ಇಂಡಿ:ಜೂ.9:ಜನತೆಯಲ್ಲಿ ದೇಶಪ್ರೇಮ, ಸೇವಾ ಮನೋಭಾವ ಹಾಗೂ ಸಂಸ್ಕøತಿ, ಪರಂಪರೆ, ಧರ್ಮ, ಆಚಾರ, ವಿಚಾರಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಯುವ ಬ್ರೀಗೇಡ ಕಾರ್ಯ ಶ್ಲಾಘನೀಯ ಎಂದು ಯುವ ಬ್ರೀಗೇಡದ ಪೆಂಟರ ಜಟ್ಟೆಪ್ಪ ಮ್ಯಾಕೇರಿ ಹೇಳಿದರು.
ತಾಲೂಕಿನ ಅಥರ್ಗಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಯಂತಿ ನಗರದ ಶಾಲೆಗೆ ಸುಣ್ಣ ಬಣ್ಣ ಹಚ್ಚುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವರಾಜ ಮ್ಯಾಕೇರಿ ಮಾತನಾಡಿ ಯುವ ಬ್ರೀಗೇಡ ನಿರಂತರವಾಗಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೊಸತನವನ್ನು ಹುಟ್ಟು ಹಾಕುವ ಮೂಲಕ ಜನಮಾನಸದಲ್ಲಿ ಉಳಿದುಕೊಂಡಿದೆ ಎಂದರು.
ಯುವ ಬ್ರೀಗೇಡ ವಿಭಾಗ ಸಹ ಸಂಚಾಲಕ ರಾಜು ಪಾಟೀಲ,ಜಿಲ್ಲಾ ಸಂಚಾಲಕ ಶಿವು ಕಾಟಕರ,ಮಡಿವಾಳ ವಾಲಿಕಾರ,ಸಂತೋಷ ಬಿಂಗಾರಿ,ಲಿಂಗರಾಜ ಪಾಟೀಲ,ಸಿದ್ದು ಬಿರಾದಾರ,ಪರಶುರಾಮ ಬಜಂತ್ರಿ,ರುದ್ರಗೌಡ ಸೂರಪ್ಪಗೋಳ,ಮಹೇಶ ಮೊಸಲಗಿ,ಆರೀಫ್ ವಾಲಿಕಾರ,ಹಣಮಂತ ಮಾದರ ಶಾಲೆಯ ಎಸ್.ಡಿ.ಎಂ.ಸಿಯ ಅಧ್ಯಕ್ಷ ಈರಣ್ಣ ಹಾವಿನಾಳ,ರಮೇಶ ಧಾರೆಕರ,ಮುಖ್ಯ ಗುರುಗಳಾದ ಬಿ.ಸಿ.ಎಂಟಮನ ಮತ್ತಿತರಿದ್ದರು.