ಶಾಲೆಗೆ ಸಹಕಾರ ನೀಡುವುದೇ ನಮ್ಮ ಉದ್ದೇಶ- ಡಾ.ರೋಹಿತ್


ಸಂಜೆವಾಣಿ ವಾರ್ತೆ
ಕುರುಗೋಡು.ಜು. 20:  ಪಟ್ಟಣದ ಸಿಂದಿಗೇರಿ ರಸ್ತೆಯಲ್ಲಿನ ಶ್ರೀದೊಡ್ಡಬಸವೇಶ್ವರ ಬುದ್ದಿಮಾಂದ್ಯಮ ವಿಶೇಷ ಮಕ್ಕಳ ಶಾಲೆಗೆ ಮಹಾರಾಷ್ರದ ನಾಗಪುರ  ರೋಟಿ ಪೌಂಡೇಷನ್ ಸಂಸ್ಥೆಯ ಅದ್ಯಕ್ಷ ಡಾ. ರೋಹಿತ್‍ಮಾಡೇವಾರ್ ಹಾಗು ಅವರ ತಂಡ ಶಾಲೆಗೆ ಬೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ಈಗಾಗಲೇ ರೋಟಿ ಪೌಂಡೇಶನ್ ವತಿಯಿಂದ ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತಿಸ್‍ಘಡ್ ರಾಜ್ಯಗಳಲ್ಲಿನ ಎನ್‍ಜಿಓ ಸಂಸ್ಥೆಗಳಿಗೆ ಸಹಕಾರ ನೀಡುತ್ತಿದ್ದು, ಇನ್ನೂ ಕರ್ನಾಟಕ ಮತ್ತು ಅಂದ್ರಪ್ರದೇಶ ರಾಜ್ಯಗಳಲ್ಲಿನ ಸಂಸ್ಥೆಗಳಿಗೆ ಸಹಕಾರ ಸಲ್ಲಿಸಲು ಸಿದ್ದರಿದ್ದೇವೆ. ಹಾಗಾಗಿ ಈ ಎರಡು ರಾಜ್ಯಗಳಲ್ಲಿನ ಕ್ರಿಯಾಶೀಲ ಚಟುವಟಿಕೆಯಲ್ಲಿನ ಸಂಸ್ಥೆಗಳನ್ನು ಗುರುತಿಸಿ ನಂತರ ಸಹಕಾರ ಮಾಡುತ್ತಾ ದೇಶದಲ್ಲಿ ಬಡಜನ ನಿರ್ಮೂಲನ ಮಾಡಲು ಮುಂದಾಗಿದ್ದೇವೆ. ಜೊತೆಗೆ ಬಿದಿಬದಿಯ ಜನರಿಗೆ ಊಟ, ವಸತಿ, ನೀಡುತ್ತಿದ್ದು, ಬಡಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇವೆ. ಮಹಾರಾಷ್ಟ್ರದಲ್ಲಿ 5 ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡುತ್ತಿದ್ದೇವೆ. ಹಾಗಾಗಿ ಇಂದು ಕುರುಗೋಡಿನ ಬುದ್ದಿ ಮಾಂದ್ಯ ಮಕ್ಕಳ ಶಾಲೆಗೆ ಬೇಟಿ ನೀಡಿದ್ದೇವೆ. ಇಲ್ಲಿ ಇಂತಹ ಮಕ್ಕಳನ್ನು ನಿರ್ವಹಣೆ ಮಾಡಿ ಅವರಿಗೆ ಶಿಕ್ಷಣ, ಊಟ ನೀಡುತ್ತಿರುವುದು ಸಾಮಾನ್ಯ ಕಾರ್ಯವಲ್ಲ. ಈ ಸ್ಮೈಲ್ ಸಂಸ್ಥೆಗೆ ನಮ್ಮ ಪೌಂಡೇಶನ್ ವತಿಯಿಂದ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು. ನಂತರ ಬುದ್ದಿ ಮಾಂದ್ಯ ಮಕ್ಕಳನ್ನು ಮಾತನಾಡಿಸಿ ಶುಭಹಾರೈಸಿದರು.
ಸ್ಮೈಲ್ ಸಂಸ್ಥೆಯ ಕಾರ್ಯದರ್ಶಿ ಕೆಎಂ.ಉಮಾಪತಿಗೌಡ ಮಾತನಾಡಿ, ಬುದ್ದಿ ಮಾಂದ್ಯ ಮಕ್ಕಳು ಹಾಗಾ ಆನಾಥರ ಸೇವೆಗಾಗಿ ನಿರಂತರ ಸೇವೆ ಸಲ್ಲಿಸುತ್ತಿದ್ದೇವೆ. ರೋಟಿ ಪೌಂಡೇಶನ್ ಸಹಕಾರ ನೀಡಿದರೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಅಂದ್ರ ಪ್ರದೇಶದ ರೀಡೋ ಸಂಸ್ಥೆಯ ಅಧ್ಯಕ್ಷ ಈಶ್ವರಯ್ಯ , ಕುಷ್ಟಗಿ ಸಮೃದ್ಧಿ ಸಂಸ್ಥೆಯ ಕಾರ್ಯದರ್ಶಿ ನಬಿಸಾಬ್,  ಸಮಾಜ ಸೇವಕ ಕುಷ್ಟಗಿ ಮೋಹನ್‍ಲಾಲ್ ಜೈನ್, ಸಮೃದ್ಧಿ ಸಂಸ್ಥೆಯ ಸಂಯೋಜಕ ಅಬ್ದುಲ್ ಕಲಾಂ,  ಬುಡುಗಜಂಗಮರಾಮು,  ಬುದ್ದಿ ಮಾಕ್ಕಳ ಶಾಲೆಯ ಮುಖ್ಯಗುರು, ಗೀತಾಫಣಿರಾಜ್,  ಶಿಕ್ಷಕರು, ಸಿಬ್ಬಂದಿಗಳು ಹಾಗೂ 60 ಬುದ್ದಿ ಮಾಂದ್ಯ ಮಕ್ಕಳು ಉಪಸ್ಥಿತರಿದ್ದರು.ರಾಜಾಸಾಬ್ ಸ್ವಾಗತಿಸಿ, ವಂದಿಸಿದರು.