ ಹೋಗುತ್ತಿಲ್ಲ ಎಂಬುದನ್ನು ಗಮನಿಸಿದ್ದೇನೆ. ಇವರುಗಳು ಸಂಘದವರೇ ಆಗಿರಲಿ, ಸಾಮಾನ್ಯ ಶಿಕ್ಷಕರೇ ಆಗಿರಲಿ ತರಗತಿಯಲ್ಲಿರುವಂತೆ ತಾವು ಗಮನ ಹರಿಸುವುದಾಗಿ ನೂತನ ಬಿಇಓ ಮೋಹನ್‌ಕುಮಾರ್ ಹೇಳಿದರು.
ಶಿಕ್ಷಕರು ಅಭಿನಂದಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲ್ಲೂಕಿನಾದ್ಯಂತ ಶಾಲಾ ಶಿಕ್ಷಕರ ಸೇವಾ ಪುಸ್ತಕದಲ್ಲಿ ನಮೂದಾಗಬೇಕಾದ ರಜೆ ಹಾಗೂ ಇತರೆ ಕುರಿತಂತೆ ನಮೂದು ಆಗಿದೆಯೇ ಎಂಬುದನ್ನು ಶಿಕ್ಷಕರು ತಮ್ಮ ಸೇವಾ ಪುಸ್ತಕ ನೋಡಿಕೊಳ್ಳುವ ಸಲುವಾಗಿ ಗುರು ಸ್ಪಂದನಾ ಕಾರ್ಯಕ್ರಮದಡಿ ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು.
ಶಿಕ್ಷರಿಗೆ ತರಬೇತಿ ಹಾಗೂ ಇತರ ಸಂದರ್ಭದಲ್ಲಿ ಸಿಗುವ ರಜೆ ಸೌಲಭ್ಯಗಳು ಸೇವಾ ಪುಸ್ತಕದಲ್ಲಿ ನಮೂದಾಗಿದೆಯೇ, ಗಳಿಕೆ ರಜೆ ಇತರ ದಾಖಲೆಗಳು ನಮೂದಾಗಿರಬೇಕು. ಒಂದು ವೇಳೆ ಏನಾದರೂ ಸೇರ್ಪಡೆಯಾಗಬೇಕಿದ್ದಲ್ಲಿ ಸರಿಪಡಿಸುವ ಸಲುವಾಗಿಯೇ ಗುರು ಸ್ಪಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.
ಗಂಡಸಿ, ಜಾವಗಲ್, ಬಾಣಾವರ, ಕಸಬ ೨, ಶಾಲಾ ಶಿಕ್ಷಕರ ಸೇವಾ ಪುಸ್ತಕ ಪರಿಶೀಲನೆ ಕಾರ್ಯ ಆಗಬೇಕಿದೆ. ನನಗೆ ಸ್ವಲ್ಪ ಕಾಲಾವಕಾಶ ನೀಡಿ ಎಂದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಉಪಾಧ್ಯಕ್ಷ ಸಿ.ಬಿ.ಕುಮಾರ್, ನಿರ್ದೇಶಕರುಗಳಾದ ರಘು, ಸೋಮಶೇಖರ್, ಶಿಕ್ಷಕರುಗಳಾದ ಚನ್ನೇಗೌಡ, ಎನ್.ಜಿ.ಓ. ಮಾಜಿ ನಿರ್ದೇಶಕ ಶೇಖರ್, ಸುರೇಶ್, ಪ್ರಸನ್ನ, ರಾಮಚಂದ್ರಪ್ಪ. ಪ್ರಭುದೇವ್, ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.