ಶಾಲೆಗಳ ಬಲವರ್ಧನೆಗೆ ಬಳಗದ ಸಂಕಲ್ಪ

ಕೋಲಾರ,ಸೆ,೩:ಸರ್ಕಾರಿ ಶಾಲೆಗಳ ಬಲವರ್ಧನೆ, ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುವ ಸಂಕಲ್ಪದೊಂದಿಗೆ ಶಿಕ್ಷಕ ಗೆಳೆಯರ ಬಳಗ ಕೆಲಸ ಮಾಡುತ್ತಿದೆ ಎಂದು ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್ ನಾರಾಯಣಸ್ವಾಮಿ ತಿಳಿಸಿದರು.
ಶಿಕ್ಷಕ ಗೆಳೆಯರ ಬಳಗದ ಕಚೇರಿಯಲ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಗೋವಿಂದ ಅವರನ್ನು ಬಳಗದ ಸಹಕಾರಿದರ್ಶಿಯಾಗಿ ನೇಮಕದೊಂದಿಗೆ ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಕ ಗೆಳೆಯರ ಬಳಗ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದೆ, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಕಾರ್ಯಕ್ರಮ ರೂಪಿಸಿದೆ, ಅನೇಕ ದಾನಿಗಳನ್ನು ಹಿಡಿದು ಶಾಲೆಗಳ ಪ್ರಗತಿಗೆ ನಿಸ್ವಾರ್ಥವಾಗಿ ದುಡಿಯುತ್ತಿದೆ ಎಂದರು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿ ತಾಲೂಕಿನ ೧೦೦ ಶಾಲೆಗಳಿಗೆ ರೋಟರಿ ಸಂಸ್ಥೆಯಿಂದ ಸುಣ್ಣ ಬಣ್ಣವನ್ನು ಬಳಸಿ ಉತ್ತಮ ಸೇವೆಯ ಮೂಲಕ ಹೆಸರು ಮಾಡಿರುವ ಸಿಆರ್‌ಪಿ ಗೋವಿಂದ ಅವರು ಸಹ ಶಾಲೆಗಳ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದು ಗೆಳೆಯರ ಬಳಗದಲ್ಲಿ ತಮ್ಮನ್ನು ಈಗಾಗಲೇ ತೊಡಗಿಸಿಕೊಂಡಿರುವುದಾಗಿ ನುಡಿದರು.
ಬಳಗದ ಕಾರ್ಯಚಟುವಟಿಕೆಗಳಿಗೆ ಅವರ ಸೇವೆಯನ್ನು ಪಡೆಯುವ ಉದ್ದೇಶದಿಮದ ಬಳಗದ ಸಹ ಕಾರ್ಯದರ್ಶಿಯಾಗಿ ನೇಮಿಸಿಕೊಳ್ಳಲಾಗಿದೆ ಎಂದು ತಿಳಿಸಿ, ಮಕ್ಕಳಿಗೆ ಅಗತ್ಯವಾಗಿದ್ದ ಪುಸ್ತಕ, ಬ್ಯಾಗು, ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್ ಗಳನ್ನು ನೀಡಿದ್ದು ಕೆಲವು ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಗಳನ್ನು ಪ್ರಾರಂಭಿಸಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಶಾಲೆಗಳ ಅಭಿವೃದ್ಧಿಯಲ್ಲಿ ಸಂಘಟನೆಯನ್ನು ಬಲಪಡಿಸುವ ಅಗತ್ಯವಿದೆ ಈಗಾಗಲೇ ಹೋಬಳಿ ಮಟ್ಟದಲ್ಲಿ ಹೋಬಳಿ ಕಾರ್ಯದರ್ಶಿಗಳನ್ನು ಈಗಾಗಲೇ ನೇಮಿಸಿದ್ದು ಅವರು ತಮ್ಮ ಹೋಬಳಿಗಳಲ್ಲಿ ಶಾಲೆಗಳಿಗೆ ಅಗತ್ಯವಾಗಿರುವ ಮಾಹಿತಿಯನ್ನು ನೀಡುತ್ತಿದ್ದಾರೆ ಇದೇ ರೀತಿ ತಾಲೂಕಿನ ಅತ್ಯಂತ ಎಲ್ಲಾ ಶಿಕ್ಷಕರನ್ನು ಸಂಘಟಿಸಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಮತ್ತು ಶಾಲೆಗಳ ಅಭಿವೃದ್ಧಿಯಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಗೌರವಾಧ್ಯಕ್ಷ ಆರ್ ಶ್ರೀನಿವಾಸನ್ ಕಾರ್ಯದರ್ಶಿ ವೆಂಕಟಾಚಲಪತಿ ಗೌಡ ಖಜಾಂಚಿ ಚಂದ್ರಪ್ಪ ಸಹಕಾರಿದರ್ಶಿಗಳು ವೆಂಕಟರಾಮ್ ಸೋಮಶೇಖರ್ ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಚಿಕ್ಕಣ್ಣ ಮುಂತಾದವರು ಉಪಸ್ಥಿತರಿದ್ದರು.