ಶಾಲೆಗಳ ಪ್ರಾರಂಭೋತ್ಸವ

ಲಕ್ಷ್ಮೇಶ್ವರ,ಜೂ1: ತಾಲೂಕಿನಾದ್ಯಂತ ಬುಧವಾರ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭ ಅತ್ಯಂತ ಸಡಗರ ಸಂಭ್ರಮದಿಂದ ಶಾಲೆಗಳು ಆರಂಭಗೊಂಡವು.
ತಾಲೂಕಿನಾದ್ಯಂತ ಸರ್ಕಾರಿ ಅನುದಾನಿತ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾರಂಭೋತ್ಸವವನ್ನು ಆಚರಿಸಲಾಯಿತು. ಪಟ್ಟಣದ ಸರ್ಕಾರಿ ನಾಲ್ಕನೇ ನಂಬರ್ ಶಾಲೆಯಲ್ಲಿ ಶಾಸಕ ಡಾಕ್ಟರ್ ಚಂದ್ರು ಲಮಾಣಿ ಅವರು ತಮಟೆ ಬಾರಿಸುವ ಮೂಲಕ ನಮ್ಮ ನಡೆ ಶಾಲೆಯ ಕಡೆ ವಿಶೇಷ ಜಾತಕೆ ಚಾಲನೆ ನೀಡಿದರು.
ಶಾಸಕರು ಮಕ್ಕಳಿಗೆ ಸಿಹಿಹಂಚಿ ಹೂಗಳನ್ನು ನೀಡಿ ಆತ್ಮೀಯತೆಯಿಂದ ಮಕ್ಕಳನ್ನು ಬರಮಾಡಿಕೊಂಡರು ಬಳಿಕ ಮಾತನಾಡಿದ ಶಾಸಕ ಚಂದ್ರು ಲಮಾಣಿ ಅವರು ಕಳೆದ ಎರಡು ವರ್ಷಗಳಿಂದ ಶಿಕ್ಷಣ ಕ್ಷೇತ್ರ ಕೋವಿಡ್ ಪರಿಣಾಮವಾಗಿ ಹಿನ್ನಡೆ ಅನುಭವಿಸಿತ್ತು ಈಗ ಕೋವಿಡ್ ಮುಕ್ತವಾಗಿದ್ದು ಸರ್ಕಾರಿ ಶಾಲೆಗಳಲ್ಲಿ ಅನುಭವಿ ಶಿಕ್ಷಕರು ಸೌಲಭ್ಯಗಳು ಇದ್ದು ಪಾಲಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸುವಂತೆ ಮನವಿ ಮಾಡಿದರಲ್ಲವೇ ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ಪಡೆಯಬೇಕು ಎಂದರು.
ಶಾಸಕರು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸರ್ಕಾರ ನೀಡಿದ ಸೌಲಭ್ಯಗಳಾದ ಉಚಿತ ಪುಸ್ತಕ ಶಾಲಾ ಸಮವಸ್ತ್ರಗಳನ್ನು ವಿತರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿಎಂ ಮುಂದಿನ ಮನೆಯವರು ಮಾತನಾಡಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅತ್ಯಂತ ಸಂಭ್ರಮದ ಚಾಲನೆ ದೊರಕಿದೆ ಎಂದರು.
ಸಮೂಹ ಸಂಪನ್ಮೂಲ ಕೇಂದ್ರದ ಈಶ್ವರ ಮೆಡ್ಲೇರಿಯವರು ಪ್ರಾಸ್ತಾನಿಕವಾಗಿ ಮಾತನಾಡಿ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸದಸ್ಯರುಗಳಾದ ಮಹೇಶ ಹೊಗೆಸೊಪ್ಪಿನ ಬಸವರಾಜ್ ಓದುನವರ ಪ್ರವೀಣ್ ಬಾಳಿಕಾಯಿ ಎಮ್ ಬಿ ಹೊಸಮನಿ ಎಸ್ ಡಿ ಎಮ್ ಸಿ ಅಧ್ಯಕ್ಷರು ಸದಸ್ಯರು ಸಿಬ್ಬಂದಿ ವರ್ಗದವರು ಸೇರಿದಂತೆ ಮುಖಂಡರುಗಳು ಭಾಗವಹಿಸಿದ್ದರು.