
ಬಂಗಾರಪೇಟೆ, ಸೆ.೫- ಮಕ್ಕಳಲ್ಲಿರುವಂತಹ ದೈಹಿಕ ಶ್ರಮತೆ ಹಾಗೂ ಕ್ರೀಡಾ ನೈಪುಣ್ಯತೆಯನ್ನು ಹೊರಹಾಕುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಆಯೋಜಿಸಿದ್ದ, ಕೀಡಾಕೂಟದಲ್ಲಿ ದೊಡ್ಡಚಿನ್ನಹಳ್ಳಿ ಗ್ರಾಮದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಮೇಲುಗೈ ಸಾಧಿಸುವುದರ ಮೂಲಕ ಶಾಲೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ.
ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸರ್ಕಾರಿ ಪ್ರೌಢಶಾಲೆ ದೊಡ್ಡಚಿನ್ನಹಳ್ಳಿ ಶಾಲಾ ಮಕ್ಕಳಾದ ಸ್ಫೂರ್ತಿ ೮೦೦ ಮೀ ಓಟ ಹಾಗೂ ಹರ್ಡಲ್ಸ್ ೧೧೦ ಮೀ ಓಟದಲ್ಲಿ ಪ್ರಥಮ, ೧೫೦೦ ಮೀ, ೩೦೦೦ ಮೀ ಓಟದಲ್ಲಿ ವೈಶಾಲಿ.ವಿ ಪ್ರಥಮ, ೧೫೦೦ ಮೀ ೮೦೦ ಮೀ ಓಟದಲ್ಲಿ ಮಹೇಶ್ ಕುಮಾರ್.ಸಿ ಪ್ರಥಮ, ಗುಂಡು ಹಾಗೂ ಹ್ಯಾಮರ್ ಎಸೆತದಲ್ಲಿ ಪ್ರವೀಣ್ ಕುಮಾರ್.ಯು ಪ್ರಥಮ, ಬಾಲಕಿಯರ ೪*೧೦೦ ರಿಲೇ ಓಟದಲ್ಲಿ ಸ್ಫೂರ್ತಿ, ಬೃಂದಾ, ಪ್ರಾರ್ಥನ ಮತ್ತು ಅಂಕಿತ ಅವರು ಪ್ರಥಮ ಸ್ಥಾನವನ್ನು ಹಾಗೂ ಬಾಲು.ಆರ್ ೩೦೦೦ಮೀ ಓಟದಲ್ಲಿ ತೃತೀಯ ಚೆಸ್‌ಸ್ಪರ್ದೆಯಲ್ಲಿ ಸುಹಾಸ್ ಮತ್ತು ಭಾರ್ಗವ ರವರು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. ವಿಜೇತರಾದ ಮಕ್ಕಳನ್ನು ಶಾಲೆಯ ಮುಖ್ಯಶಿಕ್ಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷಕರು ಮತ್ತು ಸದಸ್ಯರು, ಶಿಕ್ಷಕರು ಮತ್ತು ಮಕ್ಕಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರು ಮಕ್ಕಳನ್ನು ಅಭಿನಂದಿಸಿದ್ದಾರೆ.