ಬೆಂಗಳೂರು,ಮೇ.೩೦-ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ, ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾ ಶಾಲೆಗೆ ಕಾಲಿಟ್ಟಿದ್ದಾರೆ. ಈ ಕುರಿತಾಗಿ ನಟಿ ಮೇಘನಾ ರಾಜ್, ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಚಿರಂಜೀವಿ ಸರ್ಜಾ ಅಗಲಿಕೆಯ ನಂತರ ಮಗನ ಆರೈಕೆಯಲ್ಲಿ ತನ್ನ ನೋವನೆಲ್ಲಾ ಮರೆಯಲು ನಟಿ ಮೇಘನಾ ಪ್ರಯತ್ನಿಸುತ್ತಿದ್ದಾರೆ. ಮಗನ ಖುಷಿಯಲ್ಲಿ ತನ್ನ ಖುಷಿಯನ್ನ ಕಾಣುತ್ತಿದ್ದಾರೆ. ಹೀಗಿರುವಾಗ ಪುತ್ರ ರಾಯನ್ ಶಾಲೆಗೆ ಸೇರುತ್ತಿರುವ ಬಗ್ಗೆ ನಟಿ ಪೋಸ್ಟ್ ಶೇರ್ ಮಾಡಿದ್ದಾರೆ.
ನಾವು ಪೋಷಕರಾದ ಮೇಲೆ ಮಕ್ಕಳು ಮಾತ್ರವಲ್ಲ ನಾವು ಕೂಡ ಜೀವನದ ಪ್ರತಿಯೊಂದು ಮೈಲಿಗಲ್ಲು ದಾಟುತ್ತೀವಿ ಎಂದು ಮೇಘನಾ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇಂದು ನಮ್ಮ ಜೀವನದ ತುಂಬಾ ವಿಶೇಷವಾದ ದಿನ. ರಾಯನ್ ರಾಜ್ ಸರ್ಜಾಗೆ ಇಂದು ಮೊದಲ ಬಾರಿಗೆ ಸ್ಕೂಲಿಗೆ ಪ್ರವೇಶ ಪಡೆಯುತ್ತಿದ್ದಾನೆ. ನನ್ನ ಭಾವನೆಗಳನ್ನು ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ. ವಿದ್ಯಾಭ್ಯಾಸ, ಜ್ಞಾನ ಹಾಗೂ ಜೀವನದ ಅತಿ ಅಮೂಲ್ಯವಾದ ಪಾಠಗಳನ್ನು ಕಲಿಯುವುದ್ದಕ್ಕೆ ರಾಯನ್ ಮೊದಲ ಹೆಜ್ಜೆ ಇಡುತ್ತಿದ್ದಾನೆ. ನಿಮ್ಮ ಹಾರೈಕೆ ಮತ್ತು ಪ್ರೀತಿ ಅವನ ಮೇಲಿರಲಿ ಎಂದು ಮೇಘನಾ ರಾಜ್ ಹೇಳಿದ್ದಾರೆ.