ಶಾಲೆಗೆ ರಜೆ:ಮಕ್ಕಳು ಕೂಲಿ ಕೆಲಸಕ್ಕೆ

ಗಬ್ಬೂರು (ರಾಯಚೂರು ಜಿಲ್ಲೆ):-ಕೊರೋನಾ ಹಾವಳಿ ಕಾರಣ ಶಾಲೆಗಳಿಗೆ ರಜೆ ನೀಡಿದ್ದರಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ಮಕ್ಕಳು ಹತ್ತಿ ಬಿಡಿಸಲು ತಮ್ಮ ಪಾಲಕರ ಜೋತೆ ಟಂ ಟಂ ಗಳಲ್ಲಿ ತೆರಳುವುದು ಸಾಮಾನ್ಯವಾಗಿದೆ. ‘ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದೇವೆ. ಹತ್ತಿ ಬಿಡಿಸುವ ಕೂಲಿ ಕೆಲಸಕ್ಕೆ ನಮ್ಮ ಜೋತೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದೇವೆ. ದಿನಕ್ಕೆ ₹ 150 ಕೂಲಿ ಕೊಡುತ್ತಾರೆ. ದೂರದ ಜಮೀನುಗಳಿಗೆ ರೈತರು ಟಂ ಟಂ ವಾಹನಗಳಲ್ಲಿ ನಮ್ಮನ್ನು ಕರೆದೊಯ್ಯುತ್ತಾರೆ’ ಎಂದು ಮಹಿಳೆಯೊಬ್ಬರು ಹೇಳಿದರು. ‘ಹತ್ತಿಯನ್ನು ಬಿಡಿಸುವುದು ಹಗುರವಾದ ಕೆಲಸ. ಹೀಗಾಗಿ ಮಕ್ಕಳಿಗೆ ಇದು ಹೊರೆ ಅಲ್ಲ’ ಎಂದೂ ಆ ಮಹಿಳೆ ಹೇಳಿದರು.