ಶಾಲೆಗೆ ಮಕ್ಕಳನ್ನು ಶಿಕ್ಷಕರು ಬರ ಮಾಡಿಕೊಂಡ ಕ್ಷಣ


ಸಂಜೆವಾಣಿ ವಾರ್ತೆ
ಸಂಡೂರು :ಜು:1: ತಾಲ್ಲೂಕಿನ ಜಿ.ಎಚ್.ಪಿ.ಎಸ್. ಅಂಕಮನಾಳ್ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾರಾಯಣಪುರ ಗ್ರಾಮದಲ್ಲಿ 2023-24ನೇ ಸಾಲಿನ ಪ್ರಾರಂಭೋತ್ಸವ ಬಹುತೇಕ ಸಂಡೂರು ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಪ್ರೌಢಶಾಲೆಗಳಲಿ ಗ್ರಾಮಸ್ಥರನ್ನೊಳಗೊಂಡು ಎಸ್.ಡಿ.ಎಂ.ಸಿ. ಸದಸ್ಯರು ಅಡುಗೆ ಸಿಬ್ಬಂದಿಗಳು ಶಿಕ್ಷಕ ವರ್ಗದವರ ಉಪಸ್ಥಿತಿಯ್ಲಿ ಎಲ್ಲಾ ಮಕ್ಕಳಿಗೆ ಸಿಹಿ ಹಂಚಿ ಸಿಹಿ ಊಟ ಬಡಿಸಿ ಬರಮಾಡಿಕೊಂಡ ಕ್ಷಣದ ನೆನಪುಗಳು ಎಲ್ಲರನ್ನ ವಿಸ್ಮಯಗೊಳಿಸಿತು.
ತಾಲ್ಲೂಕಿನಲ್ಲಿ ಸರ್ಕಾರಿ ಅನುದಾನಿತ / ಅನುದಾನರಹಿತ ಒಟ್ಟು 263 ಪ್ರಾಥಮಿಕ ಪ್ರೌಢಶಾಲೆಗಳಿದ್ದು, ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಗಳಲ್ಲಿ ಒಟ್ಟು ಮಂಜೂರಾದ ಹುದ್ದೆಗಳ ಸಂಖ್ಯೆ 1004 ಕಾರ್ಯ ನಿವ್ಹಿಸುತ್ತಿರುವ ಹುದ್ದೆಗಳ ಸಂಖ್ಗಯೆ 539 ಖಾಲಿ ಹುದ್ದೆಗಳ ಸಂಖ್ಯೆ 465 ಸರ್ಕಾರಿ ಪ್ರೌಢಶಾಲೆಗಳಲ್ಲಿ ಮಂಜೂರಾದ ಹುದ್ದೆಗಳ ಸಂಖ್ಯೆ 227 ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳ ಸಂಖ್ಯೆ 136 ಈಗಾಗಲೇ ಸರ್ಕಾರದಿಂದ ಮಂಜೂರಾದ ಪ್ರಾಥಮಿಕ ಶಾಲಾ ಅತಿಥಿಗಳ ಶಿಕ್ಷಕರ ಸಂಖ್ಯೆ 45 ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಈ. ತುಕರಾಂ ರವರು ಡಿ.ಎಂ.ಎಫ್. ಅನುದಾನದಲ್ಲಿ 170 ಶಿಕ್ಷಕರನ್ನು ನೀಡುವುದಾಗಿ ತಿಳಿಸಿದ್ದಾರೆ.
ಯಾವುದೇ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇಲಲದಂತೆ ತಾಲ್ಲೂಕಿನ ಎಲ್ಲಾ ವಿದ್ಯಾರ್ಥೀಗಳಿ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುವುದು ಎಂದು ತಿಳಿಸಿದರು. ಸಂಡೂರು ತಾಲ್ಲೂಕಿನಲ್ಲಿ ಶಾಲಾ ಪ್ರಾಋಂಭೋತ್ಸವ ನಡೆದಿದ್ದು, ಎಲ್ಲಾ ಶಾಲೆಗಳಲಿ ತಳಿರು ತೋರಣಗಳಿಂದ ಸಿಂಗಿರಿಸಿ ಎತ್ತಿನ ಗಾಡಿಯಲ್ಲಿ ಶಾಲೆಗೆ ಕರೆ ತರಲಾಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷರು, ಮುಖ್ಯ ಗುರುಗಳು ಹಾಗೂ ಶಿಕ್ಷಕ ವೃಂದ ಮಕ್ಕಳಿಗೆ ಹೂವನ್ನು ನಿಡುವುದರ ಂಉಲಕ ಸ್ವಾಗತಿಸಲಾಯಿತು ಸಂಡೂರಿನ ತಾ.ಪಂ. ನಡೆದ ಸಾಮಾನ್ಯ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಪಠ್ಯ ಪುಸ್ತಕಗಳನ್ನು ಶಾಸಕ ಈ. ತುಕರಾಂ ರವರು ವಿತರಿಸಿದರು ಎಂದು ಕ್ಷೇತ್ರ ಶಿಕ್ಷಣಾಧಿಕರಿ ಮೈಲೇಶ್ ಬೇವುರವರು ಪ್ರಕಟಣೆಯಲ್ಲಿ ತಿಳೀಸಿದಾರೆ. ಈ ಸಂದರ್ಭದಲ್ಲಿ ತಾ.ಪಂ. ಕರ್ಯನಿರ್ವಾಹಕ ಆಧಿಕಾರಿ ಎಚ್. ಷಡಾಕ್ಷಕರಿ ಇ.ಸಿ. ಓ ಬಸವರಾಜ ಶರಣಬಸಪ್ಪ ಕರಿಶೆಟ್ಟಿ ಅಲ್ಲದೇ ಹಲವಾರು ಮಹಾನೀಯರು ಈ ಸಂದರ್ಬದಲ್ಲಿ ಉಪಸ್ಥಿತರಿದ್ದರು.